ಸಾರಾಂಶ
ರಥೋತ್ಸವದಲ್ಲಿ ಡೋಲು, ಕರಡಿ ಮಜಲು, ಜಾಂಜ್ ಸೇರಿದಂತೆ ವಿವಿಧ ವಿವಿಧ ವಾಧ್ಯ ಮೇಳದೊಂದಿಗೆ ಹಾಗೂ ಸಹಸ್ರ ಭಕ್ತರ ಸಮೂಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು
ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ರಥೋತ್ಸವ ಶ್ರಾವಣ ಮಾಸದ ಕೊನೆಯ ಸೋಮವಾರದ ಸಂಜೆ ವಿವಿಧ ವಾಧ್ಯ ಮೇಳದೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಶ್ರೀಮಠದ ಆವರಣದಲ್ಲಿ ಸಂಜೆ 6 ಗಂಟೆಗೆ ಆರಂಭಗೊಂಡ ರಥೋತ್ಸವ ಸೊರಬದಮಠ ಗಲ್ಲಿವರೆಗೆ ತೆರಳಿ ಮರಳಿ ಶ್ರೀಮಠಕ್ಕೆ ಆಗಮಿಸಿತು. ಇದಕ್ಕೂ ಮೊದಲು ಶ್ರೀಮಠದ ಆವರಣದಿಂದ ತೆರಳಿದ್ದ ಪಲ್ಲಕ್ಕಿ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಬಮ್ಮಾಪುರ ಓಣಿಯ ಗುರುಸಿದ್ದೇಶ್ವರ ಕಲ್ಯಾಣಮಂಟಪ (ಓಲೆಮಠ)ಕ್ಕೆ ಹೋಗಿ ಬಂದ ನಂತರ ರಥೋತ್ಸವ ಚಾಲನೆ ನೀಡಲಾಯಿತು.ರಥೋತ್ಸವದಲ್ಲಿ ಡೋಲು, ಕರಡಿ ಮಜಲು, ಜಾಂಜ್ ಸೇರಿದಂತೆ ವಿವಿಧ ವಿವಿಧ ವಾಧ್ಯ ಮೇಳದೊಂದಿಗೆ ಹಾಗೂ ಸಹಸ್ರ ಭಕ್ತರ ಸಮೂಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಥೋತ್ಸವದ್ದಕ್ಕೂ ಗುರುಸಿದ್ದೇಶ್ವರ ಮಹಾರಾಜ ಕೀ ಜೈ, ಹರ ಹರ ಮಹಾದೇವ ಎಂದು ಜೈಕಾರಗಳನ್ನು ಭಕ್ತರ ಮೊಳಗಿಸಿದರು.
ರಥೋತ್ಸವ ನಂತರ ಮೂರುಸಾವಿರ ಮಠದ ಶ್ರೀಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ರಜತ ಸಿಂಹಾಸನಾಧೀಶರಾದರು.ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ತ ಶ್ರೀಗುರುಸಿದ್ದೇಶ್ವರ ಗದ್ದುಗೆಗೆ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ನೂರಾರು ಭಕ್ತರು ತಂಡೋಪತಂಡವಾಗಿ ಶ್ರೀಮಠಕ್ಕೆ ಆಗಮಿಸಿ ಕೃತು ಗದ್ದುಗೆ ದರ್ಶನ ಪಡೆದರು. ಮಧ್ಯಾಹ್ನ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಸಂಜೆ ನಡೆದ ರಥೋತ್ಸವದಲ್ಲಿ ಮುಖಂಡರಾದ ಸದಾನಂದ ಡಂಗನವರ, ಶಿವು ಮೆಣಸಿನಕಾಯಿ, ಮೋಹನ ಅಸುಂಡಿ, ಅರವಿಂದ ಕುಬಸದ, ಅಮರೇಶ ಹಿಪ್ಪರಗಿ, ಗುರು ಹಿರೇಮಠ, ಪ್ರಸಾದ ಹೊಂಬಳ, ಶಶಿಧರ ಕರವೀರಶೆಟ್ಟರ್, ಗುರುಸಿದ್ದಯ್ಯ, ರಾಜು ಕೋರಾಯ್ಯನಮಠ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.