ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಕೃತ್ಯ ಅಮಾನವೀಯ: ಡಾ. ಭರತ್‌ ಶೆಟ್ಟಿ

| Published : Apr 23 2025, 12:37 AM IST

ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಕೃತ್ಯ ಅಮಾನವೀಯ: ಡಾ. ಭರತ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಿಂದುಗಳನ್ನು ಗಮನಿಸಲು, ಅವರನ್ನು ಅವಮಾನಿಸಲು ಎಲ್ಲಾ ಕಡೆ ಪ್ರಯತ್ನಿಸುತ್ತಲೇ ಇದೆ. ಹಿಂದೂಪರ ಹೋರಾಟಗಾರರಿಗೆ, ಶಾಸಕರ ಮೇಲೆ ಕೇಸಿನ ಮೇಲೆ ಕೇಸು ಹಾಕುವ ಈ ಸರ್ಕಾರ ಇದೀಗ ಬ್ರಾಹ್ಮಣರ ಜನಿವಾರ ಕತ್ತರಿಸುವ ಮೂಲಕ ಬ್ರಾಹ್ಮಣರ ಶಾಪಕ್ಕೆ ಗುರಿಯಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸಿಇಟಿ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಪೊಲೀಸರಿಗೆ ಹಿಜಾಬ್ ಧರಿಸಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮುಂದೆ ಈ ಧೈರ್ಯ ಏಕೆ ಇರಲಿಲ್ಲ, ಈ ಸರ್ಕಾರಕ್ಕೆ ಬ್ರಾಹ್ಮಣ ಶಾಪ ತಟ್ಟಿದ್ದು ಇದರ ಪರಿಣಾಮ ಶೀಘ್ರ ತಿಳಿಯಲಿದೆ. ಪೊಲೀಸರ ಅತಿರೇಕದ ವರ್ತನೆಯೂ ಹೆಚ್ಚುತ್ತಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಿಂದುಗಳನ್ನು ಗಮನಿಸಲು, ಅವರನ್ನು ಅವಮಾನಿಸಲು ಎಲ್ಲಾ ಕಡೆ ಪ್ರಯತ್ನಿಸುತ್ತಲೇ ಇದೆ. ಹಿಂದೂಪರ ಹೋರಾಟಗಾರರಿಗೆ, ಶಾಸಕರ ಮೇಲೆ ಕೇಸಿನ ಮೇಲೆ ಕೇಸು ಹಾಕುವ ಈ ಸರ್ಕಾರ ಇದೀಗ ಬ್ರಾಹ್ಮಣರ ಜನಿವಾರ ಕತ್ತರಿಸುವ ಮೂಲಕ ಬ್ರಾಹ್ಮಣರ ಶಾಪಕ್ಕೆ ಗುರಿಯಾಗಿದೆ ಎಂದಿದ್ದಾರೆ.

ಈ ಘಟನೆಯ ವಿರುದ್ಧ ಬ್ರಾಹ್ಮಣ ಸಂಘಟನೆ ಮಾತ್ರ ಅಲ್ಲ, ರಾಜ್ಯದ ಇಡೀ ಹಿಂದೂ ಸಮುದಾಯ ಎದ್ದುನಿಂತು ಒಕ್ಕೊರಲಿನಿಂದ ಪ್ರತಿಭಟಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸಿಇಟಿ ಪರೀಕ್ಷಾ ಕೇಂದ್ರ ಒಂದರಲ್ಲಿ ಭದ್ರತೆಗೆ ಬಂದಿದ್ದ ಪೊಲೀಸರು ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರವನ್ನೇ ಕತ್ತರಿಸಿ ಹಿಂದುಗಳ ವಿರುದ್ಧ ದೌರ್ಜನ್ಯವನ್ನು ಮಾಡಿದ ಅಧಿಕಾರಿಗಳನ್ನು ಪತ್ತೆಹಚ್ಚಿ ಅಮಾನತು ಮಾಡುವ ಕಾರ್ಯವನ್ನು ಪೋಲಿಸಿ ಇಲಾಖೆ ಮಾಡಬೇಕು. ಹಿಂದೂ ಪರ ಯಾವುದೇ ಕೆಲಸ ಮಾಡದ ಈ ಸರ್ಕಾರ ವಕ್ಫ್ ಕಾಯಿದೆ ಜಾರಿ ಮಾಡುವುದಿಲ್ಲ, ಒಂದೇ ಮತದವರ ಕ್ರಿಮಿನಲ್ ಕೇಸ್ ತೆಗೆದು ಹಾಕುತ್ತದೆ. ಅವರಿಗೆ ಶೇ.4 ಮೀಸಲಾತಿ ನೀಡುತ್ತದೆ. ಓಟ್ ಬ್ಯಾಂಕ್ ರಾಜಕೀಯಕ್ಕೆ ಶರಣಾಗಿ ಬಹುಸಂಖ್ಯಾತ ರಿಗೆ ಅನ್ಯಾಯ ಮಾಡುತ್ತಿದೆ. ಇದಕ್ಕೆ ಬೇಗನೆ ಇತಶ್ರೀ ಸಿಗಲಿದೆ ಎಂದು ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.