‘ನನ್ನ ದೇವರು..’ ಪುಸ್ತಕ ಶರಣರ ಚಿಂತನೆಗಳ ದ್ಯೋತಕ: ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ

| Published : Mar 17 2025, 12:34 AM IST

‘ನನ್ನ ದೇವರು..’ ಪುಸ್ತಕ ಶರಣರ ಚಿಂತನೆಗಳ ದ್ಯೋತಕ: ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವ ಪಂಕ್ತಿಗೂ ಸೇರದ ಸೃಜನ ಶೀಲ ಬರಹಗಾರ ಡಾ.ಸಂಗೇನಹಳ್ಳಿ ಅಶೋಕ್ಕುಮಾರ್ ಬರೆದಿರುವ ‘ನನ್ನ ದೇವರು ಮತ್ತು ಇತರೆ ಕವಿತೆಗಳು'' ಪುಸ್ತಕ 12ನೇ ಶತಮಾನದ ಶರಣರ ಚಿಂತನೆಗಳ ದ್ಯೋತಕವಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ದಾಸೋಹ ಸಂಸ್ಕೃತಿ ಉತ್ಸವದ ಸಂಚಾಲಕ ದೊಣೆಹಳ್ಳಿ ಗುರುಮೂರ್ತಿ ಹೇಳಿದರು.

ಸಮಾವೇಶ । ಅಭಿಮತ । ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಜಗಳೂರು

ಯಾವ ಪಂಕ್ತಿಗೂ ಸೇರದ ಸೃಜನ ಶೀಲ ಬರಹಗಾರ ಡಾ.ಸಂಗೇನಹಳ್ಳಿ ಅಶೋಕ್ಕುಮಾರ್ ಬರೆದಿರುವ ‘ನನ್ನ ದೇವರು ಮತ್ತು ಇತರೆ ಕವಿತೆಗಳು'''' ಪುಸ್ತಕ 12ನೇ ಶತಮಾನದ ಶರಣರ ಚಿಂತನೆಗಳ ದ್ಯೋತಕವಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ದಾಸೋಹ ಸಂಸ್ಕೃತಿ ಉತ್ಸವದ ಸಂಚಾಲಕ ದೊಣೆಹಳ್ಳಿ ಗುರುಮೂರ್ತಿ ಹೇಳಿದರು.

ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿರುವ ಶ್ರೀ ಶರಣ ಬಸವೇಶ್ವರ ದಾಸೋಹಮಠದಲ್ಲಿ ಹಮ್ಮಿಕೊಳ್ಳಲಾಗಿರುವ 2ನೇ ದಿನವಾದ ಭಾನುವಾರ ಮಹಿಳಾ ಸಬಲೀಕರಣ ಸಮಾವೇಶ ಮತ್ತು ಸರ್ವಧರ್ಮ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ಡಾ.ಸಂಗೇನಹಳ್ಳಿ ಅಶೋಕ್ಕುಮಾರ್ ಬರೆದಿರುವ ‘ನನ್ನ ದೇವರು ಮತ್ತು ಇತರೆ ಕವಿತೆಗಳು’ ಪುಸ್ತಕ ಬಿಡುಗಡೆ ಮಾಡಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ವರ್ಷದಿಂದ ದಾಸೊಹ ಸಂಸ್ಕೃತಿ ಉತ್ಸವದ ಮುಖೇನ 12 ಶತಮಾನದಿಂದಲೇ ತತ್ವ ಬದ್ಧತೆ ಹೊಂದಿರುವ ಮಠಗಳಲ್ಲಿ ಶರಣ ಬಸವೇಶ್ವರ ಮಠವೂ ಒಂದಾಗಿದೆ. ಈ ತಾಲೂಕಿನ ಶಕ್ತ ಬರಹಗಾರರು ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಬರೆದಿರುವ ‘ನನ್ನ ದೇವರು ಇತರೆ ಕವಿತೆಗಳು’ ಕಾವ್ಯ ಸಂಗ್ರಹದಲ್ಲಿ ಆಹಾರವೇ ನನ್ನದೇವರು, ನಡೆದಾಡಲು ಬಳಸುವ ಚಪ್ಪಲಿಯೇ ನನ್ನ ದೇವರು, ಧರಿಸುವ ಬಟ್ಟೆಯೇ ನನ್ನ ದೇವರು, ಪರಿಶುದ್ಧವಾದ ವ್ಯಕ್ತಿ, ಶಕ್ತಿಯೇ ನನ್ನ ದೇವರು'''''''' ಎಂದು ತಮ್ಮ ನಿತ್ಯ ಬದುಕಿನ ವಸ್ತುವಿನ ಬಳಕೆಗಳನ್ನು ದೇವರಿಗೆ ಹೋಲಿಸಿ ಇಡೀ ಕವಿತೆಗಳಲ್ಲಿ ಸೃಜನಾತ್ಮಕ ಕಾಣಬಹುದಾಗಿದೆ ಎಂದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಶರಣ ತತ್ವಗಳೇ ಮಾಕ್ರ್ಸ್ ಚಿಂತನೆಗಳಲ್ಲೂ ಕಾಣಬಹುದು. ಶರಣ ಬಸವೇಶ್ವರ ಮಠಕ್ಕೆ ದೊಣೆಹಳ್ಳಿ ಗುರುಮೂರ್ತಿ ಧರ್ಮಾಧಿಕಾರಿಯಾಗಿ ಘೋಷಣೆ ಮಾಡಿದರೆ ಸೂಕ್ತ ಎಂದು ಅಭಿಪ್ರಾಯ ಪಟ್ಟರು.

