ಜೀವಾತ್ಮರಿಗೆ ಲೇಸು ಬಯಸುವುದೇ ಬಸವ ಸಂಸ್ಕೃತಿ

| Published : Sep 03 2025, 01:02 AM IST

ಜೀವಾತ್ಮರಿಗೆ ಲೇಸು ಬಯಸುವುದೇ ಬಸವ ಸಂಸ್ಕೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಬಸವ ತತ್ವದಲ್ಲಿ ಆಶಾ ತತ್ವವಿದೆ. ಜೀವನದಲ್ಲಿ ಸದಾ ಉತ್ಸಾಹದಿಂದಿರಬೇಕು. ವಚನಗಳಲ್ಲಿ ಜೀವನದ ಮೌಲ್ಯವಿರುವುದರಿಂದ ವಚನದ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ ಎಂದು ಬಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಬಸವ ತತ್ವದಲ್ಲಿ ಆಶಾ ತತ್ವವಿದೆ. ಜೀವನದಲ್ಲಿ ಸದಾ ಉತ್ಸಾಹದಿಂದಿರಬೇಕು. ವಚನಗಳಲ್ಲಿ ಜೀವನದ ಮೌಲ್ಯವಿರುವುದರಿಂದ ವಚನದ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ ಎಂದು ಬಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ನಂದೀಶ್ವರ ರಂಗ ಮಂದಿರದಲ್ಲಿ ಬಸವ ಸಂಸ್ಕೃತಿಕ ಅಭಿಯಾನದ ಅಂಗವಾಗಿ ನಡೆದ ವಚನ ಸಂವಾದದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನಸಿಕ ಮನೋಬಲ ವೃದ್ಧಿಯಾಗುತ್ತದೆ. ಪ್ರತಿ ದಿನ ವಚನ ಪಠಿಸಿದರೆ ಬದುಕು ಎತ್ತರಕ್ಕೆ ಸಾಗುತ್ತದೆ ಎಂದರು.ಗದಗದ ಡಾ.ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಬಸವ ಸಂಸ್ಕೃತಿ ಇದು ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಸಂಸ್ಕೃತಿ. ಈ ಸಮಾಜದಲ್ಲಿನ ಅಂಧ ಶ್ರದ್ಧೆ ಮೂಢನಂಬಿಕೆ, ಶೋಷಣೆ ನಿವಾರಿಸುವ ಸಂಸ್ಕೃತಿ. ಮಕ್ಕಳು ಗುರು, ಹಿರಿಯರು ಹಾಗೂ ತಂದೆ ತಾಯಿಯರನ್ನು ಅಗೌರವದಿಂದ ಕಾಣುತ್ತಿರುವುದು ವಿಷಾಧನೀಯ ಸಂಗತಿ. ಮಹಿಳೆಯರನ್ನು ದೇವರೆಂಬ ಭಾವನೆಯಿಂದ ಕಾಣಬೇಕು. ಅಂದಾಗ ಮಾತ್ರ ಅತ್ಯಾಚಾರ, ಅನ್ಯಾಯಗಳನ್ನು ತಡೆಗಟ್ಟಬಹುದು. ಸಮಾಜದಲ್ಲಿ ಜಾತಿ, ಪಂಥ ಧರ್ಮದ ಹೆಸರಿನಲ್ಲಿ ಅಸಮಾನತೆ ಉಂಟಾಗುತ್ತಿದೆ. ಶರಣರ ಅಮೂಲ್ಯ ತತ್ವಗಳಾದ ಸಮಾನತೆ, ಕಾಯಕ, ದಾಸೋಹ ಜಾರಿಗೆ ಬಂದರೆ ಸದೃಢ ಸಮಾಜ ನಿರ್ಮಿಸಲು ಸಾಧ್ಯ. ಈ ನಿಟ್ಟಿನಲ್ಲಿ ಜನಮಾನಸದಲ್ಲಿ ಶರಣರ ವಿಚಾರ ಮುಟ್ಟಿಸುವ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಪ್ರತಿ ನಿತ್ಯ ಶರಣರ ಸಂವಾದಗಳು ನಡೆಯುತ್ತಿದ್ದವು. ಸಂವಾದದಿಂದ ಸಮಾಜದಲ್ಲಿ ಸಮೃದ್ಧಿ, ನೆಮ್ಮದಿ, ಶಾಂತಿ ನೆಲೆಸುತ್ತದೆ. ಸಮಾಜದಲ್ಲಿ ವಾದ ವಿವಾದಗಳು ಇರಬಾರದು. ಕಾಯಕವೇ ಕೈಲಾಸ ಎಂದು ಶರಣರು ಹೇಳುವ ಮೂಲಕ ಕಾಯಕ ಹಾಗೂ ಕಾಯಕದ ಮಹತ್ವವನ್ನು ಜಗತ್ತಿಗೆ ತಿಳಿಸಿದ್ದಾರೆ. ನಾವು ಮಾಡುವ ಕಾಯಕದಲ್ಲಿ ಪ್ರಾಮಾಣಿಕತೆ ಇದ್ದಾಗ ಯಶಸ್ಸು ಸಾಧ್ಯ ಎಂದು ಹೇಳಿದರು.ಶರಣ ಸಂಸ್ಕೃತಿಯಲ್ಲಿ ಧಾನ ಪ್ರವೃತ್ತಿ ಮತ್ತು ಕರ್ಮ ಸಿದ್ಧಾಂತ ಇಲ್ಲ. ಇದರಲ್ಲಿ ದಾಸೋಹ ಪ್ರವೃತ್ತಿ, ಕಾರ್ಯ ಸಿದ್ದಾಂತವಿದೆ, ಸತ್ವ ಪ್ರೇರಣೆ ನೀಡುವ ವಿದ್ಯೆ ಬಹಳ ಮುಖ್ಯವಾಗಿದೆ. ನಾವುಗಳು ವಿದ್ಯಾವಂತರಾಗಿದ್ದೇವೆ ವಿನಃ ವಿವೇಕಸ್ಥರಾಗಿಲ್ಲ. ವಿದ್ಯಾರ್ಥಿಗಳು ವಿನಯ, ವಿವೇಕ ಬೆಳೆಸಿಕೊಳ್ಳಬೇಕು. ಶಿಕ್ಷಣದಲ್ಲಿ ಬದಲಾವಣೆಯಾಗದೆ ಹೋದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.ಸಂವಾದದಲ್ಲಿ ವಿವಿಧ ವಿದ್ಯಾರ್ಥಿಗಳು ರುದ್ರಾಕ್ಷಿ, ಭಕ್ತಿ ಮುಕ್ತಿ, ಜಂಗಮ-ಸನ್ಯಾಸಿ, ದೇವರು-ಇಷ್ಟಲಿಂಗ ಸೇರಿದಂತೆ ವಚನಕ್ಕೆ ಸಂಬಂಧಿಸಿದ ವಿವಿಧ ಪ್ರಶ್ನೆ ಕೇಳಿದರು. ವೇದಿಕೆಯಲ್ಲಿನ ವಿವಿಧ ಮಠಾಧೀಶರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ವೇದಿಕೆಯಲ್ಲಿ ಸಿದ್ದಲಿಂಗ ಸ್ವಾಮೀಜಿ, ವೃಷಭಲಿಂಗ ಸ್ವಾಮೀಜಿ , ಪ್ರಭು ಚನ್ನಬಸವ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರರು, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಜಾಗತಿಕ ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶ ಎಸ್.ಎಂ.ಜಾಮದಾರ, ಈರಣ್ಣ ಪಟ್ಟಣಶೆಟ್ಟಿ ಇತರರು ಇದ್ದರು. ಶೇಗುಣಸಿಯ ಡಾ.ಮಹಾಂತ ಪ್ರಭು ನಿರೂಪಿಸಿ, ವಂದಿಸಿದರು.