ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡಸ್ಟೇರಿಂಗ್ ರಾಡ್ ಕಟ್ ಆಗಿದ್ದರ ಪರಿಣಾಮ ನಿಯಂತ್ರಣ ಕಳೆದುಕೊಂಡ ಸಾರಿಗೆ ಬಸ್ ರಸ್ತೆ ಪಕ್ಕದ ಜಮೀನಿಗೆ ನುಗ್ಗಿರುವ ಘಟನೆ ನೀರಲಕೇರಿ ಗ್ರಾಮದ ಹತ್ತಿರ ಸಂಭವಿಸಿದೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾಗಲಕೋಟೆಯಿಂದ ಗುಳೇದಗುಡ್ಡ ಕಡೆ ಬರುತ್ತಿದ್ದ ಗುಳೇದಗುಡ್ಢ ಘಟಕದ ಬಸ್ ಸ್ಟೇರಿಂಗ್ ರಾಡ್ ಕಟ್ ಆಗಿದ್ದರಿಂದ ಬಸ್ ಸ್ಕೀಡ್ ಆಗಿದೆ. ಬಸ್ ಸ್ಕಿಡ್ ಆಗಿದ್ದನ್ನು ನೋಡಿ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸ್ಟೇರಿಂಗ್ ರಾಡ್ ಕಟ್ ಆಗಿದ್ದರ ಪರಿಣಾಮ ನಿಯಂತ್ರಣ ಕಳೆದುಕೊಂಡ ಸಾರಿಗೆ ಬಸ್ ರಸ್ತೆ ಪಕ್ಕದ ಜಮೀನಿಗೆ ನುಗ್ಗಿರುವ ಘಟನೆ ನೀರಲಕೇರಿ ಗ್ರಾಮದ ಹತ್ತಿರ ಸಂಭವಿಸಿದೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾಗಲಕೋಟೆಯಿಂದ ಗುಳೇದಗುಡ್ಡ ಕಡೆ ಬರುತ್ತಿದ್ದ ಗುಳೇದಗುಡ್ಢ ಘಟಕದ ಬಸ್ ಸ್ಟೇರಿಂಗ್ ರಾಡ್ ಕಟ್ ಆಗಿದ್ದರಿಂದ ಬಸ್ ಸ್ಕೀಡ್ ಆಗಿದೆ. ಬಸ್ ಸ್ಕಿಡ್ ಆಗಿದ್ದನ್ನು ನೋಡಿ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದರು. ಬಸ್ಸಿನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಬಸ್ ಜಮೀನಿಗೆ ನುಗ್ಗಿದ್ದರಿಂದ ಚಲಿಸದೇ ಅಲ್ಲಿಯೇ ನಿಂತಿದ್ದರಿಂದ ಅಪಾಯ ತಪ್ಪಿದೆ.ನೀರಲಕೇರಿ ಗ್ರಾಮದ ರಸ್ತೆಯಲ್ಲಿ ಸಾಕಷ್ಟು ತಗ್ಗು ಗುಂಡಿಗಳು ಬಿದ್ದಿದ್ದು, ಮಳೆಯಾದ ಪರಿಣಾಮ ರಸ್ತೆ ಮತ್ತಷ್ಟು ಹಾಳಾಗಿದೆ. ಹೀಗಾಗಿ ತಗ್ಗುಗಳಲ್ಲಿ ಸಂಚರಿಸಿದ ಪರಿಣಾಮ ಸ್ಟೇರಿಂಗ್ ಕಟ್ ಆಗಿದೆ ಎನ್ನಲಾಗಿದೆ.