ಸಾರಾಂಶ
ನಮ್ಮ ಹಿರಿಯರ ಹೋರಾಟದ ಫಲವಾಗಿ ವಿಶಾಲ ಕರ್ನಾಟಕ ಉದಯವಾಗಿದೆ.
ಫೋಟೋ - 1ಎಂವೈಎಸ್ 52ಕನ್ನಡಪ್ರಭ ವಾರ್ತೆ ಭೇರ್ಯ
ಕರ್ನಾಟಕದ ನೆಲ- ಜಲ- ನುಡಿ ರಕ್ಷಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಟಿಬದ್ಧವಾಗಿದೆ. ಅಭಿವೃದ್ಧಿ ವಿಷಯದಲ್ಲಿ ಸರ್ಕಾರದ ಜೊತೆ ಕನ್ನಡ ಪರ ಸಂಘಟನೆಗಳು ಗಟ್ಟಿಯಾಗಿ ನಿಲ್ಲಬೇಕು ಎಂದು ಶಾಸಕ ಡಿ. ರವಿಶಂಕರ್ ತಿಳಿಸಿದರುಭೇರ್ಯ ಗ್ರಾಮದಲ್ಲಿ ಕನ್ನಡ ಯುವಕರ ಸಂಘ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಹಿರಿಯರ ಹೋರಾಟದ ಫಲವಾಗಿ ವಿಶಾಲ ಕರ್ನಾಟಕ ಉದಯವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕದ ಪಾಲೂ ಇದೆ. ಸರ್ಕಾರದ ಆಡಳಿತದಲ್ಲಿ ಕನ್ನಡವೇ ಪ್ರಧಾನವಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಿವಿಗೆ ಶ್ರಮಿಸಿದ ಅನೇಕ ಸಾಧಕರನ್ನು ನೆನಪು ಮಾಡಿ ಕೊಳ್ಳತ್ತಿರುವುದು ಶ್ಲಾಘನೀಯ ಎಂದರು.ಹಲವು ವರ್ಷಗಳಿಂದ ನಿರಂತರವಾಗಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಯೋಜಿಸುವ ಮೂಲಕ ಕನ್ನಡದ ಮೇಲಿನ ಅಭಿಮಾನವನ್ನು ಇನ್ನು ಗಟ್ಟಿಗೊಳಿಸುವ ಕಾಯಕಕ್ಕೆ ಕನ್ನಡ ಯುವಕರ ಸಂಘ ಸಂಘಟನೆಯ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಮುಚ್ಚುವಂತಹದು ಎಂದರು.ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿ ಕನ್ನಡ ನಾಡು, ನುಡಿ ಚಿಂತನೆ ಭಾಷಾ ಶಿಕ್ಷಣದ ಬೆಳವಣಿಗೆಗೆ ಹೆಚ್ಚು ಹೊತ್ತು ಮಾಧ್ಯಮಗಳ ಮೂಲಕ ಮಕ್ಕಳಲ್ಲಿ ಶಿಕ್ಷಣದ ಮಹತ್ವ ಹೆಚ್ಚೆಚ್ಚು ಬರುವಂತೆ ಆದ್ಯತೆ ನೀಡುವ ಮುಖಾಂತರ ಭಾಷಾ ಬಲ ವರ್ಧನೆಗೆ ಪ್ರೇರಣೆಯಾಗಬೇಕು ಎಂದು ಅವರು ನುಡಿದರು.ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ನಮ್ಮ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿವೆ. ಭಾಷಾವಾರು ಪ್ರಾಂತ್ಯವಾಗಿ ಉದಯಿಸಿ, ಭೌಗೋಳಿಕ ಹಾಗೂ ಸಾಂಸ್ಕೃತಿಕವಾಗಿ ವಿಶಿಷ್ಟತೆ ಹೊಂದಿದೆ. ಸಂಸ್ಕೃತಿ ಮತ್ತು ಕಲೆಗಳಿಂದ ನಾಡು ಶ್ರೀಮಂತಗೊಂಡಿರುವ ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲರೂ ಹೋರಾಟ ನಡೆಸೋಣ ಎಂದರು.