ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರುಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಟ್ಟೆ ಹಳ್ಳ ಮೈದುಂಬಿ ಹರಿಯುತ್ತಿದೆ. ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ವರುಣನ ಕೃಪೆಯಿಂದ ಹುಬ್ಬೆ ಹುಣಸೆ ಕೆರೆ ತುಂಬಿ ತಟ್ಟೆಹಳ್ಳದ ಮೂಲಕ ಹರಿಯುತ್ತಿದೆ.
ಹರ್ಷಗೊಂಡ ರೈತಾಪಿ ವರ್ಗ:ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ಹನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗುವ ಮೂಲಕ ಸಮೀಪದ ಉದ್ದನೂರು ಬಳಿ ಬರುವ ಹುಬ್ಬೆ ಹುಣಸೆ ಕೆರೆ ತುಂಬುವ ಮೂಲಕ ತಟ್ಟೆ ಹಳ್ಳದ ಮೂಲಕ ಕೊಡಿ ಬಿದ್ದ ಕೆರೆ ಅಪಾರ ಪ್ರಮಾಣದ ನೀರು ತಟ್ಟೆ ಹಳ್ಳದ ಮೂಲಕ ಹರಿದು ಹೋಗುತ್ತಿದೆ. ಇದರಿಂದಾಗಿ ಕೆಳಭಾಗದಲ್ಲಿರುವ ರೈತರ ಜಮೀನುಗಳಲ್ಲಿರುವ ನೀರಾವರಿ ಪಂಪ್ಸೆಟ್‌ಗಳಿಗೆ ಅಂತರ್ಜಲ ಹೆಚ್ಚಲು ಅನುಕೂಲದಾಯಕವಾಗಿದೆ. ಹೀಗಾಗಿ ಈ ಭಾಗದಲ್ಲಿರುವ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.
ಕೆರೆ ಯೋಜನೆ ರೈತರ ಉಪಯೋಗಕ್ಕೆ ಇಲ್ಲ:ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಳೆದ ಹಲವಾರು ವರ್ಷಗಳ ಹಿಂದೆಯೇ ಹುಬ್ಬೆ ಹುಣಸೆ ಕೆರೆ ಯೋಜನೆಯ ಫಲವಾಗಿ ರೈತರಿಗೆ ಎಡದಂಡೆ, ಬಲದಂಡೆ ನಾಲೆಗಳೆಲ್ಲ ಗಿಡ ಗಂಟೆಗಳು ಬೆಳೆದು ನಿಂತಿತ್ತು. ಜೊತೆಗೆ ನಾಲೆಯಲ್ಲಿ ರಾಡಿ ತುಂಬಿರುವುದರಿಂದ ಜಲಾಶಯದಲ್ಲಿರುವ ನೀರನ್ನು ರೈತರ ಉಪಯೋಗಕಿಲ್ಲದಂತೆ ಅಪಾರ ಪ್ರಮಾಣವಾದ ನೀರು ಕೋಡಿ ಮೂಲಕ ತಟ್ಟೆ ಹಳ್ಳದಲ್ಲಿ ಹರಿದು ಪೋಲಾಗಿ ಹೋಗುತ್ತಿದೆ. ಹೀಗಾಗಿ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇದನ್ನು ಗಮನದಲ್ಲಿ ಇಟ್ಟುಕೊಂಡು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ರೈತಾಪಿ ವರ್ಗ ಒತ್ತಾಯಿಸಿದ್ದಾರೆ.ನೀರಾವರಿ ಯೋಜನೆ ಕಲ್ಪಿಸಲು ರೈತರಿಗೆ ಕೋಟ್ಯಂತರ ರು.ವೆಚ್ಚ ಮಾಡಿ ಹುಬ್ಬೆ ಹುಣಸೆ ಕೆರೆ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ ಮುಖಾಂತರ ಕ್ರಮ ಕೈಗೊಳ್ಳಲಾಗಿದೆ. ಆದರೆ ಹಲವಾರು ವರ್ಷಗಳಿಂದ ಕೆರೆ ತುಂಬಿದ ಮೂಲಕ ನೀರು ಹರಿದು ತಮಿಳುನಾಡಿಗೆ ಹೋಗುತ್ತಿದೆ. ನಾಲೆಗಳನ್ನು ದುರಸ್ತಿಪಡಿಸಿ, ನೀರು ಬಿಟ್ಟು ಬೆಳೆಗೆ ಅನುಕೂಲ ಕಲ್ಪಿಸಲು ಜನಪ್ರತಿನಿಧಿ ಹಾಗೂ ನೀರಾವರಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಗಿರೀಶ್, ಉದ್ದನೂರು.