ಹಳೆ ವಿದ್ಯಾರ್ಥಿಗಳು ಗುರುವನ್ನು ಗೌರವಿಸುವ ಕಾರ್ಯ ಶ್ಲಾಘನೀಯ

| Published : May 21 2024, 12:30 AM IST

ಸಾರಾಂಶ

ಬಸವಕಲ್ಯಾಣದ ಎಸ್ಎಸ್‌ಕೆ ಬಸವೇಶ್ವರ ಮಹಾವಿದ್ಯಾಲಯದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ನಗರದ ಪ್ರಥಮ ಕಾಲೇಜ ಎಂಬ ಹೆಗ್ಗಳಿಕೆಗೆ ಪಾತ್ರವಾದ ಎಸ್ಎಸ್‌ಕೆ ಬಸವೇಶ್ವರ ಮಹಾವಿದ್ಯಾಲಯದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಸ್ಮರಣೀಯವಾಗಿದೆ ಎಂದು ಪ್ರಾಚಾರ್ಯ ಡಾ.ಬಸವರಾಜ ಎವಲೆ ನುಡಿದರು.

ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಬಸವಕಲ್ಯಾಣದಲ್ಲಿ ನಡೆಯುವ ಎಸ್ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ನಾತಕ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯದದಲ್ಲಿ ಭಾನುವಾರ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರು ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಹಳೆ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ಜತೆಗೆ ವಿದ್ಯೆ ಕಲಿಸಿದ ಗುರುಗಳನ್ನು ನೆನಪಿಸಿಕೊಂಡು ಗೌರವಿಸುವ ಅಪರೂಪದ ಕಾರ್ಯಕ್ರಮ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಕಾಲೇಜಿನ ಪ್ರಗತಿಗೆ ಹಳೆ ವಿದ್ಯಾರ್ಥಿಗಳು ಸಹಕಾರ ನೀಡಬೇಕೆಂದು ತಿಳಿಸಿದರು. ಹಳೆ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ, ಮಾರ್ಗದರ್ಶನ ನೀಡಿದ ಗುರುಗಳನ್ನು ಈ ಸಂಧರ್ಭದಲ್ಲಿ ಸತ್ಕರಿಸಿ ಗೌರವಿಸಿದರು.

ಧಾರವಾಡ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಡಾ.ಕೆ.ಆರ್.ದುರ್ಗಾದಾಸ ಉದ್ಘಾಟಿಸಿ ಮಾತನಾಡಿ, ಕಾಯಕ, ದಾಸೋಹ, ಸಿದ್ಧಾಂತ ನೀಡಿದ ಕಲ್ಯಾಣ ನೆಲದಲ್ಲಿ ಈ ಕಾಲೇಜು ಉತ್ತಮ ಶಿಕ್ಷಣ ನೀಡುವ ಮೂಲಕ ಬಹಳಷ್ಟು ವಿದ್ಯಾರ್ಥಿಗಳಿಗೆ ಬದುಕು ಕಟ್ಟುಕೊಟ್ಟಿದೆ ಎಂದರು.

ನಿವೃತ್ತ ಪ್ರಾಚಾರ್ಯರು ಹಾಗೂ ಸ್ಥಳೀಯ ಆಡಳಿತ ಮಂಡಳಿ ಸದಸ್ಯರಾದ ಅಶೋಕಕುಮಾರ ಶ್ರೀವಾಸ್ತವ ಮಾತನಾಡಿ, ಹಿಂದುಳಿದ ಈ ಭಾಗದಲ್ಲಿ ಶಿಕ್ಷಣದಲ್ಲಿ ಶರಣಬಸವೇಶ್ವರ ವಿಧ್ಯಾವರ್ಧಕ ಸಂಘದ ಸೇವೆ ಸ್ಮರಣೀಯವಾಗಿದೆ ಪ್ರೊ.ಡಾ. ಕಾಶಿನಾಥ ಅಂಬುಲಗೆ, ಡಾ.ಎಸ್.ಎ ಪಾಳೆಕರ, ಸಿ.ಬಿ.ಪರತಾಪರೆ, ಆರ್.ಎಸ್.ಬಿರಾದರ, ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್ ತಮ್ಮ ಶೈಕ್ಷಣಿಕ ಜೀವದ ಅನಿಸಿಕೆ ಹಂಚಿಕೊಂಡರು.

ಹಳೆ ವಿದ್ಯಾರ್ಥಿಗಳ ಪರವಾಗಿ ತುಮಕೂರು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೆಂಕಟರೆಡ್ಡಿ ರಾಮರೆಡ್ಡಿ, ಶಿವಕುಮಾರ ಶಿಲವಂತ ಬಸವಕಲ್ಯಾಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರವಿ ಚಂದನಕೆರೆ, ಮಾತನಾಡಿದರು.

ಪ್ರೊ.ಆರ್.ಡಿ.ಬಾಲಿಕಿಲೆ, ಡಾ. ಶಿವಕುಮಾರ ಪಾಟೀಲ್ ಸೇರಿ ಮಹಾವಿದ್ಯಾಲಯದ ಉಪನ್ಯಾಸಕರು ಮತ್ತು ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಪ್ರೊ.ಡಾ. ಶಾಂತಾ ಸ್ವಾಗತಿಸಿದರು. ಶ್ರೀ ಅಭಿಮನ್ಯು ಬಿರಾದಾರ ವಂದಿಸಿದರು. ಜ್ಯೋತಿ ತೂಗಾಂವೆ ನಿರೂಪಿಸಿದರು.

ಹಳೆ ವಿದ್ಯಾರ್ಥಿಗಳಾದ ಬಸವರಾಜೇಶ್ವರ ಕೋರಕೆ, ರಾಜು ಮಂಠಾಳೆ, ಶಿವಬಸಪ್ಪ ಚನ್ನಮಲ್ಲೆ, ಸಂಜಯ ಪಾಟೀಲ್, ರವಿ ಗುರ್ಜರ, ಅರವಿಂದರೆಡ್ಡಿ, ರಾಜು ಧರಣೆ, ಬಸವರಾಜೇಶ್ವರಿ, ಪ್ರಕಾಶ ಪಾಟೀಲ್, ಪ್ರಸನ್ನ ಶಿರೋಳ, ವಿಜಯಕುಮಾರ ಪಾಟೀಲ್, ಚಂದ್ರಶೇಖರ ದಾಬಕೆ, ರಾಶೇಖರ್ ಮಡಕೆ, ಅನೀಲ ವಾಂಜರಖೇಡ, ಬಸವರಾಜ ಪಟ್ಟೆ, ರಾಜು ಮಡಕೆ, ಮಲ್ಲಿಕಾರ್ಜುನ ಟೊಣಪೆ ಮತ್ತಿತರಿದ್ದರು.