ಪಂಚೇನ್ ಲಾಮರವರ 36 ನೇ ಹುಟ್ಟುಹಬ್ಬ

| Published : Apr 27 2025, 01:33 AM IST

ಸಾರಾಂಶ

ಚೀನಾ ಸರ್ಕಾರವು ಅತಿ ಚಿಕ್ಕವಯಸ್ಸಿನಲ್ಲೇ ಪಂಚೇನ್ ಲಮಾನನ್ನು ಅಪಹರಿಸಿದ್ದು, ಅವರು ಇದ್ದಾರೋ ಇಲ್ಲವೋ ಮಾತ್ರ ಗೊತ್ತಿಲ್ಲ

ಬೈಲಕುಪ್ಪೆಯ ತಶೀಲಂಪು ದೇವಸ್ಥಾನದಲ್ಲಿ ಆಚರಣೆಕನ್ನಡಪ್ರಭ ವಾರ್ತೆ ಬೈಲಕುಪ್ಪೆ

ಟಿಬೆಟಿಯನ್ನರ ಧಾರ್ಮಿಕ ಗುರು ದಲಾಯಿಲಾಮ ಅವರ ನಂತರ ಟಿಬೆಟಿಯನ್ ಸಮುದಾಯಕ್ಕೆ ದೈವ ಭಕ್ತರಾಗಿರುವಂತಹ ಪಂಚೇನ್ ಲಾಮ ಅವರ 36ನೇ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಬೈಲಕುಪ್ಪೆಯ ತಶೀಲಂಪು ದೇವಸ್ಥಾನದಲ್ಲಿ ಆಚರಿಸಲಾಯಿತು.

ಸುಮಾರು ಒಂದು ಸಾವಿರಕ್ಕೂ ಅಧಿಕ ಟಿಬೆಟಿಯನ್ನರು ಬೌದ್ಧ ಬಿಕ್ಷುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

ಚೀನಾ ಸರ್ಕಾರವು ಅತಿ ಚಿಕ್ಕವಯಸ್ಸಿನಲ್ಲೇ ಪಂಚೇನ್ ಲಮಾನನ್ನು ಅಪಹರಿಸಿದ್ದು, ಅವರು ಇದ್ದಾರೋ ಇಲ್ಲವೋ ಮಾತ್ರ ಗೊತ್ತಿಲ್ಲ, ಆದರೆ ಪ್ರತಿ ವರ್ಷವೂ ಕೂಡ ಭಾರತದಲ್ಲಿ ಹಲವಾರು ಕಡೆ ಟಿಬೆಟ್ ಸಮುದಾಯವು ಅವರನ್ನು ನೆನಪಿಸಿಕೊಳ್ಳುತ್ತಾ ವಿವಿಧ ಬಗೆಯ ಪೂಜೆ ಕೈಂಕಾರ್ಯಗಳನ್ನು ನೆರವೇರಿಸುವುದರೊಂದಿಗೆ ಹುಟ್ಟುಹಬ್ಬದ ಆಚರಣೆ ಮಾಡುವುದು ಮಾತ್ರ ವರ್ಷ ವರ್ಷಕ್ಕೂ ಸಡಗರ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ.

ಒಂದು ವಾರದಿಂದಲೇ ತಯಾರಿ- ಬೈಲಕುಪ್ಪೆಯಲ್ಲಿರುವ ತಸಿಲುಂಪೋ ದೇವಸ್ಥಾನದ 500ಕ್ಕೂ ಹೆಚ್ಚು ಬೌದ್ಧ ಬಿಕ್ಷುಗಳು ಮಂದಿರವನ್ನೇ ಬಗೆ ಬಗೆಯ ಹೂಗಳಿಂದ ಅಲಂಕರಿಸಿ ಟಿಬೆಟಿಯನ್ ಮಾದರಿಯ ಚಿತ್ರಗಳನ್ನು ರಚಿಸಿ, ಸುತ್ತಮುತ್ತಲಿನ ಸಾರ್ವಜನಿಕರಿಗೆ ಆಹ್ವಾನ ನೀಡಿ, ಬಂದವರಿಗೆ ಹೂಗುಚ್ಛಗಳನ್ನು ನೀಡುವುದರೊಂದಿಗೆ ಎಲ್ಲರೊಡನೆ ಒಟ್ಟುಗೂಡಿ ಕೇಕ್ ಕಟ್ ಮಾಡುವುದರೊಂದಿಗೆ ಹುಟ್ಟುಹಬ್ಬ ಆಚರಿಸಿದರು.

ಶಾಲೆಯ ವಿದ್ಯಾರ್ಥಿಗಳಿಂದ ಟಿಬೆಟಿಯನ್ ಮಾದರಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇತ್ತೀಚಿನ ದಿನಗಳಲ್ಲಿ ಚೀನಾ ಸರ್ಕಾರವು ಪದೇ ಪದೇ ಅತಿಕ್ರಮಣ ಮಾಡುತ್ತಿದ್ದು, ಟಿಬೆಟಿಯನ್ನರ ಮೇಲೆ ದರ್ಪ ತೋರುತ್ತಿದೆ, ವಶಪಡಿಸಿಕೊಂಡಿರುವ ಪಂಚೇನ್ ಅವರ ಮಾಹಿತಿ ಬಿಡುಗಡೆ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಟಶೀಲಂಪೋ ದೇವಸ್ಥಾನದ ಮುಖ್ಯ ಗುರೂಜಿ, ಆಡಳಿತ ಮಂಡಳಿ ವರ್ಗ, ಟಿಬೆಟಿಯನ್ 2 ಸೆಟಲ್ಮೆಂಟ್ ಅಧಿಕಾರಿಗಳು, ಟಿಬೆಟಿಯನ್ನರು, ಬೌದ್ಧ ಬಿಕ್ಷುಗಳು ಇದ್ದರು.