ತರೀಕೆರೆ ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಲು ಟಿ.ಜಿ.ಶಶಾಂಕ್ ಕರೆ

| Published : Dec 18 2023, 02:00 AM IST

ತರೀಕೆರೆ ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಲು ಟಿ.ಜಿ.ಶಶಾಂಕ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಲು ಟಿ.ಜಿ.ಶಶಾಂಕ್ ಕರೆನಮ್ಮ ನಡೆ ವಾರ್ಡ್ ಕಡೆಗೆ ಕಾರ್ಯಕ್ರಮಪುರಸಭಾ ಕಾರ್ಯಾಲಯದಿಂದ ಸ್ವಚ್ಛತಾ ಅಭಿಯಾನ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣವನ್ನು ಸ್ವಚ್ಛವಾಗಿಡಲು ಸಾರ್ವಜನಿಕರು ಸಹಕರಿಸಬೇಕೆಂದು ಪುರಸಭೆ ಸದಸ್ಯ ಟಿ.ಜಿ.ಶಶಾಂಕ ಹೇಳಿದ್ದಾರೆ.

ಪುರಸಭಾ ಕಾರ್ಯಾಲಯದಿಂದ ನಮ್ಮ ನಡೆ ವಾರ್ಡ್ ಕಡೆಗೆ ಸ್ವಚ್ಛತಾ ಅಭಿಯಾನದಡಿ ಪಟ್ಟಣದ 5ನೇ ವಾರ್ಡ್ ನಲ್ಲಿ ಪದೇ ಪದೇ ಕಸ ಬೀಳುವ ಬ್ಲಾಕ್ ಸ್ಪಾಟ್ ಗುರುತಿಸಿ ಆ ಸ್ಥಳದಲ್ಲಿ ನೈರ್ಮಲ್ಯ ಕಾಪಾಡಿ ವಿವಿಧ ಬಣ್ಣದ ರಂಗೋಲಿಗಳಿಂದ ಅಲಂಕರಿಸಿ, ದೀಪ ಬೆಳಗಿಸಿ ಸ್ವಚ್ಛತೆ ಕಾಪಾಡಲು ಮನವಿ ಮಾಡಿದರು.

ಈ ಸ್ಥಳದಲ್ಲಿ ಕಸ ಗಲೀಜು ಹಾಕಬಾರದು, ಕಸ ಹಾಕಿದರೆ ನೀರು ಸರಾಗವಾಗಿ ಹರಿದು ಹೋಗದೆ ಚರಂಡಿ ಕಸದಿಂದ ಕಟ್ಟುತ್ತದೆ, ಎಲ್ಲರ ಮನೆ ಮುಂಭಾಗ ಶುದ್ದವಾಗಿರಬೇಕು. ಪರಿಸರ ಆರೋಗ್ಯವಾಗಿರಬೇಕು, ಪುರಸಭೆಯಲ್ಲಿ ಕಾರ್ಮಿಕರ ಕೊರತೆ ಇದೆ. ಹೊಸ ರೋಗಗಳು ಕಾಣಿಸಿಕೊಳ್ಳತೊಡಗಿದೆ, ನಗರವನ್ನು ಸ್ವಚ್ಛವಾಗಿಟ್ಟುಕೊಂಡರೆ ಎಲ್ಲರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು, ಶೀಘ್ರದಲ್ಲೇ ಪುರಸಭೆಗೆ ಕಸ ಸಂಗ್ರಹಿಸುವ ಎರಡು ಹೊಸ ಟಿಪ್ಪರ್ ಗಳು ಬರಲಿದೆ ಎಂದು ಹೇಳಿದರು.

