ಜಗಳೂರು: ಸಾಂಬರು ಬಿದ್ದು ಮಗು ಸಾವು

| Published : Oct 01 2024, 01:16 AM IST

ಸಾರಾಂಶ

ಜಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಮೂರು ವರ್ಷದ ಮಗುವಿನ ಮೈ ಮೇಲೆ ಬಿಸಿಯಾದ ಸಾಂಬಾರು ಪಾತ್ರೆ ಉರುಳಿಬಿದ್ದು, ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿದೆ.

ಜಗಳೂರು: ಇಲ್ಲಿಗೆ ಸಮೀಪದ ಜಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಮೂರು ವರ್ಷದ ಮಗುವಿನ ಮೈ ಮೇಲೆ ಬಿಸಿಯಾದ ಸಾಂಬಾರು ಪಾತ್ರೆ ಉರುಳಿಬಿದ್ದು, ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿದೆ. ಮಿಥುನ್ ಮೃತಪಟ್ಟ ಮಗು. ಮನೆಯಲ್ಲಿ ನಾಲ್ಕು ಅಡಿ ಎತ್ತರದ ಕಟ್ಟೆಯ ಮೇಲೆ ಸ್ಟೌನಲ್ಲಿ ಕುದಿಯುತ್ತಿದ್ದ ಸಾರಿನ ಪಾತ್ರೆಯನ್ನು ಎಳೆದಿದ್ದಾನೆ. ಪಾತ್ರೆಯಲ್ಲಿದ್ದ ಕುದಿಯುವ ಸಾಂಬರು ಮೇ ಮೇಲೆ ಬಿದ್ದು ತೀವ್ರ ಸುಟ್ಟ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದ್ದು, ಶನಿವಾರ ಜಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

- - - -29ಜೆ.ಜಿ.ಎಲ್.2: ಮಿಥುನ್.