ಆರೋಗ್ಯ ಕ್ಷೇತ್ರಕ್ಕೆ ಮೈಸೂರು ವೈದ್ಯಕೀಯ ಕಾಲೇಜಿನ ಕೊಡುಗೆ ವಿಶಿಷ್ಟ

| Published : Jul 24 2025, 12:56 AM IST

ಆರೋಗ್ಯ ಕ್ಷೇತ್ರಕ್ಕೆ ಮೈಸೂರು ವೈದ್ಯಕೀಯ ಕಾಲೇಜಿನ ಕೊಡುಗೆ ವಿಶಿಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ವೈದ್ಯಕೀಯ ಕಾಲೇಜಿಗೆ ಒಂದು ನೂರು ವರ್ಷಗಳನ್ನು ಪೂರೈಸಿದ ವೇಳೆ ಸರ್ಕಾರವು ಅರವತೈದು ಕೋಟಿ ರೂ. ವೆಚ್ಚದಲ್ಲಿ ಒಪಿಡಿ ಘಟಕಕ್ಕೆ ಅನುಮತಿ ನೀಡಿದೆ

ಫೋಟೋ - 20ಎಂವೈಎಸ್‌ 33ಕನ್ನಡಪ್ರಭ ವಾರ್ತೆ ಮೈಸೂರುದೇಶ ವಿದೇಶಗಳಿಗೆ ಉತ್ತಮ ವೈದ್ಯರುಗಳನ್ನು ನೀಡುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ಮೈಸೂರು ವೈದ್ಯಕೀಯ ಕಾಲೇಜು ನೀಡಿದೆ ಎಂದು ಕರ್ನಾಟಕ ವೃತ್ತದ ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಕೆ. ಪ್ರಕಾಶ್‌ ಶ್ಲಾಘಿಸಿದರು.ನಗರದ ಮೈಸೂರು ವೈದ್ಯಕೀಯ ಕಾಲೇಜಿನ ಕೌನ್ಸಿಲ್‌ ಸಭಾಂಗಣದಲ್ಲಿ 100 ವರ್ಷ ಪೂರೈಸಿದ ಕಾಲೇಜಿನ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂತಹ ಅಪೂರ್ವ ವೈದ್ಯಕೀಯ ಕಾಲೇಜಿನ ಕುರಿತಾದ ಅಂಚೆ ಚೀಟಿ ಬಿಡುಗಡೆಗೊಳಿಸಲು ಇಲಾಖೆಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.ಮೈಸೂರು ವೈದ್ಯಕೀಯ ಕಾಲೇಜಿಗೆ ಒಂದು ನೂರು ವರ್ಷಗಳನ್ನು ಪೂರೈಸಿದ ವೇಳೆ ಸರ್ಕಾರವು ಅರವತೈದು ಕೋಟಿ ರೂ. ವೆಚ್ಚದಲ್ಲಿ ಒಪಿಡಿ ಘಟಕಕ್ಕೆ ಅನುಮತಿ ನೀಡಿದೆ ಎಂದು ತಿಳಿಸಿದ ಮೈಸೂರು ವೈದ್ಯಕೀಯ ಕಾಲೇಜಿನ ನಿರ್ದೇಶಕಿ ದಾಕ್ಷಾಯಿಣಿ, ಅನುಮತಿ ನೀಡಿದ ಮುಖ್ಯಮಂತ್ರಿಗಳು ಮತ್ತು ಅಂಚೆ ಚೀಟಿಯನ್ನು ಹೊರ ತಂದ ಅಂಚೆ ಇಲಾಖೆಗೆ ಕೃತಜ್ಞತೆ ಸಲ್ಲಿಸಿದರು.ಎಂಎಂಸಿ ಮತ್ತು ಆರ್ಐನ ನೋಡಲ್ ಅಧಿಕಾರಿ ಡಾ.ಕೆ. ಪುರುಷೋತ್ತಮ್‌, ಕಾಲೇಜಿನ ಇತಿಹಾಸ ಮತ್ತು ಸಾಧನೆ ಕುರಿತು ಪರಿಚಿಯಿಸಿದರು.ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಶತಮಾನೋತ್ಸವ ಆಚರಣೆಯನ್ನು ಯಶಸ್ವಿಯಾಗಲು ಕಾರಣರಾದ ಹಾಲಿ ನಿರ್ದೇಶಕರ ಪಾತ್ರವನ್ನು ಪ್ರಶಂಸಿಸಿದರು.ಕರ್ನಾಟಕ ಅಂಚೆ ವೃತ್ತದ ಫಿಲಾಟೆಲಿ ವಿಭಾಗದ ಸಹಾಯಕ ನಿರ್ದೇಶಕಿ ಶಾಂತಲಾ ಭಟ್, ಮೈಸೂರು ಅಂಚೆ ವಿಭಾಗದ ಹಿರಿಯ ಅಧೀಕ್ಷ ಜಿ. ಹರೀಶ್, ಉಪ ಅಧೀಕ್ಷಕ ವಿ.ಎಲ್. ನವೀನ್, ಮೈಸೂರು ಪ್ರಧಾನ ಅಂಚೆ ಕಚೇರಿಯ ಹಿರಿಯ ಅಂಚೆಪಾಲಕ ಸೋಮಯ್ಯ, ಮೈಸೂರು ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಇದ್ದು. ಡಾ. ಶಶಿಧರ್‌ ಸ್ವಾಗತಿಸಿದರು. ಡಾ. ಪುರುಷೋತ್ತಮ ವಂದಿಸಿದರು.