ಪೂಜೆಗೆ ಬಂದು ಮಸಣ ಸೇರಿದ ಬಾಲಕ

| Published : Aug 30 2025, 01:00 AM IST

ಸಾರಾಂಶ

ದಾಬಸ್‍ಪೇಟೆ: ಪ್ರತಿಷ್ಠಾಪಿಸಿದ್ದ ಗಣೇಶನನ್ನು ನೋಡಿ ವಾಪಸ್ ಮನೆಗೆ ಹೋಗುವ ವೇಳೆ ರೈಲು ಡಿಕ್ಕಿ ಹೊಡೆದು ಮಗ ಸಾವನ್ನಪ್ಪಿದ್ದು, ತಂದೆ ಗಂಭೀರ ಗಾಯಗೊಂಡಿರುವ ಘಟನೆ ಸೋಂಪುರ ಹೋಬಳಿಯ ಅಲ್ಪಯ್ಯನಪಾಳ್ಯದ ಸಮೀಪ ನಡೆದಿದೆ.

ದಾಬಸ್‍ಪೇಟೆ: ಪ್ರತಿಷ್ಠಾಪಿಸಿದ್ದ ಗಣೇಶನನ್ನು ನೋಡಿ ವಾಪಸ್ ಮನೆಗೆ ಹೋಗುವ ವೇಳೆ ರೈಲು ಡಿಕ್ಕಿ ಹೊಡೆದು ಮಗ ಸಾವನ್ನಪ್ಪಿದ್ದು, ತಂದೆ ಗಂಭೀರ ಗಾಯಗೊಂಡಿರುವ ಘಟನೆ ಸೋಂಪುರ ಹೋಬಳಿಯ ಅಲ್ಪಯ್ಯನಪಾಳ್ಯದ ಸಮೀಪ ನಡೆದಿದೆ.

ಓರಿಸ್ಸಾ ಮೂಲದ ಸೌರವ್(5) ಸ್ಥಳದಲ್ಲೇ ಮೃತಪಟ್ಟಿದ್ದು ತಂದೆ ನಿತಿನ್(40) ಗಂಭೀರವಾಗಿ ಗಾಯಗೊಂಡಿದ್ದು, ತಾಯಿ ಸಂಗೀತಾ ಪಾರಾಗಿದ್ದಾರೆ. ನಿತಿನ್ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕನಾಗಿದ್ದು, ಕುಟುಂಬದೊಂದಿಗೆ ಅಲ್ಪಯ್ಯನಪಾಳ್ಯದಲ್ಲಿ ವಾಸವಾಗಿದ್ದರು.

ಬುಧವಾರ ಸಂಜೆ ನಿಡವಂದದಲ್ಲಿ ಕೂರಿಸಿದ್ದ ಗಣೇಶನನ್ನು ನೋಡಲು ನಿತಿನ್ ಮಗ, ಪತ್ನಿಯೊಂದಿಗೆ ಬಂದು ದರ್ಶನ ಪಡೆದು ರಾತ್ರಿ ರೈಲ್ವೆ ಹಳಿ ದಾಟುವಾಗ ಒಂದು ಬದಿಯಿಂದ ಹಂಪಿ ಎಕ್ಸ್‌ಪ್ರೆಸ್ (ಗೊಲ್ಗಬಜ್-ಸೊಲ್ಲಾಪುರ) ಹಾಗೂ ಯಶವಂತಪುರ-ಶಿವಮೊಗ್ಗ ಪ್ಯಾಸೆಂಜರ್ ರೈಲು, ಒಂದು ಟ್ರಾಕ್‌ನಲ್ಲಿ ರೈಲು ತೆರಳಿದೆ, ಮತ್ತೊಂದು ರೈಲು ಗಮನಿಸದೇ, ಸೌರವ್ ರೈಲಿಗೆ ಸಿಲುಕಿದ್ದು, ಮಗನನ್ನು ರಕ್ಷಿಸಲು ಹೋದ ತಂದೆ ರೈಲಿಗೆ ಸಿಲುಕಿದ್ದಾನೆ.

ತಂದೆ ನಿತಿನ್ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು ವಿಷಯ ತಿಳಿದ ಗ್ರಾಮಸ್ಥರು ನಿತಿನ್‌ನನ್ನು ದಾಬಸ್ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ನಿತಿನ್ ಪತ್ನಿ ಸಂಗೀತಾ ರೈಲ್ವೆ ಹಳಿಯಿಂದ ಸ್ವಲ್ಪ ದೂರವಿದ್ದದ್ದರಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ದಾಬಸ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಒತ್ತಾಯ: ಸಂಬಂಧಪಟ್ಟ ಜನಪ್ರತಿನಿಧಿಗಳು, ಅಲ್ಪಯ್ಯನಪಾಳ್ಯ ಗ್ರಾಮಕ್ಕೆ ಸೂಕ್ತ ರಸ್ತೆ ನಿರ್ಮಾಣ ಮಾಡಿಸಬೇಕು ಎಂದು ಸ್ಥಳೀಯರು, ಸಾಮಾಜಿಕ ಜಾಲತಾಣದಲ್ಲಿ ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.(ಡಿಸಿ ಕಾಲಂ ಸುದ್ದಿ ಸಿಂಗಲ್‌ ಕಾಲಂ ಫೋಟೊ ಮಾತ್ರ ಬಳಸಿ)