ಸಾರಾಂಶ
ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಸ್ವಾಮಿಗೌಡನ ಪುತ್ರ ಮನುಕುಮಾರ್ [30] ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊರ್ವ ಸಾಲಿಗ್ರಾಮ ತಾಲೂಕಿನ ಹಳೆಯೂರು ಗ್ರಾಮದ ಸ್ವಾಮಿಗೌಡನ ಪುತ್ರ ಹೇಮಂತ್ [25] ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ಮೃತಪಟ್ಟು, ಮತ್ತೊರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಬಿ.ಎಂ. ರಸ್ತೆಯ ಕುಂದನಹಳ್ಳಿ ಪೆಟ್ರೋಲ್‌ಬಂಕ್‌ಸಮೀಪ ಜರುಗಿದೆ.ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಸ್ವಾಮಿಗೌಡನ ಪುತ್ರ ಮನುಕುಮಾರ್ [30] ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊರ್ವ ಸಾಲಿಗ್ರಾಮ ತಾಲೂಕಿನ ಹಳೆಯೂರು ಗ್ರಾಮದ ಸ್ವಾಮಿಗೌಡನ ಪುತ್ರ ಹೇಮಂತ್ [25] ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕುಶಾಲನಗರ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.ಆಸ್ಪತ್ರೆ ಮುಂದೆ ನಿಂತಿದ್ದ ಕಾರಿಗೆ ಬೆಂಕಿ
ಅಪಘಾತವಾದ ಕೂಡಲೇ ಅದೇ ಕಾರಿನಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಯಿತು. ಚಿಕಿತ್ಸೆ ನೀಡಿದರೂ ಸಹ ಆತ ಮೃತಪಟ್ಟನು.ನಂತರ ಕಾರನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದರಾದರೂ ಕಾರು ಸ್ಟಾರ್ಟ್ ಆಗಲಿಲ್ಲ, ಕಾರು ಆಸ್ಪತ್ರೆ ಆವರಣದಲ್ಲೆ ಬಿಟ್ಟು ಹೋಗಲಾಯಿತು. ಮಂಗಳವಾರ ರಾತ್ರಿ ಬೆಂಕಿ ಬಿದ್ದು ಸಂಪೂರ್ಣ ಸುಟ್ಟುಹೋಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಘಟನೆಯ ಸಂಬಂಧ ಕೇಸು ದಾಖಲಾಗಿದ್ದು, ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಕರು ಬೆಂಕಿ ಹಚ್ಚಿದರೆ ಅಥವಾ ಇನ್ಯಾವುದೇ ಕಾರಣದಿಂದ ಬೆಂಕಿ ಕಾರಿಗೆ ಬಿದ್ದಿದೆ ಎಂಬ ಬಗ್ಗೆ ತನಿಖೆ ಪ್ರಗತಿ ಹಂತದಲ್ಲಿ ಇದೆ ಎಂದು ಸಿಪಿಐ ತಿಳಿಸಿದ್ದಾರೆ.ಕಗ್ಗುಂಡಿ ಗ್ರಾಮದ ಸರೋಜಮ್ಮ ದೂರಿ ನೀಡಿದ್ದಾರೆ.