ಸಾರಾಂಶ
ಅಯೋಧ್ಯೆ ಯಾತ್ರೆಗೆ ಅನುವು ಮಾಡಿಕೊಟ್ಟ ಆಯೋಜಕರಿಗೆ ಕಪ್ಪ ತಂಡದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃತಜ್ಞತಾ ಪತ್ರ ಸಲ್ಲಿಸಿ ಅಭಿನಂದಿಸಲಾಯಿತು.
ಕೊಪ್ಪ: ಅಯೋಧ್ಯೆ ಯಾತ್ರೆಗೆ ಅನುವು ಮಾಡಿಕೊಟ್ಟ ಆಯೋಜಕರಿಗೆ ಕಪ್ಪ ತಂಡದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃತಜ್ಞತಾ ಪತ್ರ ಸಲ್ಲಿಸಿ ಅಭಿನಂದಿಸಲಾಯಿತು.
ಫೆ.೨೧ರ ಬುಧವಾರ ಬೆಳಿಗ್ಗೆ ೧೦:೩೦ ಕ್ಕೆ ಕೊಪ್ಪ ಪಟ್ಟಣದ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಕಳೆದ ವಾರ ಅಯೋಧ್ಯಾ ವಿಶೇಷ ಯಾತ್ರೆ ಕೈಗೊಂಡಿದ್ದ ಕೊಪ್ಪ ತಂಡದ ಹದಿಮೂರು ಜನರು ಸೇರಿ ಶ್ರೀ ವೀರಭದ್ರ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ಪೂಜೆ ಮಾಡಿಸಿದರು.ಈ ವೇಳೆ ಅಯೋಧ್ಯೆ ಯಾತ್ರೆ ಆಯೋಜಿಸಿದ ಕರ್ನಾಟಕ ರಾಜ್ಯ ಬಿಜೆಪಿ ಅದ್ಯಕ್ಷರು, ಪದಾಧಿಕಾರಿಗಳು ಹಾಗೂ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ, ಕೊಪ್ಪ ತಾಲೂಕು ಬಿಜೆಪಿ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿ. ಕೊಪ್ಪ ಬಿಜೆಪಿ ನಗರ ಘಟಕದ ಅಧ್ಯಕ್ಷ ದಿವಾಕರ್ ಭಟ್ ಮುಖಾಂತರ ಕೃತಜ್ಞತಾ ಪತ್ರ ನೀಡಲಾಯಿತು. ನಂತರ ಅಯೋಧ್ಯಾ ಯಾತ್ರಾ ಕುರಿತು ಯಾತ್ರಾ ತಂಡದಲ್ಲಿದ್ದ ಪ್ರಕಾಶ್ ಸಿ.ಎಚ್. ಮತ್ತು ಉದಯಕುಮಾರ್ ಜೈನ್ ತಮ್ಮ ಅನುಭವ ಹಂಚಿಕೊಂಡರು. ಪೂಜೆ ನಂತರ ಲಘು ಉಪಾಹಾರ ಮತ್ತು ಪ್ರಸಾದ ವ್ಯವಸ್ಥೆಯನ್ನು ಅಯೋಧ್ಯಾ ಯಾತ್ರಾ ತಂಡದವರು ಮಾಡಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಮಹಾಬಲ ರಾವ್, ಕಿಶೋರ್ ಪೇಜಾವರ್, ಜಿಪಂ ಮಾಜಿ ಸದಸ್ಯೆ ದಿವ್ಯ ದಿನೇಶ್, ಮಹಿಳಾ ಮೋರ್ಚಾದ ಸುಧಾ ಮೋಹನ್, ಪದ್ಮಾವತಿ ರಮೇಶ್, ಅನಸೂಯಾ ಕೃಷ್ಣಮೂರ್ತಿ ಹಾಜರಿದ್ದರು.