ಸಾರಾಂಶ
ಡಾ. ರಾಜ್ ಅವರು ನೇತ್ರದಾನದ ಪ್ರಚಾರಕ್ಕೆ ಮುನ್ನಡಿಕೊಟ್ಟು ಅಂಧರ ಬಾಳಿಗೆ ಬೆಳಕಾದವರು. ತಮ್ಮ ನೇತ್ರವನ್ನು ದಾನ ಮಾಡಿ, ಇನ್ನಿತರರಿಗೆ ನೇತ್ರದಾನವನ್ನು ಮಾಡುವಂತೆ ಪ್ರೇರೇಪಿಸಿದವರು, ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ಚಿತ್ರರಂಗ ಎಲ್ಲಿಯ ತನಕ ಇರುತ್ತದೋ ಅಲ್ಲಿಯವರೆಗೆ ಕನ್ನಡ ಚಿತ್ರರಂಗದ ಅನಭಿಷಕ್ತ ದೊರೆ ಎಂದರೆ ಅದು ಡಾ. ರಾಜಕುಮಾರ್ ಮಾತ್ರ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದ ಅಧ್ಯಕ್ಷ ಎನ್. ಬೆಟ್ಟೇಗೌಡ ಅಭಿಪ್ರಾಯಪಟ್ಟರು.ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಹಾಗೂ ಅಲೆಯನ್ಸ್ ಕ್ಲಬ್ ಅಫ್ ಮೈಸೂರು ನಾಲ್ವಡಿ ಇವರ ಸಂಯುಕ್ತಾಶ್ರಯದಲ್ಲಿ ಡಾ. ರಾಜಕುಮಾರ್ ಅವರ 97ನೇ ಜನ್ಮ ದಿನದ ಅಂಗವಾಗಿ ಶಿವರಾಂಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಡಾ. ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಅವರು ಮಾತನಾಡಿದರು.
ಡಾ. ರಾಜ್ ಅವರು ನೇತ್ರದಾನದ ಪ್ರಚಾರಕ್ಕೆ ಮುನ್ನಡಿಕೊಟ್ಟು ಅಂಧರ ಬಾಳಿಗೆ ಬೆಳಕಾದವರು. ತಮ್ಮ ನೇತ್ರವನ್ನು ದಾನ ಮಾಡಿ, ಇನ್ನಿತರರಿಗೆ ನೇತ್ರದಾನವನ್ನು ಮಾಡುವಂತೆ ಪ್ರೇರೇಪಿಸಿದವರು, ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ ಎಂದರು. ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ವಿ. ಬೈರಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷಮಡ್ಡಿಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಸಮಾಜ ಸೇವಕ ರಘುರಾಂ ವಾಜಪೇಯಿ ಮಾತನಾಡಿದರು. ಅಲಯನ್ಸ್ ಕ್ಲಬ್ ಆಫ್ ಮೈಸೂರು ಪ್ರಿನ್ಸ್ ಅಧ್ಯಕ್ಷೆ ಇಂದಿರಾ ವೆಂಕಟೇಶ್, ಉಪ ಜಿಲ್ಲಾ ರಾಜ್ಯಪಾಲ ನ. ಗಂಗಾಧರಪ್ಪ, ಜಿಲ್ಲಾ ಸಂಪುಟ ಕೋಶ ಅಧ್ಯಕ್ಷ ಕೃಷ್ಣಾಜೀ ರಾವ್, ಜಿಲ್ಲಾ ಸಂಪುಟ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಶೈಲ, ಶ್ರೀಲತಾ ಮನೋಹರ್, ಸಮಾಜ ಸೇವಕ ವಿಕ್ರಂ ಅಯ್ಯಂಗಾರ್, ಉಮೇಶ್, ರಾಜೇಶ್ ಇದ್ದರು.