ಸಾರಾಂಶ
ಮಂಗಳವಾರ ಬೆಳಗ್ಗೆ ದೇವತಕ್ಕರಾದ ಚೊಟ್ಟೆಯಂಡ, ಭಂಡಾರ ತಕ್ಕರ ನೆರೆಯಂಡಮ್ಮಂಡ ಕುಟುಂಬದಿಂದ ಹಾಗೂ ಪಾಡೆಯಂಡ, ಬಟ್ಟಿಯಂಡ, ಕದ್ದಣಿಯಂಡ, ನಾಯಕಂಡ ಕುಟುಂಬಸ್ಥರು ಎತ್ತುಪೊರಾಟದೊಂದಿಗೆ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಪ್ರವೇಶಿಸಿ ಬಳಿಕ ಸಾಂಪ್ರದಾಯಿಕವಾಗಿ ದೇವರ ವಿವಿಧ ಬಗೆಯ ಕುಣಿತಗಳನ್ನು ಒಂದೊಂದಾಗಿ ಕುಣಿಯಲಾಯಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಸಲ್ಪಡುವ ಹಬ್ಬ ಇದಾಗಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಕೈಕಾಡು ಗ್ರಾಮದ ಮಕ್ಕೋಟು ಮಹಾಲಕ್ಷ್ಮೀ ದೇವರ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಎರಡು ವರ್ಷಕೊಮ್ಮೆ ನಡೆಯುವ ಹಬ್ಬದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಮಂಗಳವಾರ ಬೆಳಗ್ಗೆ ದೇವತಕ್ಕರಾದ ಚೊಟ್ಟೆಯಂಡ, ಭಂಡಾರ ತಕ್ಕರ ನೆರೆಯಂಡಮ್ಮಂಡ ಕುಟುಂಬದಿಂದ ಹಾಗೂ ಪಾಡೆಯಂಡ, ಬಟ್ಟಿಯಂಡ, ಕದ್ದಣಿಯಂಡ, ನಾಯಕಂಡ ಕುಟುಂಬಸ್ಥರು ಎತ್ತುಪೊರಾಟದೊಂದಿಗೆ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಪ್ರವೇಶಿಸಿ ಬಳಿಕ ಸಾಂಪ್ರದಾಯಿಕವಾಗಿ ದೇವರ ವಿವಿಧ ಬಗೆಯ ಕುಣಿತಗಳನ್ನು ಒಂದೊಂದಾಗಿ ಕುಣಿಯಲಾಯಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಸಲ್ಪಡುವ ಹಬ್ಬ ಇದಾಗಿದೆ.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ತಕ್ಕ ಮುಖ್ಯಸ್ಥರು ಸೇರಿದಂತೆ ಊರ ಮತ್ತು ಪರ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.