ಸಾರಾಂಶ
ಕಲಿಯುಗ್ ಎಂಟರ್ ಪ್ರೈಸಸ್’ ಸಹಯೋಗದಲ್ಲಿ ಕನ್ನಡಪ್ರಭ-ಸುವರ್ಣ ನ್ಯೂಸ್ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 3 ದಿನಗಳ ‘ಗಿಫ್ಟ್ಸ್ ಮತ್ತು ಲೈಫ್‌ಸ್ಟೈಲ್ ಎಕ್ಸ್‌ಫೋ’ಗೆ ಉತ್ತಮ ಸ್ಪಂದನೆಯೊಂದಿಗೆ ಭಾನುವಾರ ತೆರೆ ಬಿದ್ದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಲಿಯುಗ್ ಎಂಟರ್ ಪ್ರೈಸಸ್’ ಸಹಯೋಗದಲ್ಲಿ ಕನ್ನಡಪ್ರಭ-ಸುವರ್ಣ ನ್ಯೂಸ್ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 3 ದಿನಗಳ ‘ಗಿಫ್ಟ್ಸ್ ಮತ್ತು ಲೈಫ್‌ಸ್ಟೈಲ್ ಎಕ್ಸ್‌ಫೋ’ಗೆ ಉತ್ತಮ ಸ್ಪಂದನೆಯೊಂದಿಗೆ ಭಾನುವಾರ ತೆರೆ ಬಿದ್ದಿದೆ.3 ದಿನಗಳ ಅವಧಿಯಲ್ಲಿ ಸಾವಿರಾರು ಜನರು ಬೆಂಗಳೂರಿನ ಅತಿದೊಡ್ಡ ಎಕ್ಸ್‌ಫೋನಲ್ಲಿ ಶಾಪಿಂಗ್ ಅನುಭವ ಪಡೆದುಕೊಂಡರು. ಭಾನುವಾರ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವಾರಾಂತ್ಯದಂದು ಅನೇಕರು ತಮ್ಮ ಕುಟುಂಬ ಸಮೇತರಾಗಿ ಎಕ್ಸ್‌ಪೋಗೆ ಆಗಮಿಸಿ ವಸ್ತ್ರಗಳು, ಫರ್ನೀಚರ್, ಅಲಂಕಾರಿಕ ವಸ್ತುಗಳು ಸೇರಿ ಮನೆಗೆ ಅಗತ್ಯವಾದ ಅನೇಕ ವಸ್ತುಗಳನ್ನು ಶಾಪಿಂಗ್ ಮಾಡಿ ಸಂತಸಪಟ್ಟರು.
ಎಕ್ಸ್‌ಪೋದಲ್ಲಿ ವಿವಿಧ ಕಂಪನಿಗಳ ಫರ್ನಿಚರ್‌ಗಳು, ಬಗೆ ಬಗೆಯ ವಸ್ತ್ರಗಳು, ಬ್ರ್ಯಾಂಡೆಡ್ ಕಾರುಗಳು, ಆಭರಣ, ಕರಕುಶಲ ವಸ್ತುಗಳು, ಪೇಂಟಿಂಗ್‌ಗಳು, ಅಲಂಕಾರಿಕ ವಸ್ತುಗಳು, ಪರ್ಫ್ಯೂಮ್, ಕಾರ್ಪೇಟ್‌ಗಳು, ವಿಗ್ರಹಗಳು, ಛಾಯಾಚಿತ್ರಗಳು ಸೇರಿ ಅನೇಕ ಮಾದರಿಯ ವಸ್ತುಗಳನ್ನು ಜನರು ಆಯ್ಕೆ ಮಾಡಿಕೊಂಡರು.‘ಅರಮನೆ ಮೈದಾನದ ಎ.ಸಿ ಹಾಲ್‌ನಲ್ಲಿ ಒಂದೇ ಕಡೆ ಎಲ್ಲ ವಸ್ತುಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಿರುವುದು ಉತ್ತಮ ಕ್ರಮವಾಗಿದೆ. ಎಷ್ಟೇ ಸುತ್ತಾಡಿದರೂ ಬೇಸರ ಆಗುವುದಿಲ್ಲ. ನಿಧಾನವಾಗಿ ನಮ್ಮ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಅನೇಕ ವಸ್ತುಗಳನ್ನು ಆಯ್ಕೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ವಸ್ತುಗಳನ್ನು ಆಯಾ ಮಳಿಗೆಗಳಿಗೆ ತೆರಳಿ ಖರೀದಿ ಮಾಡುತ್ತೇನೆ’ ಎಂದು ಗ್ರಾಹಕರೊಬ್ಬರು ತಮ್ಮ ಅನುಭವ ಹಂಚಿಕೊಂಡರು.
‘ಗ್ರ್ಯಾಂಡ್ ಫರ್ನೀಚರ್‌ಗಳು, ಅಲಂಕಾರಿಕ ವಸ್ತುಗಳು, ಛಾಯಾಚಿತ್ರಗಳು, ವೃತ್ತಿಪರರು ತಯಾರಿಸಿರುವ ಬಟ್ಟೆಗಳು ಬಹಳ ಇಷ್ಟವಾದವು. ಸುವರ್ಣ ನ್ಯೂಸ್-ಕನ್ನಡಪ್ರಭ ಆಯೋಜಿಸಿರುವ ಈ ಎಕ್ಸ್‌ಫೋದಲ್ಲಿ ಅತ್ಯುತ್ತಮವಾದ ಶಾಪಿಂಗ್ ಅನುಭವ ಸಿಕ್ಕಿದೆ’ ಎಂದು ಖಾಸಗಿ ಉದ್ಯೋಗಿ ಛಾಯಾ ಹೇಳಿದರು.