ಅಕ್ರಮ ಗಾಂಜಾ ಮಾರಾಟ ನಡೆಸುತ್ತಿದ್ದ ಆರೋಪಿ ಬಂಧನ

| Published : Jun 30 2024, 12:47 AM IST

ಅಕ್ರಮ ಗಾಂಜಾ ಮಾರಾಟ ನಡೆಸುತ್ತಿದ್ದ ಆರೋಪಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಗಾಂಜಾ ಮಾರಾಟ ನಡೆಸುತ್ತಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿ ವಶದಲ್ಲಿದ್ದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು ಅಂದಾಜು ಮೌಲ್ಯ 30, 000 ರು . ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಮಾದಾಪುರ ನಂದಿಮೊಟ್ಟೆ ಬಳಿಯ ಯುವಕನೋರ್ವ ಅಕ್ರಮ ಗಾಂಜಾ ಮಾರಾಟ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ಮಾಲು ಸಮೇತ ಆರೋಪಿಯನ್ನು ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.

ಸುಂಟಿಕೊಪ್ಪ ಮತ್ತು ಕುಶಾಲನಗರ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ನಿವಾಸಿಯಾಗಿದ್ದು, ಮಾದಾಪುರದ ನಂದಿಮೊಟ್ಟೆಯಲ್ಲಿ ನೆಲೆಸಿರುವ ತೋಮಿಜುದ್ದೀನ್ ಆಲಿಯಾಸ್ ಅನ್ವರ್ ಹುಸೈನ್ (23) ಎಂಬಾತನನ್ನು ಸುಂಟಿಕೊಪ್ಪದ ಉಲುಗುಲಿ ತೋಟದ ಬಳಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನ ನಡೆಸುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ಶನಿವಾರ ಬಂಧಿಸಲಾಗಿದೆ. ಆರೋಪಿ ವಶದಲ್ಲಿದ್ದ 750 ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು ಅಂದಾಜು ಮೌಲ್ಯ 30,000 ರು. ಎನ್ನಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಎಎಸ್‌ಪಿ ಸುಂದರ್ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಡಿವೈಎಸ್‌ಪಿ ಗಂಗಾಧರಪ್ಪ, ಕುಶಾಲನಗರ ಸಿಪಿಐ ರಾಜೇಶ್ ಕೋಟ್ಯಾನ್ ಸೂಚನೆ ಮೇರೆಗೆ ಕಾರ್ಯಾಚರಣೆಗಿಳಿದ ಪ್ರಭಾರ ಠಾಣಾಧಿಕಾರಿ ರಮೇಶ್ ಪೆಡ್ಡಣನವರ್, ಅಪರಾಧ ವಿಭಾಗದ ಪಿಎಸ್‌ಐ ಸ್ವಾಮಿ, ಎಎಸ್‌ಐ ವೆಂಕಟೇಶ್, ಸಿಬ್ಬಂದಿ ಸತೀಶ್, ಪ್ರಕಾಶ್, ಜೀವನ್, ಪ್ರವೀಣ್, ರಂಜೀತ್, ವೆಂಕಟೇಶ್, ರಮೇಶ್, ಜಗದೀಶ್, ಸೌಮ್ಯ ಪಾಲ್ಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.