ಹಿರೇಕೆರೂರು ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ದಸರಾ ಹಬ್ಬದ ನಿಮಿತ್ತ ದುರ್ಗಾ ಹೋಮ ಆಚರಣೆ ಸಮಿತಿಯ ವತಿಯಿಂದ ಲೋಕಕಲ್ಯಾಣ ಮತ್ತು ಒಳ್ಳೆಯ ಮಳೆ, ಬೆಳೆಗಾಗಿ ಏರ್ಪಡಿಸಿರುವ ವಿವಿಧ ಹೋಮ ಮತ್ತು ವಿಶೇಷ ಪೂಜೆಗಳಿಗೆ ಶೈಲಪುತ್ರಿ ಹೋಮಕ್ಕೆ ಚಾಲನೆ ನೀಡಲಾಯಿತು.
ಹಿರೇಕೆರೂರು: ಶರನ್ನವರಾತ್ರಿಯಂದು ದೇವಿ ವಿಶೇಷ ರೂಪ ಧರಿಸಲಿದ್ದು, ಬೇಡಿ ಬಂದ ಭಕ್ತಾದಿಗಳಿಗೆ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ಈ 9 ದಿನಗಳು ಅತ್ಯಂತ ಮಹತ್ವ ಪಡೆದಿವೆ ಎಂದು ಉದ್ಯಮಿ ಬಾಲು ಜನ್ನು ಹೇಳಿದರು.
ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ದಸರಾ ಹಬ್ಬದ ನಿಮಿತ್ತ ದುರ್ಗಾ ಹೋಮ ಆಚರಣೆ ಸಮಿತಿಯ ವತಿಯಿಂದ ಲೋಕಕಲ್ಯಾಣ ಮತ್ತು ಒಳ್ಳೆಯ ಮಳೆ, ಬೆಳೆಗಾಗಿ ಸಂಕಲ್ಪ ಮಾಡಿಕೊಂಡು ಅ.11ರಿಂದ 21ರ ವರೆಗೆ ಪ್ರತಿದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಏರ್ಪಡಿಸಿರುವ ವಿವಿಧ ಹೋಮ ಮತ್ತು ವಿಶೇಷ ಪೂಜೆಗಳಿಗೆ ಶೈಲಪುತ್ರಿ ಹೋಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಧಾರವಾಡದ ವೇದಮೂರ್ತಿ ಸಂತೋಷ್ ಭಟ್ ಮಾತನಾಡಿ, ನಿಜವಾದ ಭಕ್ತಿ ಇಷ್ಟಾರ್ಥಗಳು ಈಡೇರುತ್ತವೆ ಎಂದರು. ನಂತರ ಅನ್ನಸಂತರ್ಪಣೆ ನಡೆಯಿತು.
ದುರ್ಗಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಜಗದೀಶ ತಂಬಾಕದ, ಪಪಂ ಮಾಜಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಸದಸ್ಯ ಹರೀಶ ಕಲಾಲ್, ಮಂಜುನಾಥ ತಂಬಾಕದ, ಅರವಿಂದ ನಾಡಿಗೇರ, ರುದ್ರೇಶ ಬೇತೂರ, ಸತೀಶ ನಾಡಿಗೇರ, ಗುರುಮೂರ್ತಿ ನಾಡಿಗೇರ, ರಮೇಶ ಕುಂಕುಮಗಾರ, ಲಿಂಗರಾಜ ನಾಯ್ಕರ, ಇಂದುಧರ ಹಳಕಟ್ಟಿ, ರಾಜು ಖಾಂಡೆ, ಮಹಾದೇವಪ್ಪ ನಾಯ್ಕರ, ಸುರೇಶ ಮೋಹಿತೆ, ಸುರೇಶ ತಿಪ್ಪಕ್ಕಳವರ, ಚನ್ನಬಸಪ್ಪ ತಿಪ್ಪಕ್ಕಳವರ, ಪ್ರಕಾಶ ಹಿತ್ತಳ್ಳಿ, ಮಿಥುನ ಚಿಂದಿ, ಮಂಜುನಾಥ ಒಂಟಕರ ಹಾಗೂ ಭಕ್ತರು ಇದ್ದರು.