ತರೀಕೆರೆಯಲ್ಲಿ ಕನ್ನಡ ಪದ ಸಂಪತ್ತು 2441ನೇ ಉಪನ್ಯಾಸ ಮಾಲಿಕಾ ಕಮ್ಮಟ

ಕನ್ನಡಪ್ರಭ ವಾರ್ತೆ, ತರೀಕೆರೆ

ಭಾಷಾ ಪ್ರಯೋಗದ ಮೂಲಕ ಕನ್ನಡದ ಭವ್ಯತೆ, ವಿಸ್ತಾರ ಹಾಗೂ ಹರಿವು ಎತ್ತಿಹಿಡಿಯುವ ಅತ್ಯಂತ ಕನ್ನಡ ಶ್ರೇಷ್ಠವಾಗಿದೆ ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಅಧ್ಯಕ್ಷ ಓಂಕಾರಪ್ರಿಯ ಬಾಗೇಪಲ್ಲಿ ಹೇಳಿದ್ದಾರೆ.ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ತಾಲೂಕು ಕಸಾಪ, ಕನ್ನಡ ಸಂಸ್ಕೃತಿ ಸೇವಾ ಭಾರತಿಯಿಂದ ಪಟ್ಟಣದ ಸರ್ಕಾರಿ

ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕನ್ನಡ ಪದ ಸಂಪತ್ತು 2441ನೇ ಉಪನ್ಯಾಸ ಮಾಲಿಕೆ ಕಮ್ಮಟದಲ್ಲಿ ಕನ್ನಡ ಭಾಷಾ ಮಹತ್ವ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಕನ್ನಡ ನುಡಿದಂತೆ ಬರೆಯುವ ಮತ್ತು ಬರೆದಂತೆ ನುಡಿಯುವ ಏಕಮಾತ್ರ ಭಾಷೆ. ವೈಜ್ಞಾನಿಕ ಹಾಗೂ ಭಾಷಾ ಉಚ್ಚಾರಣೆಯಿಂದ ಆರೋಗ್ಯ ವೃದ್ಧಿಯಾಗುವ ಅಂದ ಚೆಂದದ ಪರಿಪೂರ್ಣ ಸರಳ ಭಾಷೆ. ಕನ್ನಡದ ಒಂದು ಶಬ್ದಕ್ಕೆ ಅನೇಕ ಸಮಾನಾಂತರ ಪರ್ಯಾಯ ಪದಗಳು ಕನ್ನಡದಲ್ಲಿ ವಿಫುಲ ಮತ್ತು ವಿಸ್ತಾರವಾಗಿದೆ ಎಂದು ಹೇಳಿದರು.ಅಕ್ಷರ ಮತ್ತು ಅಂಕೆ ಸಂಖ್ಯೆಗಳು ವೈಜ್ಞಾನಿಕವಾಗಿ ರಚಿತವಾಗಿದ್ದು ಸಾವಿರಾರು ವರ್ಷಗಳಿಂದಲೂ ನಿರಂತರ ಬಳಕೆಯಲ್ಲಿದೆ. ಕನ್ನಡ ನಾಡಿನ ನಿವಾಸಿಗಳಾದ ನಾವು ಭಾಷೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ದೈನಂದಿನ ಸಂವಹನ ಕ್ರೀಯೆಯಲ್ಲಿ ಶುದ್ಧ ಕನ್ನಡ ಬಳಸುವ ಅಗತ್ಯವಿದೆ. ಜನನಿ ಮತ್ತು ಜನ್ಮಭೂಮಿ, ಮಾತೃಭಾಷೆ ಅತ್ಯಂತ ಪವಿತ್ರವಾದದ್ದು ಎಂದ ಅವರು ಅನೇಕ ಪದಲಾಲಿತ್ಯದೊಂದಿಗೆ ಉದಾಹರಿಸಿ ಕನ್ನಡ ಭಾಷೆ ಪದಪ್ರಯೋಗ ಮತ್ತು ಅದರ ವಿಸ್ತಾರ ವರ್ಣಿಸಿದರು.ಕನ್ನಡ ಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಅಧ್ಯಕ್ಷ ಓಂಕಾರಪ್ರಿಯ ಬಾಗೇಪಲ್ಲಿ ಕನ್ನಡ ಭಾಷಾತಜ್ಞರಾಗಿದ್ದು ರಾಜ್ಯಾದ್ಯಂತ ಶಾಲಾ ಕಾಲೇಜು ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಕಾರ್ಯಾಗಾರ ಮತ್ತು ಕಮ್ಮಟ ಏರ್ಪಡಿಸಿ ನಾಡಿನ ಭವ್ಯಪರಂಪರೆ ಇತಿಹಾಸ, ಕಲೆ ಸಾಹಿತ್ಯ ಸಂಸ್ಕೃತಿ ಬಗ್ಗೆ ಉಪನ್ಯಾಸಗಳನ್ನು ಮನಮುಟ್ಟುವಂತೆ ನೀಡಿದ್ದಾರೆ ಎಂದರು.

