ಸಾರಾಂಶ
ಕಳ್ಳತನ ಪ್ರಕರಣ ಒಂದರಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿಯನ್ನು 20 ವರ್ಷಗಳ ಬಳಿಕ ಸಂಕೇಶ್ವರ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಕಳ್ಳತನ ಪ್ರಕರಣ ಒಂದರಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿಯನ್ನು 20 ವರ್ಷಗಳ ಬಳಿಕ ಸಂಕೇಶ್ವರ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಸಿಲಿಂಡರ್ ಕಳ್ಳತನ ಮಾಡಿದ್ದ ಆರೋಪಿಯಾದ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ರಾಜು ಪ್ರತಾಪರಾವ್ ಚಂದವಾನಿ (65) ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೋಗಿ ಮರಳಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಕಳೆದ 2005 ರಿಂದ ತಲೆಮರಿಸಿಕೊಂಡಿದ್ದನು. ಆರೋಪಿಯ ಪತ್ತೆಗಾಗಿ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಮಾರ್ಗದರ್ಶನದಂತೆ ಗೋಕಾಕ ಡಿಎಸ್ಪಿ ಡಿ.ಎಚ್.ಮುಲ್ಲಾ ಹಾಗೂ ಸಂಕೇಶ್ವರ ಸಿಪಿಐ ಎಸ್.ಎಂ.ಅವಜಿ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿ ಎಸ್.ಆರ್.ಬೇವಿನಕಟ್ಟಿ ಮತ್ತು ಯು.ಎಂ.ಕಾಂಬಳೆ ಅವರಿಗೆ ನೇಮಕ ಮಾಡಲಾಗಿತ್ತು. ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ತಲೆ ಮರೆಸಿಕೊಂಡಿದ್ದ ಆರೋಪಿತನಿಗೆ 01-05-2025 ರಂದು ಕೊಲ್ಲಾಪುರದ ನ್ಯೂ ಶಾಹು ಪುರಿಯಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆದುಕೊಂಡು ಬಂದಿದ್ದು, ನಂತರ ಆರೋಪಿತನಿಗೆ ಸಂಕೇಶ್ವರ್ ಜೆಎಂಎಫ್‌ಸಿ ನ್ಯಾಯಾಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದರಿ ಪತ್ತೆ ಕಾರ್ಯ ಕೈಗೊಂಡ ಅಧಿಕಾರಿ ಸಿಬ್ಬಂದಿಯವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಭೀಮಾಶಂಕರ್ ಗುಳೇದ ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.