ಸಾರಾಂಶ
ಕನ್ನಡಪ್ರಭ ವಾರ್ತೆ, ಹನೂರು
ನೊಂದವರ ಪರ, ಮಹಿಳೆಯರ ಪರ ಯಾವಾಗಲು ಮಹಿಳಾ ಆಯೋಗ ಇರುತ್ತದೆ. ನೊಂದ ಮಹಿಳೆಯರು ಆಯೋಗದ ಸಹಾಯ ಪಡೆದುಕೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದರು.ಪಟ್ಟಣದ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದಲ್ಲಿ ಮುಂದೆ ಬರಬೇಕು ಎಂದರೆ ಶಿಕ್ಷಣ ತುಂಬಾ ಮುಖ್ಯ. ಆ ನಿಟ್ಟಿನಲ್ಲಿ ಮೊದಲು ಎಲ್ಲರೂ ಶಿಕ್ಷತರಾಗಬೇಕು. ಜೊತೆಗೆ ತಮ್ಮವರನ್ನು ಶಿಕ್ಷತರನ್ನಾಗಿ ಮಾಡಬೇಕು. ಆ ಮುಖೇನ ನಮ್ಮ ಮಹಿಳೆಯರು ಮುಖ್ಯ ವಾಹಿನಿಗೆ ಬರಬೇಕು. ಇಲ್ಲವಾದಲ್ಲಿ ಮಹಿಳೆ ಮತ್ತಷ್ಟು ಶೋಷಣೆಗೆ ಒಳಗಬೇಕಾಗುತ್ತದೆ ಎಚ್ಚರಿಕೆ ಇರಲಿ ಎಂದರು.ಸಾಕಷ್ಟು ಸಮಸ್ಯೆಗಳು ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕಂಡು ಬಂದಿದೆ. ಮಹಿಳೆಯರು ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ನಾನು ನೋಡಿದ್ದೇನೆ. ಅಧಿಕಾರಿಗಳ ಗಮನಕ್ಕೆ ಸಹ ತಂದಿದ್ದು, ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ಮಾಡಿಕೊಡಬೇಕು ಎಂದು ಖಡಕ್ ಸೂಚನೆ ನೀಡಿದರು.ಶಾಸಕ ಎಂ. ಆರ್ ಮಂಜುನಾಥ್ ಮಾತನಾಡಿ, ಪತ್ರಕರ್ತರ ಸಮಸ್ಯೆಗಳನ್ನು ನೋಡಿದ್ದೇನೆ. ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಸರ್ಕಾರ ಕ್ರಮ ಕೈ ಗೊಳ್ಳುತ್ತದೆ. ಅಲ್ಲದೇ ಪತ್ರಿಕಾ ಭವನಕ್ಕೆ ನನ್ನ ಕೈಲಾದಷ್ಟು ನಾನು ಸಹಾಯ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಸಮಸ್ಯೆ ಇದೀಗ ಬಹುತೇಕ ಬಗೆಹರಿದಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡುವುದೇ ನನ್ನ ಗುರಿ ಎಂದರು.ತಾಲೂಕು ಕ್ರಿಕೆಟ್ ಕ್ಲಬ್ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಅಭಿಲಾಶ್ ಗೌಡರವರ ತಾತ ಅಜ್ಜಿ ಬೋಳೆಗೌಡ ಚಂದ್ರಮ ಜ್ಞಾಪಕಾರ್ಥವಾಗಿ ದತ್ತಿ ಪ್ರಶಸ್ತಿಯನ್ನು ವರದಿಗಾರ ರಮೇಶ್ ಗೆ ಹಾಗೂ ಹಿರಿಯ ಪತ್ರಕರ್ತರಾದ ದೇವರಾಜ್‌ನಾಯ್ಡು ತಂದೆ ತಾಯಿ ಹೆಸರಿನಲ್ಲಿ ವರದಿಗಾರ ಪ್ರಭುಗೆ ದತ್ತಿ ಪ್ರಶಸ್ತಿ ಹಾಗೂ ಕಾಮಗೆರೆ ಸೋಮಶೇಖರ್ ಸೇವೆಯನ್ನು ಗುರುತಿಸಿರುವ ರೇಷ್ಮೆನಾಡು ಪತ್ರಿಕೆಯ ಸಂಪಾದಕರಾದ ಸವಿತಾ ಜಯಂತ್ ರವರು ತಮ್ಮ ತಂದೆ ಸದಾಶಿವ ಗಟ್ನಾವಾಡಿ ಜ್ಞಾಪಕಾರ್ಥವಾಗಿ ದತ್ತಿ ಪ್ರಶಸ್ತಿ ನೀಡಲಾಯಿತು.
ಮಾಜಿ ಶಾಸಕರಾದ ಆರ್ ನರೇಂದ್ರ, ಪರಿಮಳ ನಾಗಪ್ಪ, ತಹಸೀಲ್ದಾರ್ ಚೈತ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಮ್ತಾಜ್ ಭಾನು, ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ, ತಾಲೂಕು ಅಧ್ಯಕ್ಷ ಮಹಾದೇಶ್, ಗೌರವಾಧ್ಯಕ್ಷ ದೇವರಾಜು ನಾಯ್ಡು, ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ರೈತ ಮಹಿಳೆಯರು ಹಾಗೂ ಸಾರ್ವಜನಿಕರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))