ಗ್ರಾಮ ದೇವರ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ

| Published : Mar 09 2025, 01:47 AM IST

ಗ್ರಾಮ ದೇವರ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ದೇವರ 6ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಗ್ರಾಮ ದೇವರ ಸಮಿತಿಯ ವತಿಯಿಂದ ಗ್ರಾಮ ದೇವರ 6ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಶುಕ್ರವಾರ ನಡೆಯಿತು.

ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ ಸಮಿತಿ, ಶ್ರೀ ರಾಮ ಸೇವಾ ಸಮಿತಿ, ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಸಮಿತಿ, ಗೌರಿಗಣೇಶೋತ್ಸವ ಸಮಿತಿ, ಮಸಣಿಕಮ್ಮ ದೇವಸ್ಥಾನ ಸಮಿತಿ, ವೃಕ್ಷೋದ್ಭವ ಮಹಾಗಣಪತಿ ದೇವಾಲಯ ಸಮಿತಿ, ಟಿಸಿಎಲ್ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ, ಶ್ರೀದೇವಿಯ ಅಣ್ಣಪ್ಪ ದೇವಸ್ಥಾನ ಸಮಿತಿ, ಬಾಳೆಕಾಡು ಮುತ್ತಪ್ಪ ದೇವಸ್ಥಾನ, ಗದ್ದೆಹಳ್ಳ ಕೊಡಂಗಲ್ಲೂರು ಶ್ರೀ ಕುರುಂಬ ಭಗವತಿ ದೇವಾಲಯ, ಮದುರಮ್ಮ ಬಡಾವಣೆಯ ನಾಗದೇವತೆ, ಮಳೂರು ಬೆಳ್ಳಾರಿಕಮ್ಮ ದೇವಾಲಯ ಸಮಿತಿ, ಗದ್ದೆಹಳ್ಳದ ಬಸವೇಶ್ವರ ದೇವಾಲಯ ಸಮಿತಿಗಳ ಸಹಭಾಗಿತ್ವದಲ್ಲಿ ನಡೆಯಿತು.

ಅರ್ಚಕ ಮಂಜುನಾಥ್ ಶರ್ಮ ಅವರ ನೇತೃತ್ವದಲ್ಲಿ ಬೆಳಗ್ಗೆ ಸ್ಥಳ ಶುದ್ಧಿ ಕಲಶ ಪೂಜೆ ನಡೆಯಿತು.

ನಂತರ ಗ್ರಾಮ ದೇವತೆಗೆ ಎಳನೀರು, ಹಾಲು, ಕುಂಕುಮ, ಜೇನು, ಗಂಧ, ತುಪ್ಪದ ಅಭಿಷೇಕ ನೆರವೇರಿತು. ಆ ಬಳಿಕ ದೇವರಿಗೆ ವಸ್ತ್ರಲಂಕಾರ ಮತ್ತು ಹೂವಿನ ಅಲಂಕಾರ ಪೂಜೆ ನಡೆಯಿತು.

9.30 ಕ್ಕೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನಂತರ ಗ್ರಾಮ ದೇವತೆಗೆ ಅರ್ಪಣೆ ನಡೆದು, ಮದ್ಯಾಹ್ನದ ನಂತರ ನೆರೆದಿದ್ದ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯವನ್ನು ವಿವಿಧ ಬಗೆಯ ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಸಮಿತಿಯ ಅಧ್ಯಕ್ಷ ಎ.ಶ್ರೀಧರ್ ಕುಮಾರ್, ಕಾರ್ಯದರ್ಶಿ ಸುರೇಶ್ ಗೋಪಿ, ಖಜಾಂಚಿ ದಿನು ದೇವಯ್ಯ, ಉಪಾಧ್ಯಕ್ಷರಾದ ಬಿ.ಡಿ.ರಾಜು ರೈ, ಜೆ‌‌‌.ಎನ್.ಚಂದ್ರಶೇಖರ್, ಸಲಹಾ ಸಮಿತಿಯ ಎ.ಲೋಕೇಶ್ ಕುಮಾರ್, ಶಾಂತರಾಮ್ ಕಾಮತ್, ಬಸವರಾಜು, ಅಶೋಕ್ ಶೇಟ್, ಸಂಘಟನಾ ಕಾರ್ಯದರ್ಶಿಗಳಾದ ಧನು ಕಾವೇರಪ್ಪ, ಸುನಿಲ್, ಸಹ ಕಾರ್ಯದರ್ಶಿ ಎ‌.ಶ್ರೀಧರನ್, ಅಯ್ಯಪ್ಪ, ಪಟ್ಟೆಮನೆ ಕುಟುಂಬಸ್ಥರಾದ ಪಿ‌.ಪಿ.ಉದಯಕುಮಾರ್, ಪಟ್ಟೆಮನೆ ಸದಾಶಿವ, ಸದಾಶಿವ ರೈ, ಸಂತೋಷ್, ರವಿ, ಶಿವಕುಮಾರ್, ಸಿ.ಸಿ.ಸುನಿಲ್, ಎಂ.ಆರ್.ಶಶಿಕುಮಾರ್, ಬಿ‌.ಕೆ.ಪ್ರಶಾಂತ್ ಸೇರಿದಂತೆ ವಿವಿಧ ದೇವಾಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.