ವಿಜೃಂಭಣೆಯಿಂದ ಗ್ರಾಮದೇವತೆ ದೊಡ್ಡಮ್ಮತಾಯಿ ವಾರ್ಷಿಕ ಹಬ್ಬ

| Published : Mar 27 2024, 01:07 AM IST

ಸಾರಾಂಶ

ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ, ತಮಟೆ ನಗಾರಿಯ ಸದ್ದಿನೊಂದಿಗೆ ಗ್ರಾಮದ ಬಲಮುರಿ ಗಣಪತಿ ದೇವಾಲಯ ಪ್ರದಕ್ಷಿಣೆ ಮಾಡಿ ಶ್ರೀದೊಡ್ಡಮ್ಮತಾಯಿ ದೇವಾಲಯದ ಮುಂಭಾಗಕ್ಕೆ ಆಗಮಿಸಿದರು. ಬಳಿಕ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಆರತಿ ಬೆಳಗುವ ಮೂಲಕ ಮಹಿಳೆಯರು ತಾವು ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹೊಳಲು ಗ್ರಾಮದ ಗ್ರಾಮದೇವತೆ ಶ್ರೀದೊಡ್ಡಮ್ಮತಾಯಿ ವಾರ್ಷಿಕ ಹಬ್ಬ ಸಡಗರ ಸಂಭ್ರಮ ಮತ್ತು ವಿಜೃಂಭಣೆಯಿಂದ ಜರುಗಿತು.

ಹಬ್ಬದ ಅಂಗವಾಗಿ ಇಡೀ ಗ್ರಾಮವೇ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿತ್ತು. ಮನೆ ಮುಂದೆ ಮಹಿಳೆಯರು ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಸಿಂಗರಿಸಿದ್ದರು. ಎಲ್ಲೆಡೆ ತಳಿರು ತೋರಣ, ಬಾಳೆಕಂದು ಹೂಗಳಿಂದ ಶೃಂಗಾರಗೊಂಡ ಬೀದಿಗಳು ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿತ್ತು.

ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ, ತಮಟೆ ನಗಾರಿಯ ಸದ್ದಿನೊಂದಿಗೆ ಗ್ರಾಮದ ಬಲಮುರಿ ಗಣಪತಿ ದೇವಾಲಯ ಪ್ರದಕ್ಷಿಣೆ ಮಾಡಿ ಶ್ರೀದೊಡ್ಡಮ್ಮತಾಯಿ ದೇವಾಲಯದ ಮುಂಭಾಗಕ್ಕೆ ಆಗಮಿಸಿದರು. ಬಳಿಕ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಆರತಿ ಬೆಳಗುವ ಮೂಲಕ ಮಹಿಳೆಯರು ತಾವು ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು.

ಈ ವೇಳೆ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್.ಶಿವಣ್ಣ, , ಮಾಜಿ ಶಾಸಕ ಎಚ್.ಬಿ.ರಾಮು, ಮುಖಂಡರಾದ ಜಟ್ಟಿ ಕುಮಾರ್, ಲಿಂಗಪ್ಪ, ಎಸ್.ಸಿ.ಲಿಂಗರಾಜು, ವಿಜಯ್ ಕುಮಾರ್, ಶ್ರೀಧರ್, ಎಚ್.ಡಿ.ರವಿ, ಚೇತನ್, ನಂದೀಶ್ ಪೂಜಾರಿ ಶಿವರಾಜ್, ಮಾದಯ್ಯ, ಪುಟ್ಟಸ್ವಾಮಿ, ಪೂಜಾರಿ ಶಂಕರ್, ನಾರಾಯಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.ವಿಜೃಂಭಣೆಯ ಶ್ರೀಅರ್ಕೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಕನ್ನಡಪ್ರಭ ವಾರ್ತೆ ಮಂಡ್ಯ ನಗರದ ಗುತ್ತಲು ಕಾಲೋನಿಯ ಶ್ರೀಅರ್ಕೇಶ್ವರಸ್ವಾಮಿಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ಬೆಳಗ್ಗೆ ೯.೪೫ ರಿಂದ ೧೦.೩೦ಕ್ಕೆ ಸಲ್ಲುವ ವೃಷಭ ಲಗ್ನದಲ್ಲಿ ಶ್ರೀ ಅರ್ಕೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ರಥದಲ್ಲಿ ವಿರಾಜಮಾನರಾದ ಶ್ರೀ ಅರ್ಕೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.ಬಳಿಕ ಜಿಲ್ಲಾಧಿಕಾರಿ ಡಾ.ಕುಮಾರ್ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ರಥೋತ್ಸವ ಅರ್ಕೇಶ್ವನಗರದಲ್ಲಿ ಸಂಭ್ರಮದಿಂದ ನೆರವೇರಿತು. ಮಂಡ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಶ್ರೀ ಅರ್ಕೇಶ್ವರಸ್ವಾಮಿ ಒಕ್ಕಲಿನವರು ಸೇರಿದಂತೆ ಸಹಸ್ರಾರು ಮಂದಿ ಭಕ್ತರು ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಹಣ್ಣು- ಜವನ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು.ರಥೋತ್ಸವಕ್ಕೂ ಮುನ್ನ ದೇವಾಲಯದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ನಂತರ ಮಂಗಳವಾಧ್ಯದೊಂದಿಗೆ ದೇವಾಲಯದ ಗರ್ಭಗುಡಿಯಿಂದ ಹೊರ ಬಂದ ಉತ್ಸವ ಮೂರ್ತಿಯನ್ನು ದೇವಾಲಯದ ಹೊರಗೆ ನಿಲ್ಲಿಸಲಾಗಿದ್ದ ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಇತರೆ ಮುಜರಾಯಿ ಅಧಿಕಾರಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಜೇಶ್ ತಿಳಿಸಿದರು.