ಸಾರಾಂಶ
ದಾಬಸ್‍ಪೇಟೆ: ಸೋಂಪುರ ಹೋಬಳಿಯ ಇತಿಹಾಸ ಪ್ರಸಿದ್ಧ ಹಳೆನಿಜಗಲ್ ಕೆರೆ ಮಳೆಯಿಂದಾಗಿ ಕೋಡಿ ಬಿದ್ದಿದ್ದು, ನೀರು ಹಾಲ್ನೊರೆಯಂತೆ ಹರಿಯುತ್ತಿದೆ.
ದಾಬಸ್‍ಪೇಟೆ: ಸೋಂಪುರ ಹೋಬಳಿಯ ಇತಿಹಾಸ ಪ್ರಸಿದ್ಧ ಹಳೆನಿಜಗಲ್ ಕೆರೆ ಮಳೆಯಿಂದಾಗಿ ಕೋಡಿ ಬಿದ್ದಿದ್ದು, ನೀರು ಹಾಲ್ನೊರೆಯಂತೆ ಹರಿಯುತ್ತಿದೆ.
ಶ್ರೀ ಉದ್ದಾನವೀರಭದ್ರಸ್ವಾಮಿ ಹಾಗೂ ಶ್ರೀ ಕೋಡಿ ಸಿದ್ದೇಶ್ವರ ದೇವಾಲಯ ಪಕ್ಕದಲ್ಲಿಯೇ ಕೆರೆ ಇರುವುದರಿಂದ ಪ್ರವಾಸಿಗರಿಗೆ ಆಕರ್ಷಣೀಯವಾಗಿದೆ. ಕೆರೆ ಕೋಡಿಯಲ್ಲಿ ಹರಿಯುತ್ತಿರುವ ನೀರು ಸುತ್ತಮುತ್ತಲಿನ ಸೊಬಗನ್ನು ಹೆಚ್ಚಿಸಿದೆ.ಕೆರೆ ಕೋಡಿಯ ಕಟ್ಟೆ ಮೇಲೆ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಕಾಲು ಜಾರಿ ಕೆರೆಗೆ ಬೀಳುವ ಸಾಧ್ಯತೆ ಇದೆ. ಕೋಡಿ ನೀರಿನಲ್ಲಿ ಬೇಕಾಬಿಟ್ಟಿ ಓಡಾಡಿದರೂ ಬಿದ್ದು ಅಪಾಯ ಸಂಭವಿಸಬಹುದು. ಹರಿಯುವ ನೀರಿನ ವೇಗ ಹೆಚ್ಚಾಗಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಐದಾರು ಜನ ಕೆರೆಯಲ್ಲಿ ಈಜಾಡಲು ಹೋಗಿ ಸಾವನ್ನಪ್ಪಿರುವ ಘಟನೆಗಳು ಇನ್ನೂ ಮಾಸಿಲ್ಲ. ನೀರಾವರಿ ಇಲಾಖೆ ಹಾಗೂ ಗ್ರಾಪಂ ತಂತಿ ಬೇಲಿ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ನೆಲಮಂಗಲ ತಾಲೂಕಿನಲ್ಲಿ ಒಂದು ತಿಂಗಳಿನಿಂದ ನಿರಂತರ ಮಳೆಯಿಂದಾಗಿ ಕೆರೆ ಕುಂಟೆಗಳು ತುಂಬಿ ತುಳುಕುತ್ತಿವೆ. ತೆರೆದ ಬಾವಿಗಳು ಭರ್ತಿಯಾಗಿವೆ. ಹಲವು ಕೆರೆಗಳು ಭೋರ್ಗರೆಯುತ್ತಿವೆ. ಹಳೆ ನಿಜಗಲ್ ಕೆರೆ ಭೋರ್ಗರೆದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು ಮಿನಿ ಜಲಪಾತವೇ ಸೃಷ್ಟಿಯಾಗಿದೆ.ಪೋಟೋ 1 :
ಸೋಂಪುರ ಹೋಬಳಿಯ ಇತಿಹಾಸ ಪ್ರಸಿದ್ಧ ಹಳೆನಿಜಗಲ್ ಕೆರೆ ಮಳೆಯಿಂದಾಗಿ ಕೋಡಿ ಬಿದ್ದು ಹರಿಯುತ್ತಿರುವ ನೀರು.