ಸಾರಾಂಶ
ಮಲೇಬೆನ್ನೂರು ಸಮೀಪದ ಹಿಂಡಸಘಟ್ಟ ಗ್ರಾಮದ ಇತಿಹಾಸ ಪ್ರಸಿದ್ಧ ಪುಷ್ಕರಿಣಿಯಲ್ಲಿ ಸಿದ್ದೇಶ್ವರ ಸ್ವಾಮಿ ಮತ್ತು ಕೊಕ್ಕನೂರಿನ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ಹಾಗೂ ತೆಪ್ಪೋತ್ಸವ ಸಹಸ್ರಾರು ಭಕ್ತರ ಸಮ್ಮುಖ ಜರುಗಿತು.
ಮಲೇಬೆನ್ನೂರು: ಸಮೀಪದ ಹಿಂಡಸಘಟ್ಟ ಗ್ರಾಮದ ಇತಿಹಾಸ ಪ್ರಸಿದ್ಧ ಪುಷ್ಕರಿಣಿಯಲ್ಲಿ ಸಿದ್ದೇಶ್ವರ ಸ್ವಾಮಿ ಮತ್ತು ಕೊಕ್ಕನೂರಿನ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ಹಾಗೂ ತೆಪ್ಪೋತ್ಸವ ಸಹಸ್ರಾರು ಭಕ್ತರ ಸಮ್ಮುಖ ಜರುಗಿತು.
ಕೊಕ್ಕನೂರಿನ ಆಂಜನೇಯ ಸ್ವಾಮಿಯನ್ನು ಹಿಂಡಸಘಟ್ಟ ಗ್ರಾಮಕ್ಕೆ ಕರೆತಂದು ಉಭಯ ಉತ್ಸವ ಮೂರ್ತಿಗಳನ್ನು ಪೂಜಿಸಲಾಯಿತು. ಬಳಿಕ ಪುಷ್ಕರಿಣಿಗೆ ಹೊತ್ತುತಂದು ಶ್ರದ್ಧಾ-ಭಕ್ತಿಯಿಂದ ಕಾರ್ತಿಕೋತ್ಸವ ಮತ್ತು ದೀಪೋತ್ಸವ ನಡೆಸಲಾಯಿತು.ಸಿಂಗರಿಸಿದ ತೆಪ್ಪದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದ ಬಳಿಕ ನಂದಿಗುಡಿ ಸಿದ್ದರಾಮೆಶ್ವರ ಸ್ವಾಮೀಜಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ದಡದ ಸುತ್ತ ದೀಪಗಳ ಹಚ್ಚಿದ ಭಕ್ತರು ಜಯಘೋಷ ಹಾಕಿದರು. ನಂದಿಗುಡಿ, ಗೋವಿನಹಾಳು, ಕೊಕ್ಕನೂರು, ಹಳ್ಳಿಹಾಳ್, ಜಿ ಬೇವಿನಹಳ್ಳಿ, ಬಸಾಪುರ ಮತ್ತಿತರೆ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ತೆಪ್ಪೋತ್ಸವ ಸಂಭ್ರಮಕ್ಕೆ ಕಳೆ ತಂದರು.
- - - -೧೬ಎಂಬಿಆರ್೧: ಹಿಂಡಸಘಟ್ಟ ಗ್ರಾಮದ ಪುಷ್ಕರಿಣಿಯಲ್ಲಿ ತೆಪ್ಪೋತ್ಸವ ನಡೆಯಿತು.