12ನೇ ಶತಮಾನದ ಅನುಭವ ಮಂಟಪವೇ ನೈಜ ಸಂಸತ್ತು

| Published : Apr 01 2024, 12:47 AM IST

ಸಾರಾಂಶ

ವಿಜಯಪುರ: ಗುರು, ಲಿಂಗ, ಜಂಗಮ ಸೇವೆಗಳ ಮೂಲಕ ಕಾಯಕದ ಮಹತ್ವವನ್ನು ಸಾರಿದ ಕೀರ್ತಿ 12ನೇ ಶತಮಾನದ ಶರಣರಿಗೆ ಸಲ್ಲುತ್ತದೆ. 12ನೇ ಶತಮಾನದಲ್ಲಿನ ಅನುಭವ ಮಂಟಪ ನಿಜವಾದ ಸಂಸತ್ತು ಎಂದು ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಐ.ಜಿ.ಮ್ಯಾಗೇರಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ಗುರು, ಲಿಂಗ, ಜಂಗಮ ಸೇವೆಗಳ ಮೂಲಕ ಕಾಯಕದ ಮಹತ್ವವನ್ನು ಸಾರಿದ ಕೀರ್ತಿ 12ನೇ ಶತಮಾನದ ಶರಣರಿಗೆ ಸಲ್ಲುತ್ತದೆ. 12ನೇ ಶತಮಾನದಲ್ಲಿನ ಅನುಭವ ಮಂಟಪ ನಿಜವಾದ ಸಂಸತ್ತು ಎಂದು ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಐ.ಜಿ.ಮ್ಯಾಗೇರಿ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಹಾಗೂ ನಗರ ಘಟಕ ಸಾಹಿತ್ಯ ರವಿವಾರ ಪರಿಷತ್ತಿನ ಸಹಯೋಗದಲ್ಲಿ ನಡೆದ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸತ್ಯ, ಶುದ್ಧ ಕಾಯಕದಿಂದ ಮಾಡಿದ ನಿಜವಾದ ಭಕ್ತಿ ಮಾತ್ರ ಶಿವಲಿಂಗಕ್ಕೆ ಸಲ್ಲುತ್ತದೆ ಎಂದರು.

ದತ್ತಿನಿಧಿ ಕಾಯ೯ಕ್ರಮದ ನಿಮಿತ್ಯ ಈರವ್ವ ಮಲ್ಲಪ್ಪ ಹಣಮಶೆಟ್ಟಿ, ದತ್ತಿ ದಾನಿಗಳು ಎಸ್.ಎಮ್.ಹಣಮಶೆಟ್ಟಿ, ಕಾಯಕಯೋಗಿ ನುಲಿಯ ಚಂದಯ್ಯ ವಿಷಯದ ಕುರಿತು ಜಯಶ್ರೀ ಹಿರೇಮಠ ಉಪನ್ಯಾಸ ನೀಡಿದರು. ಸಿದ್ಧಲಿಂಗೇಶ್ವರರು ಚೆನ್ನಬಸವೇಶ್ವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಲೋಕ ಸಂಚಾರ ಮಾಡಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಪಶ್ಚಿಮ ಘಟ್ಟಗಳಿಂದ ಅರುಣಾಚಲ ಪ್ರದೇಶದ ವರೆಗೆ ಸಂಚರಿಸಿ ಸಿದ್ದಲಿಂಗೇಶ್ವರರ ಸಂದೇಶಗಳನ್ನು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಮುಖ್ಯಾದ್ಯಾಪಕಿ ಶಾರದಾ ಐಹೊಳಿ ಮಾತನಾಡಿ, ಕಾಯಕಯೋಗಿ ನುಲಿಯ ಚಂದಯ್ಯನವರ ಹಾಗೂ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಜೀವನದ ಸಂದೇಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವತಃ ಗಳಿಸಿದ ಹಣದಿಂದ ಮಾತ್ರ ದಾಸೋಹ ಮಾಡಿದಾಗ ಅದು ಭಗವಂತನ ಪಾದಕ್ಕೆ ಸಮರ್ಪಿತವಾಗಲು ಸಾಧ್ಯವೆಂದರು.

ಅನುಶ್ರೀ ಹಾಗೂ ಶ್ರೀನಿಧಿ ಬಂಡೆ ಮಾರ್ಮಿಕವಾಗಿ ವಚನ ಗಾಯನ ಮಾಡುವ ಮೂಲಕ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ.ಮ.ನಿ.ಪ್ರ ವಿರತೀಶಾನಂದ ಸ್ವಾಮೀಜಿ ಗುರು ಲಿಂಗ ಜಂಗಮದ ಮಹತ್ವವನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ, ಡಾ ವ್ಹಿ.ಡಿ ಐಹೊಳ್ಳಿ, ಶಶಿಕಲಾ ಆರ್ ನಾಯ್ಕೋಡಿ, ಪ್ರಭು ಈರಪ್ಪ ಅಳ್ಳಗಿ, ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಸಾಹಿತಿಗಳಾದ ಶಂಕರ ಬೈಚಬಾಳ, ಸಿದ್ದಾರಾಮ ಬಿರಾದಾರ, ವಿದ್ಯಾವತಿ ಅಂಕಲಗಿ, ಅನ್ನಪೂರ್ಣ ಬೆಳ್ಳೆಣ್ಣವರ, ವಿಜಯಲಕ್ಷ್ಮೀ ಹಳಕಟ್ಟಿ, ಕಮಲಾ ಮುರಾಳ, ಜಿ.ಎಸ್ ಬಳ್ಳೂರ, ಶ್ರೀಶೈಲ ಬಿರಾದಾರ, ಸಂತೋಷಕುಮಾರ ಬಂಡೆ, ಅಹ್ಮದ್ ವಾಲೀಕಾರ, ಅನಸೂಯ ಮಜಗಿ, ಗಂಗಮ್ಮ ರಡ್ಡಿ, ಬಿ.ವಿ. ಪಟ್ಟಣಶೆಟ್ಟಿ, ಯುವರಾಜ್ ಚೋಳಕೆ, ಎ.ಎಚ್ ಕಜರಗಿ, ಅಲ್ತಾಫ್ ಮದಭಾವಿ, ಹಾಜರಿದ್ದರು. ಗೌರವ ಕಾರ್ಯದರ್ಶಿ ಸುಭಾಸ ಕನ್ನೂರ ಸ್ವಾಗತಿಸಿ ಪರಿಚಯಿಸಿದರು. ಡಾ.ಮಾಧವ ಎಚ್ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಸುನಂದಾ ಪ್ರಾರ್ಥಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.