ಸಾರಾಂಶ
ಬೆಳಗಾವಿಯ ಬೆಳ್ಳಿ ಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ಮತ್ತು ತಂಡದ ಜಾನಪದ ಗಾಯನ, ಬೆಂಗಳೂರಿನ ಗ್ರಾಮಾಂತರದ ಸುಷ್ಮ ತಂಡದವರ ಸಮೂಹ ನೃತ್ಯ, ಹುಬ್ಬಳ್ಳಿಯ ಗೋಕುಲದ ಆನಂದಪ್ಪ.ಬಿ.ಎಚ್ ಮತ್ತು ತಂಡದ ಕಿನ್ನರಿ ಜೋಗಿ ಪದಗಳು, ಹರಪ್ಪನಹಳ್ಳಿಯ ನಂದಿಬೇವೂರಿನ ಕೆ. ಚಂದ್ರಪ್ಪ ಮತ್ತು ತಂಡದ ರಂಗಗೀತೆ ಜನರನ್ನು ಸಂಗೀತದಲ್ಲಿ ತೇಲಿಸಿದವು
ಹಂಪಿ: ಹಂಪಿ ಎದುರು ಬಸವಣ್ಣ ವೇದಿಕೆಯಲ್ಲಿ ಜರುಗಿದ ಹತ್ತಾರು ಸಂಗೀತ ಕಾರ್ಯಕ್ರಮಗಳಿಗೆ ಪ್ರೇಕ್ಷಕರು ಪುಲ್ ಫೀದಾ ಆಗಿದ್ದರು.
ಕೊಟ್ಟೂರಿನ ಮಂಗನಹಳ್ಳಿಯ ಜಿ. ಬಸವರಾಜಪ್ಪ ಮತ್ತು ತಂಡದವರ ಸುಗಮ ಸಂಗೀತ ಎಲ್ಲರನ್ನು ಮಂತ್ರಮುಗ್ಧರನ್ನಾಗಿ ಮಾಡಿತ್ತು. ಹರಪ್ಪನಹಳ್ಳಿಯ ಬಿ.ಸುಬ್ರಹ್ಮಣ್ಯ ಮತ್ತು ತಂಡದವರ ಹಿಂದೂಸ್ಥಾನಿ ಸಂಗೀತ, ಮರಿಯಮ್ಮನಹಳ್ಳಿಯ ಎಂ. ವೀರೇಶ್ ಮತ್ತು ತಂಡದ ಸಮೂಹ ನೃತ್ಯ ಎಲ್ಲರ ಗಮನ ಸೆಳೆಯಿತು.ಹೂವಿನಹಡಗಲಿ ತಾಲೂಕಿನ ಇಟ್ಟಿಗಿಯ ಸೋಮಶೇಖರ್. ಜಿ ಮತ್ತು ತಂಡದ ಸುಗಮ ಸಂಗೀತ ಹಾಡು ಸಂಗೀತ ಲೋಕದಲ್ಲಿ ತೇಲಿಸಿತು. ಲಕ್ಕುಂಡಿಯ ಶಿವು ಭಜಂತ್ರಿ ಮತ್ತು ತಂಡದ ಜಾನಪದ ಮತ್ತು ತತ್ವಪದ, ಹಗರಿಬೊಮ್ಮನಹಳ್ಳಿಯ ರಾಮನಗರದ ದ್ರಾಕ್ಷಾಯಿಣಿ ಹಿರೇಮಠ ಮತ್ತು ತಂಡದ ಭಾವಗೀತೆಗಳು, ಗಂಗಾವತಿಯ ದೀಪಾ ಶ್ಯಾಂ ದರೋಜಿ ಮತ್ತು ತಂಡದ ಭರತನಾಟ್ಯಕ್ಕೆ ನೆರೆದಿದ್ದ ಪ್ರೇಕ್ಷಕರು ಮನಸೋತರು.
