ಬಡತನ, ಅಸ್ಪೃಶ್ಯತೆ ಕಹಿ ಉಂಡು ಅಜ್ಞಾನ, ಅಂಧಕಾರವನ್ನು ದೂರವಾಗಿಸಲು ಶಿಕ್ಷಣವೇ ಅಸ್ತ್ರವಾಗಿಸಿಕೊಂಡರು. ಇವರ ತತ್ವ ಸಿದ್ಧಾಂತ, ಆದರ್ಶ, ಚಿಂತನೆ, ಸಧೃಢ ಭಾರತ ನಿರ್ಮಾಣಕ್ಕೆ ಕೊಡುಗೆಯಾಗಿದೆ. ಅಂಬೇಡ್ಕರ್ ಅವರ ಜ್ಞಾನಭಂಡಾರ, ವಿಷಯ ಮಂಡನೆಗೆ ವಿಶ್ವವೇ ಮನಸೋತಿದೆ. ಶ್ರೀಮಂತರ, ಉಳ್ಳವರಿಗಾಗಿ ಸಂವಿಧಾನದ ತಿದ್ದುಪಡಿ ಆಗಬಾರದು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಅಕ್ಷರ ಕ್ರಾಂತಿ ದುರ್ಬಲ ಸಮುದಾಯದ ಅಸ್ತ್ರವಾಗಬೇಕಿದೆ ಎಂದು ತಿಳಿಸಿ ಸಮಪಾಲು, ಸಮಬಾಳಿಗೆ ಜೀವನ ಮುಡಿಪಾಗಿಟ್ಟ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್‌ ಎಂದು ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಆದರ್ಶ ಸುಗಮ ಸಂಗೀತ ಅಕಾಡೆಮಿ, ಕನ್ನಡ ಕಲಾ ಸಂಘ, ಸ್ಪಂದನಾ ಫೌಂಡೇಷನ್‌ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ ಅವರ 69ನೇ ಮಹಾಪರಿನಿರ್ವಾಣ ದಿನದಲ್ಲಿ ಮಾತನಾಡಿದರು.

ಶೋಷಿತ, ತಳ ಸಮುದಾಯದ ಧ್ವನಿ ಇಲ್ಲದವರಿಗೆ ಗಟ್ಟಿಧ್ವನಿ ನೀಡಿದ ಚೇತನ ಅಂಬೇಡ್ಕರ್. ನಮ್ಮ ನಾಡಿಗೆ ಇವರ ರಚನೆಯ ಸಂವಿಧಾನವೇ ಭಗವದ್ಗೀತೆ. ಮಕ್ಕಳಿಗೆ ಸಂವಿಧಾನದ ಆಶಯವನ್ನು ಮನದಟ್ಟು ಮಾಡಿದರೆ ನಮ್ಮ ನಾಡು, ನುಡಿ, ಪ್ರಕೃತಿ, ಸೋದರತ್ವ, ವಿಶ್ವ ಭ್ರಾತೃತ್ವ ಎಲ್ಲವೂ ತಿಳಿಯಲಿದೆ ಎಂದರು.

ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ಸಾರವನ್ನು ಅರಿಯಬೇಕು. ಸಂವಿಧಾನದ ಜಾತ್ಯತೀತ, ಸಾರ್ವ ಭೌಮತ್ವ, ಆರ್ಥಿಕ, ಸಾಮಾಜಿಕ, ನ್ಯಾಯ, ಅಭಿವ್ಯಕ್ತ ಸ್ವಾತಂತ್ರ್ಯ, ವಿಶ್ವ ಭ್ರಾತೃತ್ವ, ಸಹಬಾಳ್ವೆ, ಶಿಕ್ಷಣ, ಬದುಕುವ ಹಕ್ಕಿನ ಸಾರವನ್ನು ಸಂವಿಧಾನ ತಿಳಿಸಿದೆ. ಇದನ್ನು ಅರಿತು ಬಾಳಿದರೆ ಸಾಮರಸ್ಯ ಬದುಕು ನಮ್ಮದಾಗಲಿದೆ ಎಂದು ಹೇಳಿದರು.

ಬಡತನ, ಅಸ್ಪೃಶ್ಯತೆ ಕಹಿ ಉಂಡು ಅಜ್ಞಾನ, ಅಂಧಕಾರವನ್ನು ದೂರವಾಗಿಸಲು ಶಿಕ್ಷಣವೇ ಅಸ್ತ್ರವಾಗಿಸಿಕೊಂಡರು. ಇವರ ತತ್ವ ಸಿದ್ಧಾಂತ, ಆದರ್ಶ, ಚಿಂತನೆ, ಸಧೃಢ ಭಾರತ ನಿರ್ಮಾಣಕ್ಕೆ ಕೊಡುಗೆಯಾಗಿದೆ. ಅಂಬೇಡ್ಕರ್ ಅವರ ಜ್ಞಾನಭಂಡಾರ, ವಿಷಯ ಮಂಡನೆಗೆ ವಿಶ್ವವೇ ಮನಸೋತಿದೆ. ಶ್ರೀಮಂತರ, ಉಳ್ಳವರಿಗಾಗಿ ಸಂವಿಧಾನದ ತಿದ್ದುಪಡಿ ಆಗಬಾರದು ಎಂದು ನುಡಿದರು.

ಸ್ಪಂದನಾ ಟ್ರಸ್ಟಿ ತ್ರಿವೇಣಿ, ಕನ್ನಡ ಕಲಾ ಸಂಘ ಕಾರ್ಯದರ್ಶಿ ಕೆ.ಜೆ.ನಾರಾಯಣ್, ಸಾಮಾಜಿಕ ಕಾರ್ಯಕರ್ತ ಮಾದಾಪುರ ಸುಬ್ಬಣ್ಣ ಮಾತನಾಡಿದರು. ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಮಕ್ಕಳೊಂದಿಗೆ ಕಟ್ಟುತ್ತೇವ ನಾವು ಕಟ್ಟುತ್ತೇವ, ಒಡೆದ ಮನಸುಗಳ, ಕಂಡ ಕನಸುಗಳ, ನೊಂದಜನರಿಗೆ ನೀ ದೇವರೋಜಗ ಹೇಳಿದೆ ಗೀತೆಯನ್ನು ಹಾಡಿ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಿದರು. ಸಂವಿಧಾನ ಪೀಠಿಕೆ ಪ್ರತಿಜ್ಞೆ ಸ್ವೀಕಾರ ಮಾಡಲಾಯಿತು.

ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್,ಕೆ.ವಿ. ಬಲರಾಮು, ಸ್ಪಂದನಾ ಟ್ರಸ್ಟಿ ತ್ರಿವೇಣಿ,ಮಹೇಂದ್ರ, ಕವಿತಾ ಮತ್ತಿತರರಿದ್ದರು.