- ಎಂಕೆಎಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ಹರಿಹರ
ಮಕ್ಕಳ ಸಾಧನೆಗೆ ನಿಜವಾದ ಸ್ಫೂರ್ತಿ ಸಾಧಕರ ಸಾಧನೆಯಾಗಿದೆ. ಆ ಸ್ಪೂರ್ತಿಯಿಂದಲೇ ಗುರಿ ಸಾಧಿಸುವ ದೃಢ ಮನಸ್ಸು, ಕಠಿಣ ಪರಿಶ್ರಮ ಮತ್ತು ಉತ್ತಮ ಮಾರ್ಗದರ್ಶನ ಸಾಧ್ಯವಾಗುತ್ತದೆ. ಅವೆಲ್ಲಾ ಇದ್ದಲ್ಲಿ ಯಾವುದೇ ಸಾಧನೆ ಅಸಾಧ್ಯವಲ್ಲ ಎಂದು ಮೈಸೂರ್ ಕಿರ್ಲೋಸ್ಕರ್ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ರವೀಂದ್ರ ವಿ. ಗುಮಾಸ್ತೆ ಹೇಳಿದರು.ನಗರದ ಎಂಕೆಎಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಜಾರಾಂ ಒಳಾಂಗಣ ಕ್ರೀಡಾ ಸಂಕೀರ್ಣ ಉದ್ಘಾಟನೆ ಹಾಗೂ ಎಐಎಸ್‌ಎಸ್‌ಇ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ಸಾಧನೆಯೂ ದೇಶದ ಅಭಿವೃದ್ಧಿಗೆ ಪೂರಕವಾಗುವಂತಿರಬೇಕು. ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನದ ಗುರಿಯನ್ನು ಸ್ಪಷ್ಟವಾಗಿ ರೂಪಿಸಿಕೊಂಡು, ಅದನ್ನು ಸಾಧಿಸಲು ಶಿಸ್ತು, ಪರಿಶ್ರಮ ಹಾಗೂ ಉತ್ತಮ ಮಾರ್ಗದರ್ಶನದೊಂದಿಗೆ ಮುನ್ನಡೆಯಬೇಕು ಎಂದು ತಿಳಿಸಿದರು.
ಟ್ರಸ್ಟ್ ಧರ್ಮದರ್ಶಿ ಆರ್.ಎಸ್. ಶ್ರೀವಾತ್ಸನ್ ಮಾತನಾಡಿ, ಭಾರತದ ಯುವಪೀಳಿಗೆಯೇ ದೇಶದ ಭವಿಷ್ಯದ ಶಕ್ತಿ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಾಧಿಸುವ ಸಾಮರ್ಥ್ಯ ಅಡಗಿದೆ. ಗುರಿ ಸಾಧಿಸಲು ಕೇವಲ ಆಸೆ ಇದ್ದರೆ ಸಾಲದು. ದೃಢಸಂಕಲ್ಪ, ನಿರಂತರ ಪ್ರಯತ್ನ, ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಛಲ ಅತ್ಯಗತ್ಯ ಎಂದರು.
ಇದೆ ಸಂದರ್ಭದಲ್ಲಿ (ಎಐಎಸ್‌ಎಸ್‌ಇ) ಪರೀಕ್ಷೆಯಲ್ಲಿ ಶೇ.96.4 ಅಂಕಗಳನ್ನು ಗಳಿಸಿದ ಕೆ.ಜಿ. ತರುಣ್ ಪಾಟೀಲ್ ಅವರಿಗೆ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಡಿಸ್ಟಿಂಕ್ಷನ್ ಸಾಧನೆ ಮಾಡಿರುವ 25ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರಶಸ್ತಿ ಪತ್ರ, ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.ಒಳಾಂಗಣ ಕ್ರೀಡಾ ಸಂಕೀರ್ಣ ವಿನ್ಯಾಸಕರ್ತ ಸುನೀಲ್ ಶೇಲಾರ್ ಅವರನ್ನು ಅಭಿನಂದಿಸಲಾಯಿತು. ಶಾಲೆಯ ಪ್ರಾಚಾರ್ಯೆ ಅರ್ಚನಾ ಮುಳಗುಂದ್, ಮುಖ್ಯ ಶಿಕ್ಷಕಿ ಪರಿಮಳಾ ಕೆ., ಪಿಯುಸಿ ವಿಭಾಗದ ಮುಖ್ಯಸ್ಥ ಗುರುಮೂರ್ತಿ ಸಿ.ಎಂ., ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಇದ್ದರು.
- - --26ಎಚ್.ಆರ್.ಆರ್01:
ಹರಿಹರ ನಗರದ ಎಂಕೆಎಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಐಎಸ್‌ಎಸ್‌ಇ ಪರೀಕ್ಷೆಯಲ್ಲಿ ಶೇ.96.4 ಅಂಕ ಗಳಿಸಿದ ಕೆ.ಜಿ. ತರುಣ್ ಪಾಟೀಲ್ ಅವರನ್ನು ಪುರಸ್ಕರಿಸಲಾಯಿತು.