ವಚನಗಳ ಪ್ರಚಾರದಲ್ಲಿ ಎಡೆಯೂರು ಕರ್ತೃ ಶ್ರೀಗಳು ಅಗ್ರಗಣ್ಯರು: ಡಾ.ತೋಂಟದ ಸಿದ್ದರಾಮ ಸ್ವಾಮೀಜಿ

| Published : Dec 05 2024, 12:33 AM IST

ಸಾರಾಂಶ

ಭಕ್ತರಿಂದ ಭಕ್ತರಿಗಾಗಿ ಭಕ್ತರು ನಡೆಸುವ ಏಕ ಮಾತ್ರ ಸಂಸ್ಥೆ ಎಡೆಯೂರು ದಾಸೋಹ ಎಂದು ಡಂಬಳ ಗದುಗಿನ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್ ಭಕ್ತರಿಂದ ಭಕ್ತರಿಗಾಗಿ ಭಕ್ತರು ನಡೆಸುವ ಏಕ ಮಾತ್ರ ಸಂಸ್ಥೆ ಎಡೆಯೂರು ದಾಸೋಹ ಎಂದು ಡಂಬಳ ಗದುಗಿನ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ತಿಳಿಸಿದ್ದಾರೆ,ತಾಲೂಕಿನ ಎಡೆಯೂರು ಶ್ರೀ ಕ್ಷೇತ್ರದಲ್ಲಿ ದಾಸೋಹ ಕೈಂಕರ್ಯ ಸೇವಾ ಸಂಘದ ವತಿಯಿಂದ ಏರ್ಪಡಿಸಿದ್ದ ದಾನಿಗಳಿಗೆ ಸನ್ಮಾನ ಮತ್ತು ವಚನ ಮಂಗಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,ಬಸವಣ್ಣನ ಹೆಸರು ವಿಶ್ವದಾದ್ಯಂತ ಪಸರಿಸಲು ಮತ್ತು ಬಸವನ ವಚನಗಳು ಮೌಲ್ಯಯುತ ಆಗಲು ಎಡೆಯೂರಿನ ಕರ್ತೃ ಶಕ್ತಿಯಾಗಿರುವ ಮಹಾನ್‌ ತಪಸ್ವಿ ಶ್ರೀ ಸಿದ್ದಲಿಂಗೇಶ್ವರರೇ ಮೂಲ ಕಾರಣ. ಸಿದ್ದಲಿಂಗೇಶ್ವರರ ಕಾಲಾವಧಿಯಲ್ಲಿ ಬಸವ ತತ್ವಗಳನ್ನು ಉಳಿಸುವ ಕ್ರೂಢೀಕರಿಸುವ ಮತ್ತು ಸಂಪಾದಿಸುವ ಹಾಗೂ ಮುದ್ರಿಸಿ ಪ್ರಕಟಿಸುವ ಕೆಲಸವನ್ನು ಮಾಡಿದರು ಎಂದರು.

ಬಸವ ತತ್ವದ ಇನ್ನೊಂದು ಮಜಲು ಎನಿಸಿಕೊಂಡ ಕಾಯಕ ಮತ್ತು ದಾಸೋಹ ವ್ಯವಸ್ಥೆಗೆ ಚಾಲನೆ ನೀಡಿದ ಬಸವಣ್ಣ ಅದನ್ನು ಅನುಷ್ಠಾನಕ್ಕೆ ತಂದವರು ಯಡಿಯೂರು ಸಿದ್ದಲಿಂಗೇಶ್ವರರು. ಎಡೆಯೂರು ದೇವಾಲಯದ ಹಿಂಭಾಗದಲ್ಲಿರುವ ದಾಸೋಹದ ಜಾಗದಲ್ಲಿ ಸಿದ್ದಲಿಂಗೇಶ್ವರರು ಭಕ್ತರಿಂದ ಎಡೆಯನ್ನು ಸ್ವೀಕರಿಸಿದ ಮತ್ತು ನಂತರದ ಕಾಲಾವಧಿಯಲ್ಲಿ ದಾಸೋಹ ವ್ಯವಸ್ಥೆ ನಡೆದ ಸ್ಥಳ ಇದಾಗಿದೆ ಎಂದರು.

ಭಕ್ತರು ನಡೆಸುವ ಈ ದಾಸೋಹ ವ್ಯವಸ್ಥೆಗೆ ರಾಜ್ಯಾದ್ಯಂತ ಸಾವಿರಾರು ಭಕ್ತರು ತನು ಮನ ಧನವನ್ನು ಅರ್ಪಿಸಿ ದಾಸೋಹಿಗಳಾಗಿದ್ದಾರೆ ದಾನಕ್ಕೂ ದಾಸೋಹಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿದಾಗ ದಾನ ಮಾಡುವುದು ಮೇಲು ಪಡೆಯುವುದು ಕೀಳು ಎಂಬ ಭಾವನೆಗಳು ಉಂಟಾಗುತ್ತವೆ ಆದರೆ ದಾಸೋಹ ವ್ಯವಸ್ಥೆಯಲ್ಲಿ ಸಮಾನವಾದ ವಿಚಾರ ಇದೆ ಎಂದರು. ಇದೇ ಸಂದರ್ಭದಲ್ಲಿ ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಹಲವಾರು ಭಕ್ತರಿಗೆ ಎಡೆಯೂರು ದಾಸೋಹ ಕೈಂಕರ್ಯ ಸೇವಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು, ಈ ಸಂದರ್ಭದಲ್ಲಿ ದಾಸೋಹ ಸಮಿತಿಯ ಅಧ್ಯಕ್ಷ ಸುಭಾಷ್ ಕೆ ಇಂಗಳೇಶ್ವರ, ಉಪಾಧ್ಯಕ್ಷ ಉಮಾ ಮಹೇಶ , ನಿರ್ದೇಶಕರಾದ ನಿರಂಜನ್ ವಿ ಬುಳ್ಳ, ಬೆಲ್ಲದ ಪ್ರಕಾಶ್, ಜಿಎಸ್ ನಟರಾಜು ಆರ್ ಎನ್ ಶಿವಣ್ಣ,ಭಾರತೇಶ ಸೇರಿದಂತೆ ಇತರರು ಇದ್ದರು ವ್ಯವಸ್ಥಾಪಕ ಪ್ರಭುಲಿಂಗ ಸ್ವಾಮಿ, ಸೇರಿದಂತೆ ಹಲವಾರು ನಿರ್ದೇಶಕರು, ಭಕ್ತರು, ಸಿಬ್ಬಂದಿ ಇದ್ದರು.