ಚಳ್ಳಕೆರೆಯ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಸಾಂಸ್ಕೃತಿಕ ಕಲಾ ಸಂಘ ಮತ್ತು ತಂಡದ ಸುಗಮ ಸಂಗೀತ, ಬಳ್ಳಾರಿಯ ಆರ್. ಹೇಮಾವತಿ ಮತ್ತು ತಂಡದ ಸಮೂಹ ನೃತ್ಯ, ಬಾಗಲಕೋಟೆಯ ನಾಗಪ್ಪ ಗೋವಿಂದಪ್ಪ ಸಿದ್ದನ್ನವರ್ ಮತ್ತು ತಂಡದ ಭಜನೆ ಪದಗಳು ಜನಮನ ಸೆಳೆದವು.ಬೆಂಗಳೂರಿನ ದೇವರಾಜ ಡಿ. ಮತ್ತು ತಂಡದ ತತ್ವಪದಗಳು, ಹೊಸಪೇಟೆಯ ಮದ್ಲಾಪುರದ ರಾಮಾಲಿ ಮತ್ತು ತಂಡದ ಸಮೂಹ ನೃತ್ಯ, ಕುಷ್ಟಗಿಯ ದಾವಲ್ ಸಾಬ್ ಅತ್ತರ್ ಮತ್ತು ತಂಡದ ಗೀಗೀ ಪದಗಳು ಚೆನ್ನಾಗಿ ಕೇಳಿ ಬಂದವು.
ಮರಿಯಮ್ಮನಹಳ್ಳಿಯ ಪಂ. ಪುಟ್ಟರಾಜ ಗವಾಯಿಗಳ ಸಾಂಸ್ಕೃತಿಕ ಮತ್ತು ಸಮಾಜಸೇವಾ ಚಾರಿಟೇಬಲ್ ಟ್ರಸ್ಟ್ ಇವರ ಸಂಗೀತ ಸುಧೆ, ಬೆಂಗಳೂರಿನ ಕೋರಮಂಗಲದ ರಕ್ಷಿತ್ ಕಾರ್ತಿಕ್ ಮತ್ತು ತಂಡದ ನೃತ್ಯ, ನಂಜನಗೂಡಿನ ಕಿರಗುಂದ ಗ್ರಾಮದ ಶ್ರೀನಿವಾಸ ಮೂರ್ತಿ ಮತ್ತು ತಂಡದ ಜಾನಪದ ಗಾಯನ, ಹೊಸಪೇಟೆಯ ಕವನ ಮತ್ತು ತಂಡದ ಜಾನಪದ ಗೀತೆಗಳು ಸಂಗೀತ ಸುಧೆಯನ್ನೇ ಹರಿಸಿತು. ದಾವಣಗೆರೆಯ ಮಾಧವಿ.ಡಿ.ಕೆ ಮತ್ತು ತಂಡದ ನೃತ್ಯ, ಬೀದರಿನ ಶಿವಾಜಿರಾವ್ ಸಗರ್ ಮತ್ತು ತಂಡದ ಹಿಂದೂಸ್ಥಾನಿ ಸಂಗೀತ, ಹಗರಿಬೊಮ್ಮನಹಳ್ಳಿಯ ಕಾವ್ಯವಾಹಿನಿ ಗಾಯನ ಸಂಸ್ಥೆ ಮತ್ತು ತಂಡದವರ ನೃತ್ಯ, ಬೆಳಗಾವಿಯ ಬೆಳ್ಳಿ ಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ಮತ್ತು ತಂಡದ ಜಾನಪದ ಗಾಯನ, ಬೆಂಗಳೂರಿನ ಗ್ರಾಮಾಂತರದ ಸುಷ್ಮ ತಂಡದವರ ಸಮೂಹ ನೃತ್ಯ, ಹುಬ್ಬಳ್ಳಿಯ ಗೋಕುಲದ ಆನಂದಪ್ಪ.ಬಿ.ಎಚ್ ಮತ್ತು ತಂಡದ ಕಿನ್ನರಿ ಜೋಗಿ ಪದಗಳು, ಹರಪ್ಪನಹಳ್ಳಿಯ ನಂದಿಬೇವೂರಿನ ಕೆ. ಚಂದ್ರಪ್ಪ ಮತ್ತು ತಂಡದ ರಂಗಗೀತೆ ಜನರನ್ನು ಸಂಗೀತದಲ್ಲಿ ತೇಲಿಸಿದವು.