ಕನ್ನಡ ಭಾಷೆಗಿರುವ ಸವಾಲುಗಳ ಮೆಟ್ಟಿ ನಿಲ್ಲಬೇಕು

| Published : Dec 23 2024, 01:00 AM IST

ಸಾರಾಂಶ

ಕನ್ನಡ- ಕನ್ನಡಿಗ- ಕರ್ನಾಟಕ ಎಂಬುದೇ ನಮ್ಮೆಲ್ಲರ ಅಸ್ಮಿತೆ. ಕನ್ನಡ ಭಾಷೆಗೆ ತಾಯಿಯಷ್ಟೇ ಸ್ಥಾನಮಾನವಿದೆ. ತಾಯಿಯನ್ನು ಎಷ್ಟು ಪ್ರೀತಿ ಮಾಡುತ್ತೇವೆಯೋ ಅಷ್ಟೇ ಪ್ರೀತಿಯನ್ನು ಕನ್ನಡದ ಮೇಲೂ ತೋರಿಸಬೇಕು. ಪ್ರಪಂಚದ ಅತ್ಯಂತ ಸುಂದರ ಭಾಷೆಗಳಲ್ಲಿ ಕನ್ನಡವು ಒಂದು ಎಂದು ಸಂಪನ್ಮೂಲ ವ್ಯಕ್ತಿ ಡಾ. ವಿ.ಎಚ್. ಅಜೇಯಕುಮಾರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕನ್ನಡ ನಾಡು-ನುಡಿ ಉಪನ್ಯಾಸದಲ್ಲಿ ಡಾ. ವಿ.ಎಚ್. ಅಜೇಯಕುಮಾರ ಸಲಹೆ । ಎಆರ್‌ಎಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಕನ್ನಡ- ಕನ್ನಡಿಗ- ಕರ್ನಾಟಕ ಎಂಬುದೇ ನಮ್ಮೆಲ್ಲರ ಅಸ್ಮಿತೆ. ಕನ್ನಡ ಭಾಷೆಗೆ ತಾಯಿಯಷ್ಟೇ ಸ್ಥಾನಮಾನವಿದೆ. ತಾಯಿಯನ್ನು ಎಷ್ಟು ಪ್ರೀತಿ ಮಾಡುತ್ತೇವೆಯೋ ಅಷ್ಟೇ ಪ್ರೀತಿಯನ್ನು ಕನ್ನಡದ ಮೇಲೂ ತೋರಿಸಬೇಕು. ಪ್ರಪಂಚದ ಅತ್ಯಂತ ಸುಂದರ ಭಾಷೆಗಳಲ್ಲಿ ಕನ್ನಡವು ಒಂದು ಎಂದು ಸಂಪನ್ಮೂಲ ವ್ಯಕ್ತಿ ಡಾ. ವಿ.ಎಚ್. ಅಜೇಯಕುಮಾರ ಹೇಳಿದರು.

ನಗರದ ಎಆರ್‌ಎಂ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ, ಐಕ್ಯೂಎಸಿ, ಬೇರು ಚಿಗುರು ಕನ್ನಡ ಸಾಹಿತ್ಯ ಸಂಶೋಧನೆ ವಿಚಾರ ವೇದಿಕೆಯಿಂದ ಶನಿವಾರ ಆಯೋಜಿಸಿದ್ದ ಕನ್ನಡ ನಾಡು-ನುಡಿ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಕ್ಕೆ ಸಾವಿಲ್ಲ, ಸವಾಲುಗಳಿವೆ. ಈ ಸವಾಲುಗಳನ್ನು ಕನ್ನಡಿಗರು ದಿಟ್ಟತನದಿಂದ ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಕನ್ನಡಕ್ಕೆ ಇರುವ ಸವಾಲುಗಳಲ್ಲಿ ಹಿಂದಿ ಹೇರಿಕೆ, ಸಂಸ್ಕೃತ ಹೇರಿಕೆಗಳು ರಾಜಕೀಯ ಹಿತಾಸಕ್ತಿಯ ಉದ್ದೇಶ ಹೊಂದಿವೆ. ಇದನ್ನು ಧಿಕ್ಕರಿಸುವ ಕೆಲಸ ಕನ್ನಡಿಗರಿಂದ ಆಗಬೇಕಾಗಿದೆ ಎಂದರು.

ಮಾತೃಭಾಷೆಯಲ್ಲಿ ಶಿಕ್ಷಣ ಕಲಿತಾಗ ಮಾತ್ರ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ. ಕರ್ನಾಟಕದ ಭಾಷೆಯಲ್ಲಿ ಮಧ್ಯಕರ್ನಾಟಕ ಭಾಷೆ ತುಂಬಾ ಶಕ್ತಿಯುತವಾದ ಭಾಷೆಯಾಗಿದೆ. ಈ ಭಾಗಕ್ಕೆ ತೆಲುಗು, ತಮಿಳು, ಮಲೆಯಾಳಂ, ಮರಾಠಿ ಮೊದಲಾದ ಭಾಷೆಯ ಪ್ರಭಾವಗಳಿಲ್ಲ. ನಾವು ಜಗತ್ತನ್ನು ಬೆಳೆಸುವ ಭಾಷೆಯನ್ನು ಆಡಬೇಕು. ಆದರೆ ಇವತ್ತಿನ ಯುವಪೀಳಿಗೆಯಲ್ಲಿ ಕನ್ನಡ ಉಳಿಸಿ, ಬೆಳೆಸಬೇಕೆಂಬ ಕಳಕಳಿ ಕಡಿಮೆಯಾಗುತ್ತಿದೆ. ಮಾತು ಜ್ಯೋತಿಯಾಗಬೇಕು. ಆದ್ದರಿಂದ ಎಲ್ಲರೂ ಕನ್ನಡ ಬಳಸಿ, ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಎಂ.ಡಿ. ಅಣ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ. ನಾವೆಲ್ಲರೂ ಕನ್ನಡಿಗರಾದ ಮೇಲೆ ಶುದ್ಧ ಕನ್ನಡ ಮಾತಾಡಬೇಕು ಮತ್ತು ಬರೆಯಬೇಕು. ಕನ್ನಡ ತನ್ನದೇ ಆದ ಇತಿಹಾಸ ಹೊಂದಿದೆ. ಅದನ್ನು ಎಲ್ಲರೂ ಸೇರಿ ಉಳಿಸಿಕೊಂಡು ಬೆಳೆಸುವ ಕಾರ್ಯಗಳು ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಿ.ಅಂಜಿನಪ್ಪ, ಕಾಡಜ್ಜಿ ಶಿವಪ್ಪ, ಡಾ.ಬಿ.ಸಿ.ರಾಕೇಶ, ಮೊಹಮ್ಮದ್ ರಿಯಾಜ್, ಟಿ.ಎನ್. ಮೌನೇಶ್ವರ, ಜಿ.ನಾಗರಾಜು, ಗಣೇಶ, ಗೀತ ಪಟೇಲ ಬೋಧಕೇತರರು, ವಿದ್ಯಾರ್ಥಿಗಳು ಇದ್ದರು.

- - - -22ಕೆಡಿವಿಜಿ31.ಜೆಪಿಜಿ:

ದಾವಣಗೆರೆಯ ಎಆರ್‌ಎಂ ಕಾಲೇಜಿನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮವನ್ನು ಡಾ. ವಿ.ಎಚ್. ಅಜೇಯಕುಮಾರ ಉದ್ಘಾಟಿಸಿದರು.