ವೈಜ್ಞಾನಿಕ ಮನೋಭಾವ ಬೆಳೆಸುವುದೇ ಉದ್ದೇಶ: ದೀಪಕ್ ನಿಡಘಟ್ಟ

| Published : Mar 02 2025, 01:16 AM IST

ಸಾರಾಂಶ

ನರಸಿಂಹರಾಜಪುರ, ಸಾರ್ವಜನಿಕರು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮುಖ್ಯ ಉದ್ದೇಶವಾಗಿದೆ ಎಂದು ಕಳ್ಳಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಜ್ಞಾನ ಶಿಕ್ಷಕ ದೀಪಕ್ ನಿಡಘಟ್ಟ ತಿಳಿಸಿದರು.

ಕಳ್ಳಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸಾರ್ವಜನಿಕರು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮುಖ್ಯ ಉದ್ದೇಶವಾಗಿದೆ ಎಂದು ಕಳ್ಳಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಜ್ಞಾನ ಶಿಕ್ಷಕ ದೀಪಕ್ ನಿಡಘಟ್ಟ ತಿಳಿಸಿದರು.

ಶುಕ್ರವಾರ ತಾಲೂಕಿನ ಕಳ್ಳಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿವಿಧ ಶಾಲೆ, ಕಾಲೇಜುಗಳಲ್ಲಿ ವಿಜ್ಞಾನ ಕುರಿತ ಉಪನ್ಯಾಸ, ಚರ್ಚೆ ಸ್ಪರ್ಧೆ, ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಚಟುವಟಿಕೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಫೆಬ್ರವರಿ 28 ರಂದು ವಿಜ್ಞಾನಿ ಸರ್. ವಿ.ರಾಮನ್ ವಿಶ್ವಕ್ಕೆ ವಿಜ್ಞಾನ ತೋರಿಸಿಕೊಟ್ಟ ರಾಮನ್ ಎಫೆಕ್ಟ್ ಎಂಬ ಸಿದ್ಧಾಂತ ಪರಿಚಯಿಸಿದ ದಿನವಾಗಿದೆ. ಅ‍ವರ ಸಾಧನೆಯನ್ನು ನೆನಪಿಸುವುದು ಸಹ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ದೇಶವಾಗಿದೆ. ಸಮಾಜದಲ್ಲಿ ಶಾಂತಿ, ಬ್ರಾತೃತ್ವ ಬೆಳೆಸಬೇಕಾಗಿದೆ. ಏಷ್ಯದ ಮೊದಲ ವಿಜ್ಞಾನದ ವಿಜ್ಞಾನಿ ಸರ್‌ ವಿ.ರಾಮನ್ ಅ‍ವರು ಎಂಬುದು ಭಾರತ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ಸಭೆಯಲ್ಲಿ ಅಂಗನವಾಡಿ ಶಿಕ್ಷಕಿ ಆಶಾ, ಪವಿತ್ರ ಮತ್ತಿತರರು ಇದ್ದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.