ಸಾರಾಂಶ
ರೌಡಿಶೀಟರ್ ಸೈಫುಗೆ ಕೊಲೆಗಾರ ಫೈಸಲ್ ತನ್ನ ಪತ್ನಿಯಿಂದ ಕರೆ ಮಾಡಿ ಕರೆಸಿದ್ದ!ಕನ್ನಡಪ್ರಭ ವಾರ್ತೆ ಉಡುಪಿ
ಕುಖ್ಯಾತ ರೌಡಿ ಶೀಟರ್ ಸೈಫುದ್ದೀನ್‌ನ ಕೊಲೆಗೆ ಮುಖ್ಯ ಆರೋಪಿ, ತನ್ನ ಪತ್ನಿಯನ್ನೇ ಹನಿಟ್ರ್ಯಾಪ್ ರೀತಿಯಲ್ಲಿ ಬಳಸಿಕೊಂಡಿದ್ದ ಎಂಬುದು ಬಹಿರಂಗವಾಗಿದೆ.ಸೆ.27ರಂದು ಖಾಸಗಿ ಬಸ್‌ಗಳ ಮಾಲಕ ಸೈಫುದ್ದಿನ್‌ನನ್ನು ಆತನ ಜೊತೆ ವ್ಯವಹಾರ ಮಾಡುತ್ತಿದ್ದ ಮಹಮ್ಮದ್ ಫೈಜಲ್, ಮೊಹಮ್ಮದ್ ಶರೀಫ್ ಹಾಗೂ ಅಬ್ದುಲ್ ಶುಕೂರ್ ತಲವಾರುಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಆತ್ರಾಡಿಯ ತಂದೆಯ ಮನೆಯಲ್ಲಿದ್ದ ಸೈಫುದ್ದಿನನ್ನು ಕೊಡವೂರಿನ ಆತನ ಮನೆಗೆ ಕರೆಸಿಕೊಳ್ಳಲು ಫೈಸಲ್ ತನ್ನ ಹೆಂಡತಿ ರಿಧಾ ಶಬನಾಳನ್ನು ಬಳಸಿಕೊಂಡಿದ್ದ. ಸೈಫುದ್ದಿನ್ ಮತ್ತು ರಿಧಾ ಕಳೆದ ಒಂದು ವರ್ಷಗಳಿಂದ ಮೊಬೈಲಿನಲ್ಲಿ ಆತ್ಮೀಯರಾಗಿದ್ದರು. ಇದು ಗೊತ್ತಾಗಿದ್ದ ಫೈಜಲ್, ತನ್ನ ಪತ್ನಿಯನ್ನೇ ಅಸ್ತ್ರವಾಗಿ ಬಳಸಿಕೊಂಡು, ಆಕೆಯ ಮೂಲಕ ಸೈಫುದ್ದೀನ್‌ಗೆ ಕರೆ ಮಾಡಿಸಿ, ಕೊಡವೂರಿನಲ್ಲಿರುವ ಮನೆಯಲ್ಲಿ ತಾನು ಕಾಯುತ್ತಿದ್ದೇನೆ, ಬಾ ಎಂದು ಹೇಳಿಸಿದ್ದ. ಮತ್ತು ಖುದ್ದ ತಾನೇ ಕಾರಿನಲ್ಲಿ ಸೈಫುದ್ದೀನನ್ನು ಕೊಡವೂರಿನ ಮನೆಗೆ ಕರೆ ತಂದಿದ್ದ. ಆಗ ಮನೆಯ ಶೆಡ್‌ನಲ್ಲಿ ಅವಿತಿದ್ದ ಇನ್ನಿಬ್ಬರು ಆರೋಪಿಗಳು ಸೈಫುದ್ದೀನ್ ತಲೆಗೆ ರಾಡ್‌ನಿಂದ ಹೊಡೆದು, ಚೂರಿಯಿಂದ ಇರಿದು, ತಲವಾರುನಿಂದ ಕಡಿದು ಕೊಂದು ಹಾಕಿದ್ದಾರೆ.ಈ ಕೊಲೆಗೆ ಫೈಜಲ್‌ನಿಗೆ ವೈಯಕ್ತಿಕ ದ್ವೇಷ ಮಾತ್ರ ಕಾರಣವಲ್ಲ, ಹೊರಗಿನಿಂದ ಹಣಕಾಸಿನ ನೆರವು ನೀಡಿರುವ ಬಗ್ಗೆಯೂ ತನಿಖೆಯಿಂದ ಬಯಲಾಗಿದೆ. ಪ್ರಕರಣದ ಹಿಂದೆ ಇರುವವರ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ.