ಸಾರಾಂಶ
ಈ ಬಾರಿಯ ಹುಲಿ ವೇಷ ಕುಣಿತ ಸ್ಪರ್ಧೆಗೆ ಪ್ರಥಮ ಬಹುಮಾನ 1, 00, 001 ರು. ನಗದು ಮತ್ತು ಶಾಶ್ವತ ಫಲಕ, ದ್ವಿತೀಯ ಬಹುಮಾನ 50, 001 ರು. ನಗದು ಮತ್ತು ಶಾಶ್ವತ ಫಲಕ ನೀಡಲಾಗುವುದು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯ ಪ್ರಸಿದ್ಧ ಸಾಂಪ್ರದಾಯಿಕ ಹುಲಿವೇಷ ತಂಡ ಟೈಗರ್ಸ್ ಫ್ರೆಂಡ್ ಇದರ ವತಿಯಿಂದ ಉಡುಪಿ ಶ್ರೀ ಕೃಷ್ಣಜನ್ಮಾಷ್ಟಮಿಯ ಸಂಭ್ರಮಾಚರಣೆಯ ಪ್ರಯುಕ್ತ ಆ. 26ರಂದು ಸಾಯಂಕಾಲ 4.30ಕ್ಕೆ ಆಹ್ವಾನಿತ ತಂಡಗಳ ಸಾಂಪ್ರದಾಯಿಕ ತೃತೀಯ ವರ್ಷದ ಹುಲಿವೇಷ ಕುಣಿತ ಸ್ಪರ್ಧೆ ಹಾಗೂ ಪ್ರದರ್ಶನವು ಕುಂಜಿಬೆಟ್ಟು ಮೀನು ಮಾರುಕಟ್ಟೆ ಬಳಿಯ ಭವ್ಯವಾದ ವೇದಿಕೆಯಲ್ಲಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಂಗಳವಾರ ನಡೆಯಿತು.ತಂಡದ ಪ್ರೋತ್ಸಾಹಕರಾದ ನಗರಸಭಾ ಸದಸ್ಯ ರಮೇಶ್ ಕಾಂಚನ್, ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ, ಶಶಿರಾಜ್ ಕುಂದರ್, ಪ್ರದೀಪ್ ಶೇರಿಗಾರ್, ಭಾಸ್ಕರ್ ಕಡಿಯಾಳಿ ಹಾಗೂ ಟೈಗರ್ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿತರಿದ್ದರು.
ಈ ಬಾರಿಯ ಹುಲಿವೇಷ ಕುಣಿತ ಸ್ಪರ್ಧೆಗೆ ಪ್ರಥಮ ಬಹುಮಾನ 1,00,001 ರು. ನಗದು ಮತ್ತು ಶಾಶ್ವತ ಫಲಕ, ದ್ವಿತೀಯ ಬಹುಮಾನ 50,001 ರು. ನಗದು ಮತ್ತು ಶಾಶ್ವತ ಫಲಕ, ಹಾಗೂ ಭಾಗವಹಿಸಿದ ಪ್ರತೀ ತಂಡಗಳಿಗೆ ಗೌರವಧನ ನೀಡಲಾಗುವುದು.ಅಲ್ಲದೇ ಪ್ರತಿ ತಂಡದಿಂದ ಒಬ್ಬ ಕಲಾವಿದನಿಗೆ ವೈಯಕ್ತಿಕ ಕುಣಿತ ಸ್ಪರ್ಧೆಗೆ ಭಾಗವಹಿಸಲು ಅವಕಾಶವಿದ್ದು, ವಿಜೇತ ಕಲಾವಿದನಿಗೆ ಆಕರ್ಷಕ ಫಲಕದೊಂದಿಗೆ ಗೌರವಿಸಲಾಗುವುದು ಎಂದು ಟೈಗರ್ ಫ್ರೆಂಡ್ಸ್ ಉಡುಪಿ ಪ್ರಕಟಣೆ ತಿಳಿಸಿದೆ.