ಈ ವೇಳೆ ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕ ಶೇಷಾದ್ರಿಗೌಡ 38 ವರ್ಷ ಒಂದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಅವರಿಗೆ ಕನ್ನಡ ಪ್ರಶಸ್ತಿಯನ್ನು ಶಾಸಕ ಡಿ. ರವಿಶಂಕರ್ ಹಾಗೂ ಗ್ರಾಪಂ ಅಧ್ಯಕ್ಷ ಬಿ.ಕೆ. ಮಂಜಪ್ಪ ನೀಡಿ ಗೌರವಿಸಿದರು.ಇದಕ್ಕೂ ಮೊದಲು ಗ್ರಾಮದ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಶಾಲೆ, ದಿವ್ಯಾ ಜ್ಯೋತಿ ವಿದ್ಯಾಸಂಸ್ಥೆ, ಸರ್ವೋದಯ ವಿದ್ಯಾಸಂಸ್ಥೆ, ದಯಾನಂದ ಶಾಲೆ, ಪ್ಯಾರಡೈಸ್ ಇಂಟರ್ ನ್ಯಾಷನಲ್ ಸ್ಕೂಲ್, ಹೊಸ ಅಗ್ರಹಾರದ ಬಿಜಿಎಸ್ ಶಾಲೆ, ವಿಜೇತ ಶಾಲೆಯ ವಿದ್ಯಾರ್ಥಿಗಳು ವಿವಿಧ ವೇಷಭೂಷಣದೊಂದಿಗೆ ಆಲಂಕೃತ ಟ್ರಾಕ್ಟರ್ ಗಳಲ್ಲಿ ಸ್ತಬ್ಧ ಚಿತ್ರದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಕನ್ನಡಾಂಬೆಯ ಮೆರಗನ್ನು ನೆರದಿದ್ದ ಸಭಿಕರಿಗೆ ಸಾರಿದರು.ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡದ ಇತಿಹಾಸದ ಬಗ್ಗೆ ಶಾಲಾ ಮಕ್ಕಳು ಏಕ ಪಾತ್ರಾಭಿನಯ ಹಾಗೂ ಕನ್ನಡ ಪರಂಪರೆಯ ಇತಿಹಾಸವುಳ್ಳ ಭಾವಗೀತೆ, ಭಕ್ತಿಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತುಂಬಿದರು. ಸಂಜೆ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮರಾತ್ರಿ ನಡೆದ ರಸಮಂಜರಿ ಕಾರ್ಯಕ್ರಮಕ್ಕೆ ಕೆಪಿಸಿಸಿ ಸದಸ್ಯ ಸಿ.ಪಿ. ರಮೇಶ್ ಕುಮಾರ್ ಚಾಲನೆ ನೀಡಿದರೆ, ಜಿಪಂ ಮಾಜಿ ಸದಸ್ಯ ಅಮಿತ್ ದೇವರಹಟ್ಟಿ ಕನ್ನಡ ನಾಡುನುಡಿ, ಕನ್ನಡ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಮುಶೀರ್, ಬಿ.ಎಚ್. ಮಹದೇವ್, ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಹರ್ಷವರ್ಧನಿ, ಗ್ರಾಮ ಮುಖಂಡ ರಷೀದ್, ಇಲ್ಲು, ಶಿಕ್ಷಕ ವಿಜಯ್, ನಯಾಜ್ ಭಾಗವಹಿಸಿದ್ದರು.ಬಳಿಕ ಜೂನಿಯರ್ ರಾಜ್ ಕುಮಾರ್, ಜೂ. ಪುನೀತ್ ರಾಜ್ಕುಮಾರ್, ಜೂ. ಶಂಕರ್ ನಾಗ್ ವಿವಿಧ ಕಿರುತೆರೆ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.ಗೌರವಾಧ್ಯಕ್ಷ ಬಿ.ಎಂ. ಕೃಷ್ಣಗೌಡ, ಅಧ್ಯಕ್ಷ ರಾಘವೇಂದ್ರ (ಬಬ್ರು), ಉಪಾಧ್ಯಕ್ಷ ಖಲಿಪತ್, ಪ್ರಧಾನ ಕಾರ್ಯದರ್ಶಿ ಕೆ. ದಿನೇಶ್, ಪದಾಧಿಕಾರಿಗಳಾದ ಪಾಷ, ಪ್ರಕಾಶ್ ನಾಯಕ್, ಅಶೋಕ, ಲ್ಯಾಂಡ್ರಿ ಶಿವಶೆಟ್ಟಿ, ಮಣಿ, ಬಿ.ಟಿ. ಶ್ರೀನಿವಾಸ, ವಕೀಲ ಸತೀಶ್, ಟಿ.ಸಿ. ಮಂಜು, ಚಂದು ಮೊದಲಾದವರು ಇದ್ದರು.