ಗಂಧನಹಳ್ಳಿ ಬಳಿಯ ಕಾವೇರಿ ನದಿಯಬಳಿ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಆಗಮಿಸಿ ರೈತರೊಡಗೂಡಿ ಸ್ಥಳಪರಿಶೀಲನೆ

ಕನ್ನಡಪ್ರಭ ವಾರ್ತೆ ಕೆ.ಆರ್.ನಗರಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಇತಿಹಾಸ ಪ್ರಸಿದ್ದ ಕಪ್ಪಡಿ ಕ್ಷೇತ್ರ ಮತ್ತು ಗಂಧನಹಳ್ಳಿ ಗ್ರಾಮವನ್ನು ಸಂಪರ್ಕ ಕಲ್ಪಿಸುವ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುವ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ತಾಲೂಕಿನ ಗಂಧನಹಳ್ಳಿ ಬಳಿಯ ಕಾವೇರಿ ನದಿಯಬಳಿ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಆಗಮಿಸಿ ರೈತರೊಡಗೂಡಿ ಸ್ಥಳಪರಿಶೀಲನೆ ನಡೆಸಿ ಅವರು ಮಾತನಾಡಿ. ಈಗಾಗಲೆ ಸೇತುವೆ ನಿರ್ಮಾಣಕ್ಕೆ 25 ಕೋಟಿ ರು. ಟೆಂಡರ್ ಮುಗಿದು ಅಗ್ರಿಮೆಂಟ್ ಆಗಿದ್ದು, ಅದಕ್ಕೆ ಬೇಕಾದ ಡಿಸೈನ್ ಮತ್ತು ಸರ್ವೆಕಾರ್ಯ ಮುಗಿದಿದ್ದು ಜಾಗವನ್ನು ವಶಕ್ಕೆ ಪಡೆದು ರೈತರ ಸಮ್ಮತಿ ಪಡೆದು ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.ಸೇತುವೆಯೊಂದಿಗೆ ಸಂಪರ್ಕ ರಸ್ತೆ, ನಾಲಾ ಸೇತುವೆ ಎಲ್ಲವನ್ನು ಮಾಡುವ ಮೂಲಕ ಜನತೆಯ ಸುಗಮಸಂಚಾರದೊಂದಿಗೆ ಶ್ರೀಕಪ್ಪಡಿ ಕ್ಷೇತ್ರ ಮತ್ತು ಈಭಾಗದ ಗ್ರಾಮಗಳ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದರು. ಸ್ಥಳದಲ್ಲಿ ಹಾಜರಿದ್ದ ರೈತರೊಂದಿಗೆ ಸಮಾಲೋಚನೆ ನಡೆಸಿದ ಶಾಸಕರು ಸೇತುವೆ ನಿರ್ಮಾಣದ ನೀಲನಕ್ಷೆ ಸೇತುವೆ ನಿರ್ಮಾಣಕ್ಕಾಗಿ ವಶಕ್ಕೆ ಪಡೆಯುವ ಜಮೀನು ಮತ್ತು ರಸ್ತೆಯನ್ನು ಪರಿಶೀಲಿಸಿದರಲ್ಲದೆ ಸೇತುವೆ ನಿರ್ಮಾಣ ಮಾಡುವುದರಿಂದ ಈ ಭಾಗ ಹೆಚ್ಚು ಅಭಿವೃದ್ದಿ ಹೊಂದುವುದಲ್ಲದೆ, ಜನತೆಗೆ ಹೆಚ್ಚು ಅನುಕೂಲವಾಗುವುದಲ್ಲದೆ ಜಾತ್ರಾ ಸಮಯ ಹಾಗೂ ಇತರೆ ಹಬ್ಬಹರಿದಿನಗಳ ಸಂದರ್ಭದಲ್ಲಿ ವಾಹನ ಸವಾರರು ಹಾಗೂ ಸರಕುಸಾಗಣೆದೊಂದಿಗೆ ಸಂಪರ್ಕಕ್ಕೆದೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದಂತಾಗುತ್ತದೆ ಎಂದರು.ಅವಳಿ ತಾಲೂಕಿನ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಹತ್ತು ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡು ಜನತೆಗೆ ಮೂಲಭೂತ ಸೌಲಭ್ಯಗಳೊಂದಿಗೆ ಮಾದರಿಕ್ಷೇತ್ರವನ್ನಾಗಿ ಮಾಡಲು ಮುಂದಾಗಿದ್ದು ಅಂತಹ ಮಹತ್ವದ ಅಭಿವೃದ್ದಿ ಕಾಗಮಾರಿಗಳಲ್ಲಿ ಕಪ್ಪಡಿಬಳಿ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ ಕೂಡ ಒಂದಾಗಿದೆ ಎಂದರು.ಈ ಸಂಧರ್ಭದಲ್ಲಿ ಗಂಧನಹಳ್ಳಿಡೈರಿ ಅಧ್ಯಕ್ಷ ಗಾಂಧಿ ಶಿವಣ್ಣ, ಡೈರಿ ಸಿಇಒ ಜಿ.ಕೆ. ಮಹದೇವ್, ಮುಖಂಡ ಯೋಗೇಶ್, ಜಿಪಂ ಮಾಜಿ ಸದಸ್ಯ ಜಿ.ಆರ್. ರಾಮೇಗೌಡ, ಗ್ರಾಮದ ದೊಡ್ಡಯಜಮಾನ ಜಿ.ಎನ್. ರಘು, ಜಿ.ಎಸ್. ವೆಂಕಟೇಶ್, ಜಿ.ಆರ್. ಸತೀಶ್, ಬಲರಾಂ, ಕಿಟ್ಟಿ, ಕೆಂಪರಾಜು, ಕೆಂಪೇಗೌಡ, ಸತೀಶ್, ಮಹದೇವ, ಸ್ವಾಮಿಗೌಡ, ಪ್ರೇಮಮ್ಮಶಿವಣ್ಣ, ಕೆಆರ್‌ಡಿಸಿಎಲ್ ಹಿರಿಯ ಎಂಜಿನಿಯರ್ ಬಿ.ಎಸ್. ಪ್ರಮೀತ್, ಇಇ ಎಸ್.ಬಿ. ರಾಜು, ಎಂ.ಎನ್. ಲೋಕೇಶ್, ಕರಿಬಸಪ್ಪ, ನೀರಾವರಿ ಇಲಾಖೆ ಇಇ ಕುಶುಕುಮಾರ್, ಎಇಇ ಅಯಾಜ್‌ಪಾಷ, ಲೋಕೋಪಯೋಗಿ ಇಲಾಖೆ ಎಇಇ ಜಿ.ಕೆ. ಸಿದ್ದೇಶ್ವರಪ್ರಸಾದ್, ತಹಸೀಲ್ದಾರ್ ಜಿ. ಸುರೇಂದ್ರಕುಮಾರ್ ಇದ್ದರು.--------------