(ಬಾಟಂ) ಕೆಳದಿ ಅರಸರ ಆಡಳಿತ ವ್ಯಾಪ್ತಿ ವಿಶಾಲವಾದದ್ದು: ಡಾ.ಗಣಪತಿ

| Published : Oct 28 2024, 12:48 AM IST / Updated: Oct 28 2024, 12:49 AM IST

ಸಾರಾಂಶ

ಆನಂದಪುರ ಸಮೀಪದ ಇತಿಹಾಸ ಪ್ರಸಿದ್ಧವಾದ ಮಲಂದೂರು ಮಹಾಂತನ ಮಠದ ಚಂಪಕ ಸರಸು ಕೊಳವನ್ನು ವೀಕ್ಷಿಸುತ್ತಿರುವ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು.

ಕನ್ನಡಪ್ರಭ ವಾರ್ತೆ ಆನಂದಪುರ

ಭೂಮಿ ಫಲವತ್ತತೆಯ ಆಧಾರದ ಮೇಲೆ ಕಂದಾಯ ನಿಗದಿ ಮಾಡಿದ ಪ್ರಥಮ ಅರಸು ಕೆಳದಿ ಶಿವಪ್ಪ ನಾಯಕ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಗಣಪತಿ ತಿಳಿಸಿದರು.

ಸಮೀಪದ ಮಲಂದೂರು ಮಹಾಂತನ ಮಠದ ಚಂಪಕ ಸರಸು ಕೊಳವನ್ನು ವೀಕ್ಷಿಸಲು ಆಗಮಿಸಿದ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೆಳದಿ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಮಹಾಂತನ ಮಠ ಚಂಪಕ ಸರಸು ಕೊಳದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಕೆಳದಿ ಅರಸರ ಆಡಳಿತ ವ್ಯಾಪ್ತಿ ವಿಶಾಲವಾಗಿದ್ದು, ಕೆಳದಿ ಶಿವಪ್ಪ ನಾಯಕ ತನ್ನ ಆಡಳಿತದ ಅವಧಿಯಲ್ಲಿ ದೇವಾಲಯ, ಕೊಳ ಕೋಟೆಗಳನ್ನು ನಿರ್ಮಿಸಿದಂತಹ ಕೀರ್ತಿ ಅವರದಾಗಿದೆ ಎಂದು ಹೇಳಿದರು.

ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ ಅವರು ನೀರಿನ ಮೂಲಗಳನ್ನು ಹುಡುಕಿ. ನೀರನ್ನು ಸಂಗ್ರಹಿಸಿ ರೈತರಿಗೆ ಅನುಕೂಲವಾಗುವಂತೆ ಕೊಳಗಳನ್ನು ನಿರ್ಮಾಣ ಮಾಡಿದರು. ಭೂ ಫಲವತ್ತತೆಯ ಆಧಾರದ ಮೇಲೆ ಕಂದಾಯ ನಿಗದಿ ಮಾಡಿದ ಪ್ರಥಮ ಅರಸು ಕೆಳದಿ ಶಿವಪ್ಪ ನಾಯಕ. ಅವರ ಆಡಳಿತದ ಲಾಂಛನವನ್ನು ಇಂದು ರಾಜ್ಯ ಸರ್ಕಾರ ತನ್ನ ಲಾಂಛನವಾಗಿ ಮಾಡಿಕೊಂಡಿದೆ ಎಂದು ತಿಳಿಸಿದರು.

ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಡಿ ರವಿಕುಮಾರ್ ಮಾತನಾಡಿ, ಶಹಜಾನ್ ತನ್ನ ಪ್ರಿಯತಮೆಗಾಗಿ ತಾಜ್ ಮಹಲ್ ನಿರ್ಮಾಣ ಮಾಡುವ ಮೊದಲೇ ಕೆಳದಿ ಅರಸರ ನಾಯಕ ವೆಂಕಟಪ್ಪ ತನ್ನ ಪ್ರೇಯಸಿಗಾಗಿ ನಿರ್ಮಿಸಿದಂತಹ ಕೊಳವೆ ಚಂಪಕ ಸರಸು ಕೊಳ. ಈ ಚಂಪಕ ಸರಸು ಕೊಳ ಸಂಪೂರ್ಣ ನಿರ್ಲಕ್ಷ್ಯ ಒಳಗಾಗಿದ್ದು, ಕನ್ನಡ ಸಂಘ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ ಸ್ವಚ್ಛತೆ ಮಾಡಲಾಗಿತ್ತು. ನಂತರ ಯಶೋ ಮಾರ್ಗದ ಮೂಲಕ ಸಂಪೂರ್ಣ ಅಭಿವೃದ್ಧಿ ಕಾಯ ನಡೆದಿದೆ. ಇಂತಹ ಐತಿಹಾಸಿಕ ಸ್ಥಳಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಅರ್ಜುನ್ ಭಜಂತ್ರಿ, ಜ್ಯೋತಿ ರಾಥೋಡ್, ಮಹೇಶ್ವರಪ್ಪ, ಸಿದ್ದಪ್ಪ ಕಣ್ಣೂರ್, ಸಂತೋಷ್ ಸೇರಿ ಅನೇಕರು ಉಪಸ್ಥಿತರಿದ್ದರು.