ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದೇ ಉದ್ದೇಶ: ಕೆ.ವಿ.ಸುಬ್ರಮಣ್ಯ

| Published : Jul 21 2025, 12:00 AM IST

ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದೇ ಉದ್ದೇಶ: ಕೆ.ವಿ.ಸುಬ್ರಮಣ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಉದ್ದೇಶವಾಗಿದೆ ಎಂದು ದಾನಿ ಹಾಗೂ ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ಸುಬ್ರಮಣ್ಯ ತಿಳಿಸಿದರು.

ಕಮಲಾಪುರ, ನಾಗರಮಕ್ಕಿ ಸರ್ಕಾರಿ ಶಾಲೆಗೆ ಶಾಲಾ ಬ್ಯಾಗ್‌,ಛತ್ರಿ ವಿತರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಉದ್ದೇಶವಾಗಿದೆ ಎಂದು ದಾನಿ ಹಾಗೂ ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ಸುಬ್ರಮಣ್ಯ ತಿಳಿಸಿದರು.

ನಾಗರಮಕ್ಕಿ ಹಾಗೂ ಕಮಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಶಾಲಾ ಬ್ಯಾಗ್, ಛತ್ರಿ ಹಾಗೂ ಇತರ ಶಾಲಾ ಪರಿಕರ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಸೀನಿಯರ್ ಚೇಂಬರ್ ಸಮಾಜಮುಖಿ ಕೆಲಸ ಮಾಡುತ್ತಿದೆ.ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು ದಾನವಾಗಿ ನೀಡಿರುವ ಶಾಲಾ ಪರಿಕರಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಶಿಕ್ಷಣ ಬಗ್ಗೆ ಹೆಚ್ಚು ಗಮನ ನೀಡಿ ಉತ್ತಮ ಅಂಕ ಪಡೆಯಿರಿ.ಇತ್ತೀಚಿಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ರುತ್ತಿರುವುದು ವಿಷಾದದ ಸಂಗತಿ ಎಂದರು.

ಇನ್ನೊಬ್ಬ ದಾನಿ ಹಾಗೂ ಶಿವಮೊಗ್ಗದ ಸರ್ಕಾರಿ ಶ್ರೀ ಗಂಧ ಕೋಠಿ ವಲಯ ಅರಣ್ಯಾಧಿಕಾರಿ ಬಿ.ಸಿ.ಲೋಕೇಶ್ ಮಾತನಾಡಿ, ಮಕ್ಕಳು ದೇವರಿಗೆ ಸಮಾನರಾಗಿದ್ದಾರೆ. ಪೋಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂದು ಪೋಷಕರಿಗೆ ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಸಂಸ್ಥೆ ತಾಲೂಕು ಅಧ್ಯಕ್ಷ ಎಸ್‌.ಎಸ್.ಜಗದೀಶ್ ಮಾತನಾಡಿ, ಈಗಾಗಲೇ ನಮ್ಮ ಸಂಸ್ಥೆಯಿಂದ 20 ಕಾರ್ಯಕ್ರಮ ಮಾಡಿದ್ದೇವೆ. ಮಕ್ಕಳಿಗೆ ಶಾಲಾ ಪರಿಕರ, ಬಡ ಕುಟಂಬ ಗಳಿಗೆ ಆಹಾರ ಸಾಮಾಗ್ರಿ ಮುಂತಾದ ಸಮಾಜಮುಖಿ ಕೆಲಸ ಮಾಡಿದ್ದೇವೆ. ಸೀನಿಯರ್‌ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯ ಪೂರ್ವಾಧ್ಯಕ್ಷರು ನಮಗೆ ಸಹಾಯ ಹಸ್ತ ಚಾಚಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಶಾಲಾ ಪರಿಕರದ ದಾನಿಗಳಾದ ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ಸುಬ್ರಮಣ್ಯ ಹಾಗೂ ಶಿವಮೊಗ್ಗ ವಲಯ ಅರಣ್ಯಾಧಿಕಾರಿ ಬಿ.ಸಿ.ಲೋಕೇಶ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸೀತೂರು ಸಹಕಾರ ಸಂಘದ ನಿರ್ದೇಶಕ ಯಡಗೆರೆ ಸುಬ್ರಮಣ್ಯ, ಗ್ರಾಪಂ ಸದಸ್ಯ ಎನ್‌.ಪಿ. ರಮೇಶ್, ಸೀನಿಯರ್ ಛೇಂಬರ್ ಮಾಜಿ ಅಧ್ಯಕ್ಷ ಕೆ.ಆರ್.ನಾಗರಾಜ ಪುರಾಣಿಕ್, ಸದಸ್ಯರಾದ ವಿದ್ಯಾನಂದಕುಮಾರ್, ಜನನಿ ಸ್ಟೋರ್ ಗಿರೀಶ, ಲಕ್ಷ್ಮೀಶ, ಕಮಲಾಪುರ ಸರ್ಕಾರಿ ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ರವಿ, ಶಾಲೆ ಮುಖ್ಯೋಪಾಧ್ಯಾಯಿನಿ ರೋಜಿ, ನಾಗರಮಕ್ಕಿ ಶಾಲೆ ಎಸ್‌.ಡಿ.ಎಂ.ಸಿ.ಅಧ್ಯಕ್ಷ ಎಸ್.ಮಹೇಶ್,ಮುಖ್ಯ ಶಿಕ್ಷಕಿ ಜಯ,ಸಹ ಶಿಕ್ಷಕ ರಾಜಶೇಖರ್ ಇದ್ದರು.