ಸಾಹಿತಿ ಮನಸುಳಿ ಮೋಹನ್ ಮಾತನಾಡಿ ಅಪರೂಪದ ಕನ್ನಡ ಭಾಷಾ ವಿಜ್ಞಾನಿ ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಅಧ್ಯಕ್ಷ ಓಂಕಾರಪ್ರಿಯ ಅವರು ಇಂದು ಕನ್ನಡ ಭಾಷೆ ಭವ್ಯತೆಯನ್ನು ಕಣ್ಮುಂದೆ ತೆರೆದಿಟ್ಟು ವಿಸ್ಮಯ ಮೂಡಿಸಿದ್ದಾರೆ. ಕನ್ನಡ ಭಾಷೆ ಅಭಿವೃದ್ಧಿಗೆ ಇಂತಹ ಮಹನೀಯರ ಕೊಡುಗೆ ಅಗತ್ಯ ಎಂದು ಹೇಳಿದರು.


ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಭಾರ ಪ್ರಾಂಶುಪಾಲ ರವಿ ದಳವಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಸಾಪ ತಾಲೂಕು ಘಟಕ ನಿರಂತರವಾಗಿ ಕನ್ನಡ ಭಾಷಾ ಅಭಿವೃದ್ದಿಗೆ ಪೂರಕವಾದ ಕಧೆ, ಕಾವ್ಯ, ಭಾಷಾ ಜ್ಞಾನ ಕಮ್ಮಟ ಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. ಇಂದು ಕನ್ನಡ ಪದ ಸಂಪತ್ತು, ವಿಶೇಷ ಕಮ್ಮಟವನ್ನು ಕನ್ನಡ ಸಂಸ್ಕೃತಿ ಸೇವಾ ಭಾರತಿಯಿಂದ ಓಂಕಾರಪ್ರಿಯ ಅತ್ಯಂತ ವಿನೂತನ ರೀತಿಯಲ್ಲಿ ನಡೆಸಿಕೊಟ್ಟಿದ್ದಾರೆ ಎಂದು ತಿಳಿಸಿದರು.ತರಬೇತಿ ಅಧಿಕಾರಿ ಚಂದ್ರಶೇಖರ ವಿಭೂತಿ ಕಾರ್ಯಕ್ರಮ ಉದ್ಘಾಟಿಸಿದರು.

17ಕೆಟಿಆರ್.ಕೆ.04ಃ

ತರೀಕೆರೆಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಕನ್ನಡ ಪದ ಸಂಪತ್ತು 2441ನೇ ಉಪನ್ಯಾಸ ಮಾಲಿಕಾ ಕಮ್ಮಟದಲ್ಲಿ ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಅಧ್ಯಕ್ಷ ಓಂಕಾರಪ್ರಿಯ ಬಾಗೇಪಲ್ಲಿ, ತರಬೇತಿ ಸಂಸ್ಥೆ ಪ್ರಭಾರಿ ಪ್ರಾಂಶುಪಾಲ ರವಿದಳವಾಯಿ, ಸಾಹಿತಿ ಮನಸುಳಿ ಮೋಹನ್, ಕನ್ನಡಶ್ರೀ ಬಿ.ಎಸ್.ಭಗವಾನ್, ತರಬೇತಿ ಅಧಿಕಾರಿ ಚಂದ್ರಶೇಖರ ವಿಭೂತಿ ಮತ್ತಿತರರು ಭಾಗವಹಿಸಿದ್ದರು.