ತರೀಕೆರೆಮಕರ ಸಂಕ್ರಾಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ಪ್ರಥಮ ವರ್ಷದ ನೂತನ ರಥೋತ್ಸವ ಶ್ರದ್ದಾಭಕ್ತಿಯಿಂದ ಅದ್ದೂರಿಯಾಗಿ ಸಂಪನ್ನಗೊಂಡಿತು.

- ಗಣಹೋಮ, ದಶದಿಕ್ಪಾಲಕ ಸಹಿತ ರಥಾಂಗ ಹೋಮ, ಪುಣ್ಯಾಹುತಿ,

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕರ ಸಂಕ್ರಾಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ಪ್ರಥಮ ವರ್ಷದ ನೂತನ ರಥೋತ್ಸವ ಶ್ರದ್ದಾಭಕ್ತಿಯಿಂದ ಅದ್ದೂರಿಯಾಗಿ ಸಂಪನ್ನಗೊಂಡಿತು.ಬೆಳಿಗ್ಗೆ ನೂತನ ರಥಕ್ಕೆಶುದ್ದಿಪೂರ್ವಕ, ಗಂಗಾಪೂಜೆ, ಸ್ವಸ್ತಿ ಪುಣ್ಯಾಹವಾಚನ, ನಂದಿ ಸಮಾರಾಧನಾ ರಕ್ಷಾಬಂಧನ ಹಾಗೂ ಪರಿವಾರ ದೇವತಾ ಸಹಿತ ಪ್ರಧಾನ ಶ್ರೀ ಗುರು ರೇವಣಸಿದ್ದೇಶ್ವರ ಆರಾಧನಾ ಮತ್ತು ಗಣಹೋಮ, ದಶದಿಕ್ಪಾಲಕ ಸಹಿತ ರಥಾಂಗ ಹೋಮ, ಪುಣ್ಯಾಹುತಿ, ಬಲಿಸಮರ್ಪಣೆ ನೇರವೇರಿತು.

ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಶ್ರೀ ಗುರು ರೇವಣಸಿದ್ದೇಶ್ವರ ಭಜನ ಮಂಡಳಿಯಿಂದ ಹೊಸದುರ್ಗ ಕನಕ ಗುರು ಪೀಠ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿ ದಿವ್ಯ ಸಾನಿಧ್ಯದಲ್ಲಿ ಕಳಸಾರೋಹಣ ನೆರವೇರಿತು.

ನಂತರ ಸರ್ವಾಲಂಕೃತಗೊಂಡ ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ದಿವ್ಯ ರಥಾರೋಹಣವಾಯಿತು. ರಾಜ್ಯ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ದಿವ್ಯ ರಥಕ್ಕೆ ಚಾಲನೆ ನೀಡಿದರು. ಭಕ್ತ ಜನರು ಜಯಘೋಷಗಳೊಂದಿಗೆ ಶ್ರದ್ದಾ ಭಕ್ತಿಗಳಿಂದ ರಥ ಎಳೆದು ಸಂಭ್ರಮಿಸಿದರು.

ಶಾಸಕ ಜಿ.ಎಚ್.ಶ್ರೀನಿವಾಸ್, ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಅಧ್ಯಕ್ಷ ಟಿ.ಎಸ್.ರಮೇಶ್, ಶ್ರೀ ಗುರು ರೇವಣ ಸಿದ್ದೇಶ್ವರ ಕುರುಬರ ಸಮಾಜ ಪದಾದಿಕಾರಿಗಳು ಸದಸ್ಯರು ಭಕ್ತ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

14ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ಪ್ರಥಮ ವರ್ಷದ ನೂತನ ರಥೋತ್ಸವ ಶ್ರದ್ಧಾಭಕ್ತಿಯಿಂದ ಏರ್ಪಡಿಸಲಾಗಿತ್ತು.