ಸಾರಾಂಶ
ನಗರದ ಸುಪ್ರಸಿದ್ಧ ದಕ್ಷಿಣ ಕಾಶಿ ತೇರು ಮಲ್ಲೇಶ್ವರ ಸ್ವಾಮಿ ದೇವರ ಬ್ರಹ್ಮರಥೋತ್ಸವ ಫೆ.24ರಂದು ನಡೆಯಲಿದೆ.
ಹಿರಿಯೂರು: ನಗರದ ಸುಪ್ರಸಿದ್ಧ ದಕ್ಷಿಣ ಕಾಶಿ ತೇರು ಮಲ್ಲೇಶ್ವರ ಸ್ವಾಮಿ ದೇವರ ಬ್ರಹ್ಮರಥೋತ್ಸವ ಫೆ.24ರಂದು ನಡೆಯಲಿದೆ ಎಂದು ತಹಸೀಲ್ದಾರ್ ರಾಜೇಶ್ ಕುಮಾರ್ ಹೇಳಿದರು.
ನಗರದ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಪ್ರತಿ ವರ್ಷದಂತೆ ಈ ಬಾರಿಯೂ ಸಹ ರಥೋತ್ಸವವನ್ನು ಭಕ್ತಿ ಭಾವದಿಂದ ಹಾಗೂ ವಿಜೃಂಭಣೆಯಿಂದ ನಡೆಸಲಾಗುವುದು. ಇದಕ್ಕೆ ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು, ದೇವಸ್ಥಾನದ ಕೈವಾಡಸ್ಥರು ಮತ್ತು ಸಮಸ್ತ ಭಕ್ತಾದಿಗಳು ಸಹಕಾರ ನೀಡಬೇಕು. ಫೆ.13ರಂದು ಕಂಕಣ ಕಲ್ಯಾಣೋತ್ಸವದೊಂದಿಗೆ ಜಾತ್ರೆ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿವೆ. ಫೆ.14 ಮಂಟಪೋತ್ಸವ, 15ರಂದು ಗಿಳಿ ವಾಹನೋತ್ಸವ, 16ರಂದು ಗಂಡ ಬೇರುಂಡ ವಾಹನೋತ್ಸವ, 17ರಂದು ನವಿಲು ವಾಹನೋತ್ಸವ, 18ರಂದು ಸಿಂಹ, 19ರಂದು ನಂದಿ, 20ರಂದು ಸರ್ಪ, 21ರಂದು ಅಶ್ವ, 22ರಂದು ಗಜ ವಾಹನೋತ್ಸವ, 23ರಂದು ಸಂಜೆ ದೊಡ್ಡ ಉತ್ಸವ ನಡೆಯಲಿದ್ದು, 24ರಂದು ಮಧ್ಯಾಹ್ನ ತೇರುಮಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಹಾಗೂ ಸಂಜೆ ಚಂದ್ರಮೌಳೇಶ್ವರ ಮತ್ತು ಉಮಾಮಹೇಶ್ವರ ದೇವರ ರಥೋತ್ಸವ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಎಚ್.ಮಹಾಂತೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಪ್ರಸನ್ನ ಕುಮಾರ್ ಜೋಯಿಸ್, ವಿಶ್ವನಾಥಾಚಾರ್ಯ, ನಾಗರಾಜ ಆಚಾರ್ಯ, ಮಲ್ಲೇಶ್ ಆಚಾರ್ಯ, ಡಾ.ವೀರಣ್ಣ ಬೀರೇನಹಳ್ಳಿ, ವೀರಪ್ಪ, ವೀರಕರಿಯಣ್ಣ, ನಗರ ಸಭೆ ಮಾಜಿ ಅಧ್ಯಕ್ಷೆ ಶಿವರಂಜನಿ, ನಗರಸಭೆ ಆರೋಗ್ಯ ನಿರೀಕ್ಷಕಿ ಸಂಧ್ಯಾ, ಎಎಸ್ಐ ರಾಘವ ರೆಡ್ಡಿ, ಆಡಳಿತಾಧಿಕಾರಿ ಸ್ವಾಮಿ, ವಿಎ ಮಾಯವರ್ಮ, ರವಿಕುಮಾರ್, ಜಿ.ಎಲ್.ಮೂರ್ತಿ, ವಿ.ಎಚ್.ರಾಜು, ಸತ್ಯನಾರಾಯಣ ಮೂರ್ತಿ, ಭೋಜಣ್ಣ, ಜಗದೀಶ್ ಭಂಡಾರಿ ಮಲ್ಲೇಶ್ ಮುಂತಾದವರು ಹಾಜರಿದ್ದರು.