ನಾಯಕತ್ವ ಗುಣ ಬೆಳೆಸಿಕೊಳ್ಳಲು ಶಿಬಿರ ಸಹಕಾರಿ-ಗೌಡರ

| Published : Jun 14 2024, 01:02 AM IST

ಸಾರಾಂಶ

ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಯಾಗಿ ಬೆಳೆಯಲು ಇಂತಹ ಶಿಬಿರಗಳು ಸಹಕಾರಿ ಆಗಲಿವೆ ಎಂದು ಪ್ರಾಚಾರ್ಯ ಡಾ. ಎಸ್. ಪಿ. ಗೌಡರ ಹೇಳಿದರು.

ಹಿರೇಕೆರೂರು: ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಯಾಗಿ ಬೆಳೆಯಲು ಇಂತಹ ಶಿಬಿರಗಳು ಸಹಕಾರಿ ಆಗಲಿವೆ ಎಂದು ಪ್ರಾಚಾರ್ಯ ಡಾ. ಎಸ್. ಪಿ. ಗೌಡರ ಹೇಳಿದರು. ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯು ಆಯೋಜಿಸಿದ್ದ ಜಿಲ್ಲಾ ಮಟ್ಟದ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳ ರಾಜ್ಯ ಪುರಸ್ಕಾರ ಪೂರ್ವ ಸಿದ್ಧತಾ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿ ಕಲಿಕೆಯ ಮೂಲಕ ಉತ್ತಮ ಶಿಕ್ಷಣ, ಸಂಸ್ಕಾರ, ಆರೋಗ್ಯವನ್ನು ನಾವು ಪಡೆದುಕೊಂಡಿದ್ದೆ ಆದಲ್ಲಿ ಪರಿಪೂರ್ಣ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಇಂದಿನ ಸ್ಪರ್ಧಾತ್ಮಕ ಬದುಕಿನ ಪ್ರತಿ ಹಂತದಲ್ಲೂ ಪರೀಕ್ಷೆಗಳನ್ನು ಎದುರಿಸುತ್ತಿದ್ದೇವೆ. ಎಲ್ಲಾ ಪರೀಕ್ಷೆಗಳಲ್ಲೂ ಯಶಸ್ಸು ಕಾಣಲು ಉತ್ತಮ ತಯಾರಿ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮ ಕುರಿತು ಜಿಲ್ಲಾ ತರಬೇತಿ ಆಯುಕ್ತರಾದ ಎಂ.ಆರ್. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಿಬಿರದ ಸಂಪನ್ಮೂಲ ವ್ಯಕ್ತಿ ರಾಜೇಶ್ ಅವಲಕ್ಕಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಿಕರಾದ ಮಲ್ಲೇಶಪ್ಪ ಕೆ.ಟಿ. ತಾಲೂಕು ಕಾರ್ಯದರ್ಶಿ ಎಂ.ಎಚ್. ಕಡೇಮನಿ, ಕಾಲೇಜಿನ ಐ.ಕ್ಯೂ ಎ.ಸಿ ಸಂಚಾಲಕ ನವೀನ. ಎಂ. ಕಾಲೇಜಿನ ರೋವರ್ಸ್ ಸಂಚಾಲಕ ರಾಮಚಂದ್ರಪ್ಪ ಬಿ.ಎಂ.,ರೇಂಜರ್ಸ್ ಸಂಚಾಲಕಿ ಸುಮಲತಾ ಬಿ. ಎನ್., ವಿಘ್ನೇಶ್ ಟಿ.ಕೆ. ಮೊದಲಾದವರು ಉಪಸ್ಥಿತರಿದ್ದರು. ರಾಮಚಂದ್ರಪ್ಪ ಬಿ.ಎಂ. ಸ್ವಾಗತಿಸಿ, ಸುಮಲತಾ ಬಿ.ಎನ್. ವಂದಿಸಿದರು.