ಸಾರಾಂಶ
ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ 8 ಎಕರೆ 27 ಗುಂಟೆ ಸ್ಮಶಾನ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಈಗ ಬೆಳವಡಿ ಗ್ರಾಮದ 1 ಎಕರೆ 14 ಗುಂಟೆ ಸ್ಮಶಾನ ಜಾಗದ ಮೇಲೂ ವಕ್ಫ್ ಆಸ್ತಿಯಾಗಿರುವುದು ತಿಳಿದುಬಂದಿದೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ತಾಲೂಕಿನ ಸಂಗೊಳ್ಳಿ ಗ್ರಾಮದ 8 ಎಕರೆ 27 ಗುಂಟೆ ಸ್ಮಶಾನ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಈಗ ಬೆಳವಡಿ ಗ್ರಾಮದ 1 ಎಕರೆ 14 ಗುಂಟೆ ಸ್ಮಶಾನ ಜಾಗದ ಮೇಲೂ ವಕ್ಫ್ ಆಸ್ತಿಯಾಗಿರುವುದು ತಿಳಿದುಬಂದಿದೆ.ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಮಹಾರುದ್ರಪ್ಪ ನೆಲ್ಲಿಗಣಿ, ಗ್ರಾಮದ ಸಾರ್ವಜನಿಕರ ಸ್ಮಶಾನ ಭೂಮಿ ಆಸ್ತಿ ಕಬಳಿಸಲು ಯತ್ನಿಸುತ್ತಿರುವ ವಕ್ಪ್ ವಿರುದ್ಧ ಗ್ರಾಮಸ್ಥರು ಗಂಭೀರವಾಗಿ ಪರಿಗಣಿಸಿದ್ದೇವೆ. ಗ್ರಾಮದ ಓರ್ವ ರೈತನ ಜಮೀನು ಪಹಣಿಯಲ್ಲೂ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಕೂಡಲೇ ರದ್ದುಪಡಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.