ಬಿಟ್ಟು ಹೋದ ಮೊಬೈಲ್ ಮರಳಿಸಿದ ಆಟೋ ಚಾಲಕ

| Published : May 19 2024, 01:54 AM IST

ಬಿಟ್ಟು ಹೋದ ಮೊಬೈಲ್ ಮರಳಿಸಿದ ಆಟೋ ಚಾಲಕ
Share this Article
  • FB
  • TW
  • Linkdin
  • Email

ಸಾರಾಂಶ

ಆಟೋದಲ್ಲಿಯೇ ಮೊಬೈಲ್ ಬಿಟ್ಟು ಹೋಗಿದ್ದ ವಿದ್ಯಾರ್ಥಿನಿಗೆ ಆಟೋ ಚಾಲಕ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.

ವಿಜಯಪುರ: ಆಟೋದಲ್ಲಿಯೇ ಮೊಬೈಲ್ ಬಿಟ್ಟು ಹೋಗಿದ್ದ ವಿದ್ಯಾರ್ಥಿನಿಗೆ ಆಟೋ ಚಾಲಕ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ. ಆಟೋದಲ್ಲಿ ಪ್ರಯಾಣಿಸುವಾಗ ವಿದ್ಯಾರ್ಥಿನಿಯೋರ್ವಳು ಬೆಲೆಬಾಳುವ ಮೊಬೈಲ್‌ ಅನ್ನು ಬಿಟ್ಟು ಹೋಗಿದ್ದಳು. ಈ ವೇಳೆ ಆಟೋ ಚಾಲಕ ಸಲ್ಮಾನ್ ಶೇಖ್ ಮೊಬೈಲ್‌ನ್ನು ಸಂಚಾರಿ ಠಾಣೆ ಪೊಲೀಸರಿಗೆ ಮರಳಿ ನೀಡಿದ್ದಾನೆ. ತದನಂತರ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಿ ಪೊಲೀಸರು ಆಕೆಗೆ ಮೊಬೈಲ್ ಮರಳಿ ನೀಡಿದ್ದಾರೆ. ಅಲ್ಲದೇ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಸಲ್ಮಾನ್ ಶೇಖ್‌ಗೆ ಸಂಚಾರಿ ಠಾಣೆಯ ಎಎಸ್‌ಐ ಶಿವಾನಂದ ಕಟ್ಟಿಮನಿ ಸೇರಿದಂತೆ ಪೊಲೀಸರು ಸನ್ಮಾನಿಸಿ ಗೌರವಿಸಿದ್ದಾರೆ.