ಬ್ಯಾಗ್‌ನಿಂದ ಚಿನ್ನಾಭರಣ ಕದ್ದಿದ್ದ ಆರೋಪಿ ಬಂಧನ

| Published : Jan 12 2025, 01:16 AM IST

ಸಾರಾಂಶ

ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ಮಹತ್ವದ ಸುಳಿವಿನೊಂದಿಗೆ ಬೆನ್ನಟ್ಟಿದಾಗ ಬ್ಯಾಗ್‌ ಕಳ್ಳತನವನ್ನೇ ಕಸುಬಾಗಿಸಿಕೊಂಡ ನಸೀಮಾಳನ್ನು ವಶಕ್ಕೆ ತೆಗೆದುಕೊಂಡರು. ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಕೃತ್ಯವನ್ನು ಒಪ್ಪಿಕೊಂಡು ತನ್ನ ಸ್ಕೂಟಿಯಲ್ಲಿ ಅಡಗಿಸಿಟ್ಟಿದ್ದ ಎಲ್ಲ ಚಿನ್ನಾಭರಣವನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾಳೆ.

ಉಪ್ಪಿನಂಗಡಿ: ಕಳೆದ ಸೋಮವಾರ ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಿಂದ ೧೧೪ ಗ್ರಾಂ ತೂಕದ ಚಿನ್ನಾಭರಣದ ಎಗರಿಸಿದ್ದ ಪ್ರಕರಣವನ್ನು ಬೇಧಿಸಿದ ಉಪ್ಪಿನಂಗಡಿ ಪೊಲೀಸರು, ಬಂಟ್ವಾಳ ತಾಲೂಕು ಕೊಮಿನಡ್ಕ ಮನೆ ನಿವಾಸಿ ನಸೀಮಾ (೩೧) ಎಂಬಾಕೆಯನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯಿಂದ ಕಳವಿಗೀಡಾದ ಎಲ್ಲ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಕಡಬ ತಾಲುಕು ಬಂಟ್ರ ಗ್ರಾಮದ ನೆಕ್ಕಿತ್ತಡ್ಕ ಮನೆ ನಿವಾಸಿ ಮುಸ್ತಾಫ ಎಂಬವರ ಪತ್ನಿ ಅಬೀಬಾ ಮತ್ತು ಹಸೀರಾಬಾನು ಜ.6ರಂದು ಪೆರ್ನೆಯಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಹೋಗುವ ಮುನ್ನ ಭದ್ರತೆಯ ದೃಷ್ಠಿಯಿಂದ ಮನೆಯಲ್ಲಿದ್ದ ಅವರ ಸುಮಾರು 8 ಗ್ರಾಂ ತೂಕದ ಚಿನ್ನದ ನೆಕ್ಲೇಸ್ -1 ಮತ್ತು ಹಸೀರಾಬಾನು ಅವರ ಸುಮಾರು 106 ಗ್ರಾಂ ತೂಕದ ಚಿನ್ನಾಭರಣವನ್ನು ಒಂದು ಬಾಕ್ಸಿನಲ್ಲಿ ಹಾಕಿ ವ್ಯಾನಿಟಿ ಬ್ಯಾಗಲ್ಲಿ ಇಟ್ಟುಕೊಂಡು ಹೋಗಿದ್ದರು.

ಮದುವೆ ಮುಗಿಸಿ ವಾಪಸ್‌ ಹೋಗಲು ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ, ಐಡಿ ಕಾರ್ಡ್ ತೆಗೆಯಲೆಂದು ನೋಡಿದಾಗ ವ್ಯಾನಿಟಿ ಬ್ಯಾಗಿನ ಜಿಪ್ ತೆರೆದಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಅದದಲ್ಲಿದ್ದ ಚಿನ್ನಾಭರಣವಿದ್ದ ಬಾಕ್ಸ್‌ ನಾಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ದೂರು ನೀಡಿದ್ದರು.

ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ಮಹತ್ವದ ಸುಳಿವಿನೊಂದಿಗೆ ಬೆನ್ನಟ್ಟಿದಾಗ ಬ್ಯಾಗ್‌ ಕಳ್ಳತನವನ್ನೇ ಕಸುಬಾಗಿಸಿಕೊಂಡ ನಸೀಮಾಳನ್ನು ವಶಕ್ಕೆ ತೆಗೆದುಕೊಂಡರು. ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಕೃತ್ಯವನ್ನು ಒಪ್ಪಿಕೊಂಡು ತನ್ನ ಸ್ಕೂಟಿಯಲ್ಲಿ ಅಡಗಿಸಿಟ್ಟಿದ್ದ ಎಲ್ಲ ಚಿನ್ನಾಭರಣವನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾಳೆ.

ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಮತ್ತು ಉಪ ನಿರೀಕ್ಷಕ ಅವಿನಾಶ್, ಸಿಬ್ಬಂದಿಗಳಾದ ಕವಿತಾ, ಹಿತೋಷ್, ನಾಗರಾಜ, ಮೋಹನ್, ಗಿರೀಶ್, ಹೇಮರಾಜ್, ದಿವಾಕರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.