ತೆಂಕನಿಡಿಯೂರು: ಪಾದೂರು ಜನ್ಮಶತಮಾನೋತ್ಸವ ವಿಚಾರಸಂಕಿರಣ

| Published : Apr 03 2025, 12:31 AM IST

ತೆಂಕನಿಡಿಯೂರು: ಪಾದೂರು ಜನ್ಮಶತಮಾನೋತ್ಸವ ವಿಚಾರಸಂಕಿರಣ
Share this Article
  • FB
  • TW
  • Linkdin
  • Email

ಸಾರಾಂಶ

ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಆಂತರಿಕ ಗುಣಮಟ್ಟ ಭರವಸೆ ಕೋಶ, ಇತಿಹಾಸ ವಿಭಾಗ ಹಾಗೂ ಡಾ. ಪಾದೂರು ಗುರುರಾಜ್ ಭಟ್ ಮೆಮೋರಿಯಲ್ ಟ್ರಸ್ಟ್, ಸಂಯುಕ್ತವಾಗಿ ಡಾ. ಪಾದೂರು ಗುರುರಾಜ್ ಭಟ್ ಜನ್ಮ ಶತಮಾನೋತ್ಸವದಂಗವಾಗಿ ವಿಶ್ವವಿದ್ಯಾನಿಲಯ ಮಟ್ಟದ ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಆಂತರಿಕ ಗುಣಮಟ್ಟ ಭರವಸೆ ಕೋಶ, ಇತಿಹಾಸ ವಿಭಾಗ ಹಾಗೂ ಡಾ. ಪಾದೂರು ಗುರುರಾಜ್ ಭಟ್ ಮೆಮೋರಿಯಲ್ ಟ್ರಸ್ಟ್, ಸಂಯುಕ್ತವಾಗಿ ಡಾ. ಪಾದೂರು ಗುರುರಾಜ್ ಭಟ್ ಜನ್ಮ ಶತಮಾನೋತ್ಸವದಂಗವಾಗಿ ವಿಶ್ವವಿದ್ಯಾನಿಲಯ ಮಟ್ಟದ ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ವಿಚಾರಸಂಕಿರಣವನ್ನು ಮೂಡುಬಿದಿರೆಯ ಶ್ರೀಧವಳ ಕಾಲೇಜು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ. ಪುಂಡಿಕಾ ಗಣಪಯ್ಯ ಭಟ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವಕರ ವಹಿಸಿದ್ದರು. ಅತಿಥಿಗಳಾಗಿ ಪಾದೂರು ಟ್ರಸ್ಟ್ ಸದಸ್ಯರಾದ ಪಿ. ಪರಶುರಾಮ್ ಭಟ್, ರಘುಪತಿ ರಾವ್, ವೆಂಕಟೇಶ್ ಭಟ್ ಪಾಲ್ಗೊಂಡರು.ಐಕ್ಯೂಎಸಿ ಸಂಚಾಲಕ ಡಾ. ಮೇವಿ ಮಿರಾಂದ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಘು ನಾಯ್ಕ, ಶ್ರೀ ಪ್ರಶಾಂತ ಎನ್. ಹಾಗೂ ಇತಿಹಾಸ ವಿಭಾಗ ಉಪನ್ಯಾಸಕ ಡಾ. ಮಹೇಶ್ ಕುಮಾರ್ ಕೆ.ಈ., ಡಾ. ಮೋಹನ್ ಕೆ.ಎನ್. ಸಂಪನ್ಮೂಲ ವ್ಯಕ್ತಿಗಳಾದ ಡಾ. ರಾಮದಾಸ್ ಪ್ರಭು, ಡಾ. ಬಿ. ಜಗದೀಶ ಶೆಟ್ಟಿ ಇದ್ದರು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ. ಮಹೇಶ್ ಕುಮಾರ್ ಕೆ.ಈ ಸ್ವಾಗತಿಸಿ ಪ್ರಸ್ತಾವಿಸಿದರು. ಡಾ. ಮೋಹನ್ ಕೆ.ಎನ್. ವಂದಿಸಿದರು. ವಿದ್ಯಾರ್ಥಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರುಮೊದಲ ಉಪನ್ಯಾಸ ನೀಡಿದ ಡಾ. ಪುಂಡಿಕಾ ಗಣಪಯ್ಯ ಭಟ್ ‘ತುಳುನಾಡಿನ ದೇವಾಲಯಗಳ ವಾಸ್ತು ಶಿಲ್ಪ’ಗಳ ಕುರಿತು ಮಾಹಿತಿ ನೀಡಿದರು. ಎರಡನೇ ಉಪನ್ಯಾಸದಲ್ಲಿ ಪೂರ್ಣಪ್ರಜ್ಞಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ. ಜಗದೀಶ ಶೆಟ್ಟಿ ‘ತುಳುನಾಡಿನ ಶಾಸನಗಳು’ ಕುರಿತು ಮಾಹಿತಿ ನೀಡಿದರು. ಮೂರನೇ ಉಪನ್ಯಾಸದಲ್ಲಿ ಅಜ್ಜರಕಾಡು ಉಡುಪಿ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ಡಾ. ರಾಮದಾಸ ಪ್ರಭು ‘ಮಧ್ಯಯುಗೀನ ತುಳುನಾಡಿನ ಸ್ಥಳೀಯ ಪ್ರಭುತ್ವಗಳು’ ಕುರಿತು ಮಾಹಿತಿ ನೀಡಿದರು.