ಸಾರಾಂಶ
ಬ್ರಿಟಿಷರ ಸಂಕೋಲೆಯಿಂದ ದೇಶವನ್ನು ಮುಕ್ತಗೊಳಿಸಿ ಸ್ವತಂತ್ರದೆಡೆಗೆ ತರಲು ಹೋರಾಟ ನಡೆಸಿದ ಸಾದ್ವಿ ಹಾಗೂ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಗುಣ, ಶೌರ್ಯ, ಜೀವನ ಆದರ್ಶಗಳು ಇಂದಿನ ಮಹಿಳೆರಿಗೂ ಸ್ಪೂರ್ತಿದಾಯಕ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ ಮತ್ತು ಶೌರ್ಯ ಇಂದಿನ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಮಾದರಿಯಾಗಬೇಕಿದೆ ಎಂದು ತಹಸೀಲ್ದಾರ್ ಜಿ.ಆದರ್ಶ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಒಳಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ಬ್ರಿಟಿಷರ ಸಂಕೋಲೆಯಿಂದ ದೇಶವನ್ನು ಮುಕ್ತಗೊಳಿಸಿ ಸ್ವತಂತ್ರದೆಡೆಗೆ ತರಲು ಹೋರಾಟ ನಡೆಸಿದ ಸಾದ್ವಿ ಹಾಗೂ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಗುಣ, ಶೌರ್ಯ, ಜೀವನ ಆದರ್ಶಗಳು ಇಂದಿನ ಮಹಿಳೆರಿಗೂ ಸ್ಪೂರ್ತಿದಾಯಕ ಎಂದರು.
ದೇಶ ಹಾಗೂ ನಾಡು ಕಂಡ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜೀವನ ಇಂದಿಗೂ ನೈಜ ಮತ್ತು ನಿರಂತರ ಉದಾಹರಣೆ. ತನ್ನ ನಡೆ ನುಡಿಗಳ ಮೂಲಕ ಸ್ವಾತಂತ್ರ್ಯದ ಸ್ವಾಭಿಮಾನವನ್ನು ಹುಟ್ಟುಹಾಕಿದ ದಿಟ್ಟ ಮಹಿಳೆ ಎಂದು ಬಣ್ಣಿಸಿದರು.ಕಿತ್ತೂರು ರಾಣಿ ಚೆನ್ನಮ್ಮ ಅವರು ಕಿತ್ತೂರು ಸಂಸ್ಥಾನವನ್ನು ಉಳಿಸಲು ಬಾಲ್ಯದಲ್ಲಿಯೇ ಅನಿವಾರ್ಯವಾಗಿ ಬಾಲ್ಯದಲ್ಲಿಯೇ ವೀರಗಚ್ಚೆ ಹಾಕಿದ ಮಹಿಳಾ ಮುಕುಟ ಮಣಿ. ನಮ್ಮ ಮಣ್ಣಿನ ಸತ್ವ ನಿಂತಿರುವುದೇ ಇಂತಹ ಮಹಾನ್ ವ್ಯಕ್ತಿಗಳಿಂದ. ಇಂತಹ ಮಹನೀಯರ ಜೀವನ ಮೌಲ್ಯ ತತ್ವಾದರ್ಶಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಅವರನ್ನೂ ಸಹ ಭವಿಷ್ಯದ ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು.
ಈ ವೇಳೆ ತಾಪಂ ಇಒ ಬಿ.ಎಸ್.ಸತೀಶ್, ತಾಲೂಕು ಕಚೇರಿ ಶಿರಸ್ತೇದಾರ್ ಉಮೇಶ್, ಮಲ್ಲಿಕಾರ್ಜುನಸ್ವಾಮಿ, ಕಂದಾಯ ನಿರೀಕ್ಷಕ ರಂಗಸ್ವಾಮಿ, ಯೋಗೇಶ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))