ಉಗ್ರರ ಸಂಹಾರಕ್ಕೆ ಕೇಂದ್ರ ದಿಟ್ಟ ಹೆಜ್ಜೆ ಇಟ್ಟಿದೆ

| Published : May 14 2025, 01:58 AM IST

ಸಾರಾಂಶ

ಪಾಕಿಸ್ತಾನ ತನ್ನ ನರಿ ಬುದ್ಧಿ ಪ್ರದರ್ಶನ ಮಾಡಿದೆ ಎಂದು ಜರಿದ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ

ಕನ್ನಡಪ್ರಭ ವಾರ್ತೆ ಮುಧೋಳ

ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳನ್ನು ಸಂಹಾರ ಮಾಡಲು ಕೇಂದ್ರ ಸರ್ಕಾರ ದಿಟ್ಟಹೆಜ್ಜೆ ಇಟ್ಟಿದೆ. ದೇಶದ ಯೋಧರು ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳನ್ನು ಮತ್ತು ಅವರ ಅಡಗು ತಾಣಗಳನ್ನು ದ್ವಂಸ ಮಾಡಿದೆ ಎಂದು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.

ಬಿಜೆಪಿ ಗ್ರಾಮೀಣ ಮತ್ತು ನಗರ ಮಂಡಲದ ವತಿಯಿಂದ ಮಂಗಳವಾರ ನಗರದ ದತ್ತ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದ ಮಹಿಳಾ ಸೇನಾಧಿಕಾರಿಗಳು ದೇಶದ ಮತ್ತು ರಾಷ್ಟ್ರದ ರಕ್ಷಣೆಗಾಗಿ ನಿರಂತರ ಹೋರಾಟ ಮಾಡಿದ್ದಾರೆ. ಯುದ್ಧ ವಿರಾಮ ಘೋಷಣೆ ಮಾಡಿದಾಗ್ಯೂ ಪಾಪಿ ಪಾಕಿಸ್ತಾನ ತನ್ನ ನರಿ ಬುದ್ಧಿ ಪ್ರದರ್ಶನ ಮಾಡಿ, ಇಡೀ ವಿಶ್ವಕ್ಕೆ ಪಾಕಿಸ್ತಾನ ಏನು ಮತ್ತು ಎಂತು ಎಂಬುದನ್ನು ತಿಳಿಸಿ, ಪಾಕಿಸ್ತಾನ ವಿಶ್ವಾಸಿಕರಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಯುದ್ಧದ ಬಗ್ಗೆ ಮತ್ತು ದೇಶದ ಪ್ರಧಾನಿ ಬಗ್ಗೆ ತಮ್ಮ ಮನಬಂದಂತೆ ಮಾತನಾಡಿ ಅಪಪ್ರಚಾರ ಮಾಡುತ್ತಿರುವುದು ಅವರ ಯೋಗ್ಯತೆ ತಿಳಿಸಿಕೊಟ್ಟಿದೆ ಎಂದು ಹೇಳಿದರು.ಕೇಂದ್ರ ಸರ್ಕಾರ ಈಗ ಜನಗಣತಿ ಮತ್ತು ಜಾತಿಗಣತಿ ಸಮೀಕ್ಷೆ ಮಾಡುವ ಉದ್ದೇಶ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ದೊರೆಯಲಿದೆ ಎಂದರು.

ತಿರಂಗಾ ಯಾತ್ರೆ ಇದೊಂದು ಪಕ್ಷಾತೀತ, ಜಾತ್ಯಾತೀತವಾಗಿದ್ದು, ಎಲ್ಲ ಸಂಘಟನೆಯವರು, ಮಾಜಿ ಯೋಧರು, ಮಹಿಳೆಯರು, ಬುದ್ಧಿ ಜೀವಿಗಳು, ನಿವೃತ್ತ ನೌಕರರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ದೇಶ ಭಕ್ತರು ಪ್ರತಿಯೊಬ್ಬರು ಭಾಗವಹಿಸಿ ದೇಶಾಭಿಮಾನ ತೋರಿಸಬೇಕು. ದೇಶಕ್ಕಾಗಿ ಹೋರಾಡುತ್ತಿರುವ ಯೋಧರಿಗೆ ಬೆಂಬಲ ವ್ಯಕ್ತಪಡಿಸಿ, ಅಭಿನಂದಿಸಬೇಕು. ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು. ರಕ್ಷಣಾ ಇಲಾಖೆಗೆ ತಮ್ಮ ಕೈಲಾದ ಮಟ್ಟಿಗೆ ಧನ ಸಹಾಯ ಮಾಡಬೇಕು ಎಂದು ಹೇಳಿದರು.

ಈ ವೇಳೆ ಬಿಜೆಪಿ ಮುಖಂಡರಾದ ಕೆ.ಆರ್.ಮಾಚಪ್ಪನವರ, ಆರ್.ಟಿ.ಪಾಟೀಲ, ಕಲ್ಲಪ್ಪ ಸಬರದ, ಶಿವನಗೌಡ ನಾಡಗೌಡ, ಅನಂತ ಘೋರ್ಪಡೆ, ಲಕ್ಷ್ಮಣ ಚಿನ್ನಣ್ಣವರ, ಸದಾಶಿವ ಇಟಕನ್ನವರ, ಧರೆಪ್ಪ ಸಾಂಗ್ಲಿಕರ, ಸಂಗಣ್ಣ ಕಾತರಕಿ, ಕೆ.ಎಸ್.ಹಿರೇಮಠ, ಹಣಮಂತ ತುಳಸಿಗೇರಿ, ರಾಜು ಯಡಹಳ್ಳಿ, ವಿವೇಕಾನಂದ ಪಾಟೀಲ, ಶ್ರೀಶೈಲ ಚಿನ್ನಣ್ಣವರ, ಅರುಣ ಕಾರಜೋಳ, ನಾಗಪ್ಪ ಅಂಬಿ, ಶ್ರೀಕಾಂತ ಗುಜ್ಜನ್ನವರ, ಡಾ.ರವಿ ನಂದಗಾಂವ, ಗುರುಪಾದ ಕುಳಲಿ, ವನಜಾಕ್ಷೀ ಮಂಟೂರ, ಸುಭೇದಾ ಮಾನೆ ಸೇರಿದಂತೆ ಉಪಸ್ಥಿತರಿದ್ದರು.

----------ತಿರಂಗಾ ಯಾತ್ರೆ ಇದೊಂದು ಪಕ್ಷಾತೀತ, ಜಾತ್ಯಾತೀತವಾಗಿದ್ದು, ಎಲ್ಲ ಸಂಘಟನೆಯವರು, ಮಾಜಿ ಯೋಧರು, ಮಹಿಳೆಯರು, ಬುದ್ಧಿ ಜೀವಿಗಳು, ನಿವೃತ್ತ ನೌಕರರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ದೇಶ ಭಕ್ತರು ಪ್ರತಿಯೊಬ್ಬರು ಭಾಗವಹಿಸಿ ದೇಶಾಭಿಮಾನ ತೋರಿಸಬೇಕು. ದೇಶಕ್ಕಾಗಿ ಹೋರಾಡುತ್ತಿರುವ ಯೋಧರಿಗೆ ಬೆಂಬಲ ವ್ಯಕ್ತಪಡಿಸಿ, ಅಭಿನಂದಿಸಬೇಕು.

- ಗೋವಿಂದ ಕಾರಜೋಳ, ಮಾಜಿ ಡಿಸಿಎಂ, ಸಂಸದ