ಸಾರಾಂಶ
ಸಾಮಾಜಿಕ ಪರಿವರ್ತನೆ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನಾಚರಣೆಕನ್ನಡಪ್ರಭ ವಾರ್ತೆ, ತರೀಕೆರೆಹಿಂದುಳಿದ ವರ್ಗದವರಿಗೆ, ಶೋಷಿತರಿಗೆ, ದೀನ ದಲಿತರಿಗೆ ಶಿಕ್ಷಣ ಒದಗಿಸುವಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಆಪಾರ ಶ್ರಮ ವಹಿಸಿದ್ದಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.ಸೋಮವಾರ ತಾಲೂಕು ಅಡಳಿತ, ತಾಪಂ, ಪುರಸಭೆ ಮತ್ತು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕನಕ ಕಲಾ ಭವನದಲ್ಲಿ ನಡೆದ ಸಾಮಾಜಿಕ ಪರಿವರ್ತನೆಯ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 110ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಆಶಯವನ್ನು ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಮುಂದುವರಿಸಿದ್ದಾರೆ. ದಲಿತರು, ಶೋಷಿತರು ಮತ್ತು ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ ಎಂದು ತಿಳಿಸಿದರು.ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಶರಣರ ಕಾಲದಲ್ಲಿ ಆರಂಭಗೊಂಡ ಸಾಮಾಜಿಕ ಕ್ರಾಂತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಉಜ್ವಲ ಸ್ಥಿತಿಯಲ್ಲಿತ್ತು. ನಂತರದಲ್ಲಿ ದೇವರಾಜ ಅರಸು ಅದನ್ನು ಪೂರ್ಣ ಗೊಳಿಸಿದರು. ಅರಸು ಕಾಲದ ಕ್ರಾಂತಿ ದೇಶದ ತುಂಬಾ ಪ್ರಭಾವಿಸಿ ವಿವಿಧ ರಾಜ್ಯಗಳ ಮುಖ್ಯಮಂತ್ರಿ ತಮ್ಮ ಜನಪರ ಯೋಜನೆ ಅಳವಡಿಸಿಕೊಂಡರು. ಹಾವನೂರು ವರದಿಯಿಂದ ಪ್ರೇರಿತ ರಾಗಿ ಪ್ರಧಾನಿ ವಿ.ಪಿ.ಸಿಂಗ್ ಮಂಡಲ್ ಕಮೀಷನ್ ಆಯೋಗವನ್ನು ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ವರದಿ ಜಾರಿಗೆ ತರಲು ಮುಂದಾಗಿದ್ದರು. ಜೀತ ವಿಮುಕ್ತಿ ಪದ್ಧತಿ, ಮೀಸಲಾತಿ, ಕನಾ೯ಟಕ ರಾಜ್ಯ ರಚನೆ , ವಸತಿ ನಿಲಯಗಳ ಆರಂಭ, ವಸತಿ ಯೋಜನೆ, ಗರೀಬಿ ಹಠಾವೋ ಅನುಷ್ಠಾನ ಸ್ಮರಣೀಯ ಎಂದರುತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ.ಸಬಿತಾ ಬನ್ನಾಡಿ ಡಿ.ದೇವರಾಜ ಅರಸು ಕುರಿತು ವಿಶೇಷ ಉಪನ್ಯಾಸ ನೀಡಿ ಡಿ.ದೇವರಾಜ ಅರಸು ಅವರು ದೇಶಕ್ಕೆ ಮಾದರಿಯಾಗಿ ಎರಡು ಬದಲಾವಣೆ ತಂದರು. ರಾಜ್ಯದ ಹೆಸರನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. ಕರ್ನಾಟಕ ಎನ್ನುವುದು ಭಾವೈಕ್ಯತೆ ತರುತ್ತದೆ. ಕರ್ನಾಟಕ ನಮ್ಮದು ಎಂಬ ಭಾವನೆ ಬರುತ್ತದೆ. ದೂರದರ್ಶಿತ್ವ ಹೊಂದಿದ್ದ ಅವರು ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಕಡಿಮೆ ಆಗಬೇಕು ಎಂದು ಯೋಚಿಸುತ್ತಿದ್ದರು. ಅರಸು ಅವರು ಅಡಳಿತದಲ್ಲಿ ಕನ್ನಡ ಜಾರಿಗೆ ತಂದರು ಎಂದು ಹೇಳಿದರು.ಪುರಸಭೆ ಅದ್ಯಕ್ಷ ವಸಂತಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಪುರಸಭೆ ನಾಮಿನಿ ಸದಸ್ಯ ಆದಿಲ್ ಪಾಷ ಮಾತನಾಡಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಪುರಸಭೆ ಸದಸ್ಯ ಕುಮಾರಪ್ಪ, ಪುರಸಭೆ ನಾಮಿನಿ ಸದಸ್ಯ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಟಿ.ಓ.ವಿಜಯಕುಮಾರ್, ತಾ.ಹಿಂ.ವ.ಕಲ್ಯಾಣಾಧಿಕಾರಿ ಧರ್ಮರಾಜ್ ಎಲ್. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.25ಕೆಟಿಆರ್.ಕೆ.4ಃತರೀಕೆರೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ನೆರವೇರಿಸಿದರು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಪುರಸಭೆ ಸದಸ್ಯರು, ಪುರಸಭೆ ನಾಮಿನಿ ಸದಸ್ಯರು, ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ.ಸಬಿತಾ ಬನ್ನಾಡಿ ಮತ್ತಿತರರು ಭಾಗವಹಿಸಿದ್ದರು.