ಮುಖಂಡರಾದ ಆದಿಲ್ ಪಾಷ ಮಾತನಾಡಿ, ವಾರ್ಡ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದ ವಿಷಯ. ಈ ರೀತಿಯ ಕಾರ್ಯಕ್ರಮಗಳು ಪಟ್ಟಣದ 23 ವಾರ್ಡುಗಳಲ್ಲೂ ಆಗಬೇಕು. ಮನೆ ಬಾಗಿಲಿಗೆ ಕಸ ಸಂಗ್ರಹಿಸುವ ಟಿಪ್ಪರ್ ಬಂದಾಗ ಕಸವನ್ನು ಟಿಪ್ಪರ್ ಗೆ ಕೊಡಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಉಂಟಾಗಬೇಕು. ಕಾರ್ಯಕ್ರಮ ಆಯೋಜಿಸಿದ ಪುರಸಭೆಗೆ ಅಭಿನಂದನೆ ತಿಳಿಸಿದರು.ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಪುರಸಭೆ ಅಧ್ಯಕ್ಷ, ಉಪಾಧ್ಕ್ಷರು ಮತ್ತು ಜನಪ್ರತಿನಿಧಿ ಗಳೊಂದಿಗೆ ನಮ್ಮ ನಡೆ ವಾರ್ಡ್ ಕಡೆಗೆ ಈ ಕಾರ್ಯಕ್ರಮವನ್ನು ಪಟ್ಟಣದ ಎಲ್ಲಾ ವಾರ್ಡುಗಳಲ್ಲಿಯೂ ಆಯೋಜಿಸ ಲಾಗುತ್ತಿದೆ. ಪುರಸಭೆ ಅಧಿಕಾರಿಗಳೊಂದಿಗೆ ವಾರ್ಡ್ ಗೆ ತೆರಳಿ ಸ್ವಚ್ಛತೆ, ಕುಡಿಯುವ ನೀರು ಇತ್ಯಾದಿ ಸಮಸ್ಯೆಗಳನ್ನು

ಪರಿಹರಿಸಲು ಪ್ರಯತ್ನಿಸಲಾಗುವುದು. ಪಟ್ಟಣದಲ್ಲಿ ಪ್ರತಿನಿತ್ಯ ಸುಮಾರು 16 ಟನ್ ಕಸ ಸಂಗ್ರಹವಾಗುತ್ತದೆ. ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಪ್ಪು ಪ್ರದೇಶಗಳನ್ನು ಗುರುತಿಸಿ ಅಲ್ಲಿ ನೈರ್ಮಲ್ಯತೆ ಕಾಪಾಡಲಾಗುವುದು, ಸಮುದಾಯದ ಸಹಭಾಗಿತ್ವ ಅತ್ಯಂತ ಅವಶ್ಯಕ. ತರೀಕೆರೆ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲಾಗುವುದು, ಸ್ವಚ್ಛತೆ ಕಾಪಾಡಲು ಮತ್ತು ಪ್ಲಾಸ್ಟಿಕ್ ನಿಷೇಧಿಸಲು ಸಾರ್ವಜನಿಕರು ಪುರಸಭೆ ಜೊತೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಪರಿಸರ ಅಭಿಯಂತರರಾದ ತಾಹೇರ ತಸ್ನಿಂ ಮಾತನಾಡಿ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಪುರಸಭೆ ಪ್ರಯತ್ನಿಸುತ್ತಿದೆ, ಪುರಸಭೆಯಲ್ಲಿ ಮಾನವ ಸಂಪನ್ಮೂಲ ಕಡಿಮೆಯಾಗಿದೆ, ಕಸವನ್ನು ಬೀದಿಗೆ ಎಸೆಯಬೇಡಿ. ಚರಂಡಿಗೆ ಹಾಕಬೇಡಿ, ಪುರಸಭೆ ಕಸ ಸಂಗ್ರಹಿಸುವ ಟಿಪ್ಪರ್ ಗಳಿಗೆ ಕೊಡಬೇಕು ಎಂದು ಮನವಿ ಮಾಡಿದರು.

ಪುರಸಭೆ ವ್ಯವಸ್ಥಾಪಕ ವಿಜಯಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕ ಮಹೇಶ್, ಪ್ರಕಾಶ್, ಪುರಸಭೆ ಸಿಬ್ಬಂದಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

17ಕಟಿರ್.ಕೆ01ಃ

ತರೀಕೆರೆ ಪುರಸಭಾ ಕಾರ್ಯಾಲಯದಿಂದ ಏರ್ಪಡಿಸಿದ್ದ ನಮ್ಮನಡೆ ಸ್ವಚ್ಛತೆ ಕಡೆಗೆ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಟಿ.ಜಿ.ಶಶಾಂಕ, ಮುಖಂಡರಾದ ಆದಿಲ್ ಪಾಷ, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಪರಿಸರ ಅಭಿಯಂತರರಾದ ತಾಹೇರ ತಸ್ನಿಂ, ಹಿರಿಯ ಆರೋಗ್ಯ ನಿರೀಕ್ಷಕ ಮಹೇಶ್, ಪುರಸಭೆ ವ್ಯವಸ್ಥಾಪಕ ವಿಜಯಕುಮಾರ್ ಮತ್ತಿತರರು ಇದ್ದರು.