ಸಾರಾಂಶ
ತಡರಾತ್ರಿಯ ವರೆಗೂ ನಡೆದ ಮತ ಎಣಿಕೆಯಲ್ಲಿ ಮೊದಲಿಗೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎ.ಎಂ. ಹಿಂಡಸಗೇರಿ ಎದುರಾಳಿಗಳಿಗಿಂತ ಅತ್ಯಧಿಕ ಮತಗಳನ್ನು ಪಡೆದಿದ್ದಾರೆ.
ಹುಬ್ಬಳ್ಳಿ: ತೀವ್ರ ಕುತೂಹಲ ಕೆರಳಿಸಿದ್ದ ಅಂಜುಮನ್ ಎ ಇಸ್ಲಾಂ ಸಂಸ್ಥೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ನೇತೃತ್ವದ ಬಣ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.
ತಡರಾತ್ರಿಯ ವರೆಗೂ ನಡೆದ ಮತ ಎಣಿಕೆಯಲ್ಲಿ ಮೊದಲಿಗೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎ.ಎಂ. ಹಿಂಡಸಗೇರಿ ಎದುರಾಳಿಗಳಿಗಿಂತ ಅತ್ಯಧಿಕ ಮತಗಳನ್ನು ಪಡೆದಿದ್ದಾರೆ. ಉಪಾಧ್ಯಕ್ಷ, ಖಜಾಂಚಿ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಸೇರಿದಂತೆ ಇತರ ಸ್ಥಾನಗಳ ಮತ ಎಣಿಕೆಯಲ್ಲೂ ಹಿಂಡಸಗೇರಿ ಬಣ ಇತರರಿಗಿಂತ ಲೀಡ್‌ನಲ್ಲಿ ಸಾಗಿದ್ದರು. ಆರಂಭದ ಮೊದಲ ಒಂದು ತಾಸಿನಲ್ಲಿಯೇ ಅಧ್ಯಕ್ಷರ ಸ್ಥಾನ ಮತಗಳ ಎಣಿಕೆಯು ಬಹುತೇಕ ಪೂರ್ಣಗೊಳಿಸಿ ಅಧಿಕೃತ ಘೋಷಣೆ ಬಾಕಿ ಇರಿಸಿಕೊಳ್ಳಲಾಗಿತ್ತು.ಅಬ್ದುಲ್ ಅತ್ತಾರ ಖಾದರ (ಉಪಾಧ್ಯಕ್ಷ), ಬಸೀರ ಅಹ್ಮದ ಹಲವೂರ(ಕಾರ್ಯದರ್ಶಿ), ದಾದಾ ಹಯಾತ್ ಖೈರಾತಿ (ಖಜಾಂಚಿ), ಮಹ್ಮದ ರಫೀಕ ಬಂಕಾಪುರ (ಜಂಟಿ ಕಾರ್ಯದರ್ಶಿ), ಇರ್ಶಾದ ಅಹ್ಮದ ಬಳ್ಳಾರಿ (ಹಾಸ್ಪಿಟಲ್ ಸೆಕ್ರೆಟರಿ), ಇಲಿಯಾಸ ಮನಿಯಾರ, ಬಸೀರಅಹ್ಮದ ಗುಡಮಾಲ, ನವೀದ್ ಮುಲ್ಲಾ, ಸಲೀಂ ಸುಂಡಕೆ, ಮಹ್ಮದಸಾಬ ಕೊಲೂರ, ರಿಯಾಜ್ ಅಹ್ಮದ ಖಾತಿಬ್, ಶಮಷೇರ ನಾಯಿಕವಾಡಿ (ಶಿಕ್ಷಣ ಮಂಡಳಿ ಸದಸ್ಯರು), ಸಿರಾಜ್ ಕುಡಚಿವಾಲೆ, ಫಾರೂಕ್ ಅಹ್ಮದ ಅಬುನವರ, ದಾವುದ್ ನದಾಫ, ಜಹೀರ್ ಅಬ್ಬಾಸ ಯರಗಟ್ಟಿ (ಹಾಸ್ಪಿಟಲ್ ಮಂಡಳಿ ಸದಸ್ಯರು) ಪ್ರತಿಸ್ಪರ್ಧಿಗಿಂತಲೂ ಮುನ್ನಡೆ ಸಾಧಿಸಿದ್ದರು ಎಂದು ಮೂಲಗಳು ತಿಳಿಸಿವೆ.