ಲೇಖಕ ಡಾ.ಸಂಗೇನಹಳ್ಳಿ ಅಶೋಕ್‌ ಕುಮಾರ್ ಮಾತನಾಡಿ, ಉತ್ತಮ ಸಂಬಂಧಗಳು ಕಾವ್ಯಗಳಿದ್ದಂತೆ. ಎಲ್ಲರೂ ಓದಲಿ ಎಂದು ನಾನು ಬರೆದಿಲ್ಲ. ಓದುವ ಗ್ರಹಿಸಿಕೊಳ್ಳವ ಕವಿತ್ವದ ಮನಸುಗಳಿಗೆ ಕವಿತೆಗಳು ಕೈಗನ್ನಡಿಯಾಗಿವೆ ಎಂದರು.

ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ ಮಠದ ಪಟ್ಟಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ದೇವರು ಮತ್ತು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಡಾ.ಬಸವಮೂರ್ತಿ ಮಾದರಾ ಚನ್ನಯ್ಯ ಸ್ವಾಮೀಜಿ ಸರ್ವ ಧರ್ಮ ಸರಳ ಸಾಮೂಹಿಕ ವಿವಾಹ ಎರಡು ಜೋಡಿಗಳಿಗೆ ಶರಣರ ತತ್ವಗಳಂತೆ ಸರಳ ವಿವಾಹ ನೆರವೇರಿಸಿದರು.

ನನ್ನ ದೇವರು ಮತ್ತು ಇತರೆ ಕವಿತೆಗಳ ಕುರಿತು ಹಿರಿಯ ಪತ್ರಕರ್ತ ಬಾಮಾ ಬಸವರಾಜಯ್ಯ, ಕೈಗಾರಿಕೋದ್ಯಮಿಗಳಾದ ಸರ್ವಮಂಗಳಮ್ಮ ಎಚ್.ವಿ.ನಾಗೇಂದ್ರಪ್ಪ ಅವರು ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ ನೀಡಿದರು.

ಕಾನಾಮಡುಗಿನ ದಾಮ ಐಮಡಿ ಶರಣಾರ್ಯರು, ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಬಳ್ಳಾರಿ ಜಿಪಂ ಮಾಜಿ ಸದಸ್ಯ ರೇವಣ್ಣ, ದಾವಣಗೆರೆ ಕಾಂಗ್ರೆಸ್ ಮುಖಂಡ ಮಹಾಬಲೇಶ್ವರ ಗೌಡ್ರು, ವಿಎಸ್ಎಸ್ಎನ್ ಅಧ್ಯಕ್ಷ ಕೆ.ಗುರುಮೂರ್ತಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಗಣೇಶ್ ಇದ್ದರು.